More

  ಪಾಕ್​ ವಿರುದ್ಧ ಗೆದ್ದರೂ ಕಳಪೆ ದಾಖಲೆ ಬರೆದ ಟೀಮ್​ ಇಂಡಿಯಾ! ಟಿ20 ಇತಿಹಾಸದಲ್ಲೇ ಇದು ಮೊದಲು

  ನ್ಯೂಯಾರ್ಕ್​: ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ಎರಡನೇ ಗೆಲುವು ದಾಖಲಿಸಿದೆ. ನ್ಯೂಯಾರ್ಕ್ ಮೈದಾನದಲ್ಲಿ ನಿನ್ನೆ (ಜೂನ್​ 09) ನಡೆದ ಪಾಕಿಸ್ತಾನ ವಿರುದ್ಧದ ದಾಯಾದಿ ಕದನದಲ್ಲಿ 6 ರನ್​ಗಳ ಅಂತರದಲ್ಲಿ ಭಾರತ ಸೂಪರ್ ಗೆಲುವು ಸಾಧಿಸುವ ಮೂಲಕ ಕಿರು ವಿಶ್ವಕಪ್​ ಬೇಟೆಯನ್ನು ಮುಂದುವರಿಸಿದೆ. ಆದರೆ, ಪಾಕ್​ ವಿರುದ್ಧ ಜಯಿಸಿದರೂ ಟೀಮ್​ ಇಂಡಿಯಾ ಕೆಟ್ಟ ದಾಖಲೆಯೊಂದನ್ನು ಬರೆದಿದೆ. ಭಾರತ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಕಳಪೆ ದಾಖಲೆಯನ್ನು ನಿರ್ಮಿಸಿದೆ.

  ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ 6 ರನ್​ಗಳಿಂದ ಗೆದ್ದಿದ್ದು ಗೊತ್ತೇ ಇದೆ. ಈ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾಗೆ ಪಾಕ್ ಬೌಲರ್​ಗಳು ಕಾಡಿದರು. ವೇಗಿಗಳಾದ ನಸೀಮ್ ಶಾ (3 ವಿಕೆಟ್), ಹ್ಯಾರಿಸ್ ರೌಫ್ (3) ಮತ್ತು ಅಮೀರ್ (2) ಮಳೆಯಿಂದಾಗಿ ಪಿಚ್‌ನ ನೆರವನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಇದರೊಂದಿಗೆ ಭಾರತ ಕೇವಲ 19 ಓವರ್‌ಗಳಲ್ಲಿ 119 ರನ್ ಗಳಿಸಿತು. ರಿಷಭ್​ ಪಂತ್ ಮಾತ್ರ 42 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇತರರು ಸಂಪೂರ್ಣ ವಿಫಲರಾದರು.

  ಇದಾದ ಬಳಿಕ 120 ರನ್​ಗಳ ಸಣ್ಣ ಗುರಿಯೊಂದಿಗೆ ಕಣಕ್ಕೆ ಇಳಿದ ಪಾಕಿಸ್ತಾನಕ್ಕೆ ಟೀಮ್​ ಇಂಡಿಯಾ ಬೌಲರ್​ಗಳು ದುಸ್ವಪ್ನವಾಗಿ ಕಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಯಾರ್ಕರ್‌ಗಳ ರಾಜ ಜಸ್ಪ್ರೀತ್ ಬುಮ್ರಾ, ತಮ್ಮ ಟ್ರೇಡ್‌ಮಾರ್ಕ್ ಬೌಲಿಂಗ್‌ನೊಂದಿಗೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿದರು. ಟೀಮ್​ ಇಂಡಿಯಾ ಬೌಲಿಂಗ್​ಗೆ ತತ್ತರಿಸಿದ ಪಾಕ್​, 7 ವಿಕೆಟ್ ನಷ್ಟಕ್ಕೆ 113 ರನ್​ಗಳಿಗೆ ಸೀಮಿತವಾಯಿತು. ಅಂತಿಮವಾಗಿ 6 ರನ್​ಗಳಿಂದ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬುಮ್ರಾ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 14 ರನ್ ನೀಡಿ 3 ನಿರ್ಣಾಯಕ ವಿಕೆಟ್ ಪಡೆದರು. ಹಾರ್ದಿಕ್​ ಪಾಂಡ್ಯ ಎರಡು ವಿಕೆಟ್ ಪಡೆದರು.

  ಇದೇ ವೇಳೆ ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಆಲೌಟ್​ ಆಗುವ ಮೂಲಕ ಟಿ20ಯಲ್ಲಿ ಕೆಟ್ಟ ದಾಖಲೆ ಬರೆದಿದೆ. ಟಿ20 ಮಾದರಿಯಲ್ಲಿ ಭಾರತ ಪಾಕ್ ವಿರುದ್ಧ ತನ್ನ 10 ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲು. ಪಾಕಿಸ್ತಾನದ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ನಿನ್ನೆಯ ಪಂದ್ಯದಲ್ಲಿ ಮಾತ್ರ ಆಲೌಟ್​ ಆಯಿತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಅತಿ ಕಡಿಮೆ ಸ್ಕೋರ್ ಎಂಬುದು ಗಮನಾರ್ಹ. 2016ರಲ್ಲಿ 79 ರನ್, 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 110/7, 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 118/8 ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಆಗಿತ್ತು. (ಏಜೆನ್ಸೀಸ್​)

  ಹೈದರಾಬಾದ್​ 3ನೇ ವ್ಯಕ್ತಿ… ನೋಡಬಾರದನ್ನು ನೋಡಿ ಚಂದನ್​ಗೆ ಎಚ್ಚರಿಸಿದ್ದೆ! ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆ

  ಟೀಮ್​ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿದ ಪಾಕಿಸ್ತಾನ! ರೋಹಿತ್​ ಪಡೆಗೆ ರೋಚಕ ಗೆಲುವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts