More

  ಪ್ರತಿದಿನವೂ ಚಿಕನ್ ತಿನ್ನಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

  ಚಿಕನ್ ಬಹುತೇಕರಿಗೆ ನೆಚ್ಚಿನ ಆಹಾರ. ರುಚಿ ಮಾತ್ರವಲ್ಲದೆ, ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಹ ದೊರೆಯುತ್ತವೆ. ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳನ್ನು ಚಿಕನ್​ ಒದಗಿಸುತ್ತದೆ. ಚಿಕನ್​ನಲ್ಲಿ ಹಲವು ವೆರೈಟಿಗಳನ್ನು ಮಾಡಬಹುದು. ಚಿಕನ್ ಫ್ರೈ, ಚಿಕನ್ ಬಿರಿಯಾನಿ, ಚಿಕನ್ ಕರಿ ಹಾಗೂ ಚಿಕನ್ 65 ಹೀಗೆ ಹಲವು ಬಗೆಯಲ್ಲಿ ಚಿಕನ್ ಖಾದ್ಯವನ್ನು ಮಾಡಿ ತಿನ್ನಬಹುದು. ಕೆಲವರು ಚಿಕನ್​ಗೆ ಯಾವ ರೀತಿ ಅಡಿಕ್ಟ್​ ಆಗಿರುತ್ತಾರೆ ಅಂದರೆ, ಒಂದು ದಿನವೂ ಚಿಕನ್​ ತಿನ್ನದೇ ಇರುವುದಿಲ್ಲ. ಆದರೆ, ದಿನನಿತ್ಯ ಚಿಕನ್ ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

  ಹೆಚ್ಚು ಚಿಕನ್ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮೇಲಾಗಿ ಹೃದ್ರೋಗಗಳೂ ಬರುತ್ತವೆ. ನಮ್ಮ ದೇಹಕ್ಕೆ ದಿನಕ್ಕೆ ಕೇವಲ 35 ರಷ್ಟು ಪ್ರೊಟೀನ್‌ಗಳು ಬೇಕಾಗುತ್ತದೆ. ಅದಕ್ಕಿಂತ ಹೆಚ್ಚು ಪ್ರೊಟೀನ್ ಸೇವಿಸಿದರೆ ನಮ್ಮ ದೇಹವು ಅದನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಬಾದಿಸುತ್ತವೆ.

  ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ ಕೆಂಪು ಮಾಂಸದ ರೀತಿಯಲ್ಲಿಯೇ ಕೋಳಿ LDL ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಇದು ನಿಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಕೋಳಿಮಾಂಸವನ್ನು ಸೇವಿಸುತ್ತಿದ್ದರೆ ನಿಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಬಹುದು.

  ಯಾರಿಗಾದರೂ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಆಹಾರ ಮತ್ತು ಪಾನೀಯವನ್ನು ಎಚ್ಚರಿಕೆಯಿಂದ ಆರಿಸಬೇಕು. ಸ್ಯಾಚುರೇಟೆಡ್ ಕೊಬ್ಬು ಅಥವಾ ಟ್ರಾನ್ಸ್-ಕೊಬ್ಬಿನ ಹೆಚ್ಚಿನ ಆಹಾರವನ್ನು ಸೇವಿಸಬಾರದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಕೊಬ್ಬುಗಳನ್ನು ಡೈರಿ ಉತ್ಪನ್ನಗಳು, ಕೆಂಪು ಮಾಂಸ ಮತ್ತು ಕೋಳಿ ಚರ್ಮದಂತಹ ನೈಸರ್ಗಿಕ ಆಹಾರಗಳಲ್ಲಿ ಹೆಚ್ಚಾಗಿ ಕಾಣಬಹುದು.

  ಇನ್ನು ಕೋಳಿಯ ಕೆಲವು ಪ್ರಭೇದಗಳು ಮೂತ್ರನಾಳದ ಸೋಂಕುಗಳು ಅಥವಾ ಯುಟಿಐಗಳಿಗೆ ಸಂಬಂಧಿಸಿರಬಹುದು. ಅಮೆರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿಯ ಜರ್ನಲ್ mBio ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋಳಿ, ಯುಟಿಐ ಸೇರಿದಂತೆ ವಿವಿಧ ಸೋಂಕುಗಳಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ನಿಯಮಿತ ಚಿಕನ್​ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.

  ಇನ್ನೂ ಕೋಳಿಯನ್ನು ಸರಿಯಾಗಿ ಬೇಯಿಸದಿರುವುದು ತುಂಬಾ ಅಪಾಯಕಾರಿ. ಇದರಲ್ಲಿ ಸಾಲ್ಮೊನೆಲ್ಲಾ ಅಥವಾ ಕ್ಯಾಂಪಿಲೋಬ್ಯಾಕ್ಟರ್​ನಂತಹ ಬ್ಯಾಕ್ಟೀರಿಯಾಗಳು ಹೊರಬರಬಹುದು. ಈ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಏಕೆಂದರೆ ಇವು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇಂತಹ ಪದಾರ್ಥಗಳನ್ನು ತಿಂದರೆ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಬೇಕು. (ಏಜೆನ್ಸೀಸ್​)

  ಹೈದರಾಬಾದ್​ 3ನೇ ವ್ಯಕ್ತಿ… ನೋಡಬಾರದನ್ನು ನೋಡಿ ಚಂದನ್​ಗೆ ಎಚ್ಚರಿಸಿದ್ದೆ! ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆ

  ಪಾಕ್​ ವಿರುದ್ಧ ಗೆದ್ದರೂ ಕಳಪೆ ದಾಖಲೆ ಬರೆದ ಟೀಮ್​ ಇಂಡಿಯಾ! ಟಿ20 ಇತಿಹಾಸದಲ್ಲೇ ಇದು ಮೊದಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts