More

  ಹೈದರಾಬಾದ್​ 3ನೇ ವ್ಯಕ್ತಿ… ನೋಡಬಾರದನ್ನು ನೋಡಿ ಚಂದನ್​ಗೆ ಎಚ್ಚರಿಸಿದ್ದೆ! ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆ

  ಬೆಂಗಳೂರು: ಬಿಗ್​ಬಾಸ್​ ಜೋಡಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್​ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇಬ್ಬರು ಡಿವೋರ್ಸ್ ಆಗಲು ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಆದರೆ, ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಕೆಲವರು ನಟ ಸೃಜನ್​ ಲೋಕೇಶ್​ ಹೆಸರನ್ನು ತಳುಕು ಹಾಕುತ್ತಿದ್ದರೆ, ಇನ್ನು ಕೆಲವರು ಮಗು ಮಾಡಿಕೊಳ್ಳಲು ನಿವೇದಿತಾ ಒಪ್ಪಿಕೊಳ್ಳದಿದ್ದಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎನ್ನುತ್ತಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಮುನ್ನಡೆಯಲು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಚಂದನ್​ ಮತ್ತು ನಿವೇದಿತಾ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ಸ್ಫೋಟಕ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

  ಗ್ಯಾರಂಟಿ ನ್ಯೂಸ್​ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್​ ಸಂಬರಗಿ, ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವಿನ ಡಿವೋರ್ಸ್​ ವಿಚಾರದಲ್ಲಿ ನಾನು ಚಂದನ್​ ಶೆಟ್ಟಿ ಪರ ನಿಲ್ಲುತ್ತೇನೆ ಎಂದಿದ್ದಾರೆ. ಅಲ್ಲದೆ, ನಿವೇದಿತಾ ಕುರಿತಾದ ಕೆಲವೊಂದಿಷ್ಟು ವಿಚಾರಗಳನ್ನು ಕ್ಯಾಮೆರಾ ಮುಂದೆ ಬಹಿರಂಗಪಡಿಸಿದ್ದಾರೆ.

  ಚಂದನ್​ ಶೆಟ್ಟಿ ನನ್ನ ಆತ್ಮೀಯ ಗೆಳೆಯ, ಆತ ಓರ್ವ ಬಿಗ್​ಬಾಸ್​ ಸ್ಪರ್ಧಿ ಮತ್ತು ನಾವಿಬ್ಬರು ವಿದ್ಯಾರ್ಥಿ ವಿದ್ಯಾರ್ಥಿನಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಸಿನಿಮಾದ ನಾಯಕ ಚಂದನ್​ ಮತ್ತು ನನ್ನದು ಪೊಲೀಸ್​ ಪಾತ್ರ. ನಾವಿಬ್ಬರು ಒಟ್ಟಿಗೆ 15 ದಿನ ಶೂಟಿಂಗ್​ ಮಾಡಿದ್ದೇವೆ ಹಾಗೂ ಫೈಟಿಂಗ್​ ಮಾಡಿದ್ದೇವೆ. ಇದೆಲ್ಲದರ ನಡುವೆ ಇಂದು ಚಂದನ್​ಗೆ ಆಗಿರುವಂಥದ್ದು, ಆಘಾತಾನೋ, ನೋವೋ ಅಥವಾ ಗಂಡಸರ ಹಕ್ಕುಗಳಿಗೆ ನಾವು ಎದ್ದು ನಿಲ್ಲಬೇಕೋ? ಇದೆಲ್ಲವನ್ನು ಯೋಚನೆ ಮಾಡಿದಾಗ ಚಂದನವನದಲ್ಲಿ ಕ್ಯೂಟ್​ ಕಪಲ್​ ಆಗಿದ್ದ ಚಂದನ್​ ಮತ್ತು ನಿವೇದಿತಾ ನಡುವಿನ ಡಿವೋರ್ಸ್​ ಮನಸ್ಸಿಗೆ ಬೇಸರ ತರಿಸಿತು ಎಂದು ಸಂಬರಗಿ ಹೇಳಿದರು.

  ಈ ಶಾಕ್​ ಒಂದು ವರ್ಷದ ಹಿಂದೆಯೇ ನನಗೆ ತಿಳಿದಿತ್ತು. ಇದೇನು ನನಗೆ ಹೊಸದಲ್ಲ, 2018ರಲ್ಲಿ ಮೈಸೂರಿನ ಯುವ ದಸರಾದಲ್ಲಿ, ರಾಜ್ಯ ಸರ್ಕಾರದ ಹಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಂದನ್​, ನಿವೇದಿತಾಗೆ ಪ್ರಪೋಸ್​ ಮಾಡಿದಾಗ ಅದಕ್ಕೆ ನನ್ನ ಧಿಕ್ಕಾರವಿತ್ತು. ಜನರ ದುಡ್ಡಿನಲ್ಲಿ ಅಥವಾ ಸರ್ಕಾರದ ಹಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಸಗಿ ಉದ್ದೇಶಕ್ಕಾಗಿ ಅಥವಾ ಕೆಲಸಕ್ಕಾಗಿ ವೇದಿಕೆಯನ್ನು ಬಳಸಿಕೊಂಡಾಗ ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಮೊದಲ ವ್ಯಕ್ತಿ ನಾನೇ. ಆದರೆ, ಯುವ ದಸರಾ ಕಾರ್ಯಕ್ರಮ ಮುಗಿದ ಬಳಿಕ ನಡೆದಿದ್ದರಿಂದ ಅದನ್ನು ಹೆಚ್ಚು ವಿವಾದ ಮಾಡದೇ ಕ್ಷಮಿಸಿ, ಅಲ್ಲಿಗೆ ಬಿಟ್ಟೆವು.

  ವಿದ್ಯಾರ್ಥಿ ವಿದ್ಯಾರ್ಥಿನಿ ಸಿನಿಮಾ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ನಾಯಕರಾಗಿರುವ ಚಂದನ್​ ಶೆಟ್ಟಿ, ಸಿನಿಮಾ ಪ್ರಚಾರದ ಎರಡು ಕಾರ್ಯಕ್ರಮಗಳಿಗೆ ಬರಲಿಲ್ಲ. ಪ್ರೆಸ್​ಮೀಟ್​ಗೂ ಹಾಜರಾಗಲಿಲ್ಲ. ಯಾರೇ ಕರೆ ಮಾಡಿದರು ಚಂದನ್​ ಯಾರೊಬ್ಬರಿಗೆ ಪ್ರತಿಕ್ರಿಯೆ ನೀಡಲಿಲ್ಲ. ಈ ಸಂದರ್ಭದಲ್ಲಿ ನಮಗೆ ಒಂದು ಭಯ ಇತ್ತು. ಆ ಭಯ ಇಂದು ನಿಜವಾಗಿದೆ. ತಾನು ಮಾನಸಿಕವಾಗಿ ತುಂಬಾ ದುರ್ಬಲವಾಗಿದ್ದೇನೆ ಎಂದು 6 ತಿಂಗಳ ಹಿಂದೆಯೇ ಹೇಳಿದ್ದ ಪ್ರಸಂಗ ಬಂದಿತ್ತು. ಸಿನಿಮಾ ಪ್ರಚಾರದ ಕಾರ್ಯಕ್ರಮಕ್ಕೆ ಮನೆಯಲ್ಲಿದ್ದ ಬಟ್ಟೆಯನ್ನೇ ಹಾಕಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದ. ಇದರ ಬಗ್ಗೆ ನಮಗೆ ಭಿನ್ನಾಭಿಪ್ರಾಯವಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಲ್ಲ ರೆಡಿ ಮಾಡಿದ್ದರೂ ನೀವು ಈ ಅವತಾರದಲ್ಲಿ ಬಂದಿದ್ದು ನಮಗೆ ಇಷ್ಟವಾಗಲಿಲ್ಲ ಎಂದು ನಿರ್ದೇಶಕರು ಹೇಳಿದಾಗ ಮೊದಲ ಬಾರಿಗೆ ಚಂದನ್​ ಶೆಟ್ಟಿ ತನ್ನ ಮನದಾಳದ ಮಾತನ್ನು ನಮ್ಮ ಮುಂದೆ ಬಿಚ್ಚಿಟ್ಟರು.

  See also  ಲಹರಿ ಮ್ಯೂಸಿಕ್‌ಗೆ ಡೈಮಂಡ್​ ಅವಾರ್ಡ್​ ... ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ

  ನನ್ನ ಮತ್ತು ನಿವೇದಿತಾ ಗೌಡ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಒಟ್ಟಿಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯಲ್ಲಿ ತುಂಬಾ ಆತಂಕವಿದೆ, ಎಲ್ಲವು ನಿಮಗೆ ಗೊತ್ತಾಗುತ್ತದೆ ಎಂದು ಚಂದನ್​ ಶೆಟ್ಟಿ ಹೇಳಿದರು. ಇದು ಅವರು ಖಾಸಗಿ ಬದುಕಿನ ವಿಚಾರವಾಗಿದ್ದು, ನಾವದನ್ನು ಗೌರವಿಸುತ್ತೇವೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ಪಡೆದಿದ್ದಾರೆ. ತೆಲುಗು ಸಿನಿಮಾಗಳಲ್ಲಿ ನಟಿಸಲು ಹೋಗುತ್ತಿದ್ದೇನೆ, ಮದುವೆಯಾಗಿದ್ದರೆ ಅಲ್ಲಿ ಅವಕಾಶ ಸಿಗುವುದಿಲ್ಲ, ಡಿವೋರ್ಸ್​ ಆಗಿದ್ದರೆ ಅವಕಾಶ ಸಿಗುತ್ತದೆ ಎಂಬ ವದಂತಿ ಹರಿದಾಡುತ್ತಿದೆ. ಇದನ್ನು ಕೇಳಿ ಚಂದನ್​ ಬೇಸರಗೊಂಡಿದ್ದಾರೆ. ನಾವಿಬ್ಬರು ಬೇರೆ ಬೇರೆಯಾಗೋಣ, ನಮ್ಮ ಜೀವನದಲ್ಲಿ ಇನ್ನೊಬ್ಬರು ಯಾರೋ ಬಂದಿದ್ದಾರೆ, ನಿನ್ನ ಜೀವನದ ಶೈಲಿ ನನಗೆ ಇಷ್ಟವಾಗುತ್ತಿಲ್ಲ ಮತ್ತು ನನ್ನ ಜೀವನದಲ್ಲಿ ನನ್ನದೇಯಾದ ಲೈಫ್​ಸ್ಟೈಲ್​ ಬೇಕು ಅಂತಾ ನಿವೇದಿತಾ ಬಿಟ್ಟು ಹೋಗಿರುವಂತಹ ಊಹಾಪೋಹಗಳು ಸಹ ಹರಿದಾಡುತ್ತಿದೆ. ಆದರೆ, ಚಂದನ್​ಗೆ ನಿಜಕ್ಕೂ ನೋವಾಗಿದೆ. ಇಂತಹ ಸನ್ನಿವೇಶಗಳಲ್ಲಿ ಎಲ್ಲರ ಬಾಯಲ್ಲಿ ಅಯ್ಯೋ ಪಾಪ ಹೆಣ್ಣು ಮಗು ಎಂದು ಹೇಳುತ್ತಾರೆ. ಆದರೆ, ಇಲ್ಲಿ ಗಂಡು ಮಗುವಿಗೆ ಆಗಿದೆ. ಗಂಡಸರ ಹಕ್ಕಿಗೆ ಮಾತನಾಡಲು ಗಂಡಸರು ಇಲ್ಲದಾಗಿದೆ. ಯಾವ ಕಡೆಯಿಂದ ತೊಂದರೆಯಾಗಿದೆ ಅನ್ನೋದನ್ನು ನಾವು ತಿಳಿದುಕೊಂಡಿದ್ದೇವೆ. ಯಾರ ಚಂಚಲ ಮನಸ್ಸಿಂದಾನೋ ಅಥವಾ ಯಾರಿಗೆ ಮಹತ್ವಾಕಾಂಕ್ಷೆ ಇದೆಯೋ, ಯಾರು ಹಳೆಯ ಪ್ರೀತಿಯನ್ನು ಮರೆತು, ಇರೋ ಸ್ವಿಫ್ಟ್​ ಕಾರು ಬಿಟ್ಟು ನನಗೆ ಬೆಂಜ್​ ಬೇಕು ಅಂದ್ರೆ ನಾವೇನು ಮಾಡೋಕೆ ಆಗಲ್ಲ. ಬೆಂಜ್​ ಹಿಂದೆ ಹೋಗಿರುವವರು ಮತ್ತು ದುಡ್ಡಿನ ಹಿಂದೆ ಹೋಗಿರುವವರು ಅಥವಾ ಅವಕಾಶಗಳ ಹಿಂದೆ ಹೋಗಿರುವವರು ಯಾರು ಅಂತ ಕರ್ನಾಟಕದ ಜನತೆಗೆ ಗೊತ್ತಾಗುತ್ತೆ. ಚಂದನ್​ಗೆ ನಮ್ಮ ಬೆಂಬಲ ಎಂದು ಪ್ರಶಾಂತ್​ ಸಂಬರಗಿ ಹೇಳಿದರು.

  ಜಾತಕ ರೂಪದಲ್ಲಿ ನಾವು ಹಿಂದೊಮ್ಮೆ ಅವರಿಗೆ ಸಂದೇಶವನ್ನು ನೀಡಿದ್ದೆವು. ಹೆಸರು ಈ ರೀತಿ ಇದ್ರೆ ಡಿವೋರ್ಸ್​ ಆಗುತ್ತೆ, ನೀನು ಎಚ್ಚರವಾಗಿರು ಮತ್ತು ಮಗು ಮಾಡಿಕೋ ಅಂತೆಲ್ಲ ಸಲಹೆಗಳನ್ನು ನೀಡಿದ್ದೆವು. ನಾವು ಎಲ್ಲ ಕಡೆ ಓಡಾಡುತ್ತಿರುತ್ತೇವೆ. ನಾವು ಕೂಡ ಏನೋ ನೋಡಬಾರದನ್ನು ನೋಡಿರುತ್ತೇವೆ. ನಮಗೆ ಒಂದು ಸೂಕ್ಷ್ಮತೆ ಇರುತ್ತದೆ. ವೃತ್ತಿಪರ ಸೂಕ್ಷ್ಮತೆ ನಮಗೆ ಗೊತ್ತಿರುತ್ತದೆ ಹಾಗೂ ವೈಯಕ್ತಿಕ ಸೂಕ್ಷ್ಮತೆಯನ್ನೂ ನಾವು ನೋಡಿರುತ್ತೇವೆ. ಇಂತಹ ಸಂದರ್ಭದಲ್ಲಿ ಆತನನ್ನು ಕರೆದು ಮನೆಯಲ್ಲಿ ಎಲ್ಲವೂ ಸರಿ ಇದೆಯೇ? ನಿನ್ನ ಮತ್ತು ಆಕೆಯ ನಡುವೆ ಸಂಬಂಧ ಹೇಗಿದೆ? ಮೂರನೇ ವ್ಯಕ್ತಿಯೊಬ್ಬರು ಹೈದರಾಬಾದ್​ನಲ್ಲಿ ಯಾವುದೋ ಒಂದು ವಿಷಯ ಹೇಳುತ್ತಾರೆಂದರೆ, ಅದನ್ನು ನನ್ನ ಗೆಳೆಯನಾಗಿ ನಾನು ಅವನಿಗೆ ಹೇಳಲೇಬೇಕು. ಹೀಗಾಗಿ ನಾವು ಆತನಿಗೆ ಜಾತಕ ಮೂಲಕ ಹೇಳಿದೆವು.

  ಒಮ್ಮೆ ಚಂದನ್ ಅಮೆರಿಕಗೆ ಮ್ಯೂಸಿಕ್ ಕನ್ಸರ್ಟ್​ಗೆ ಒಬ್ಬನೇ ಹೋಗಿದ್ದ. ಅಂದು ನನ್ನ ಮೊದಲ ಪ್ರಶ್ನೆ ಏನಾಗಿತ್ತು ಅಂದರೆ, ಯಾಕೆ ನಿವೇದಿತಾಳನ್ನು ಕರೆದುಕೊಂಡು ಹೋಗಲಿಲ್ಲ ಎಂದು ಕೇಳಿದ್ದೆ. ವೀಸಾ ಇಲ್ಲ ಎಂಬ ನೆಪವನ್ನು ಹೇಳಿದ. ಆಗ ನೀನು ಅವಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿಲ್ಲ ಎಂದರೆ ಇನ್ನೊಬ್ಬರು ಕರೆದುಕೊಂಡು ಹೋಗುತ್ತಾರೆ. ನೀನು ಸ್ಪಂದಿಸಲಿಲ್ಲ ಎಂದರೆ ಇನ್ನು ಯಾರೋ ಸ್ಪಂದಿಸುತ್ತಾರೆ, ನೀನು ಭುಜ ಕೊಡಲಿಲ್ಲ ಎಂದರೆ ಬೇರೆ ಯಾರೋ ಕೊಡ್ತಾರೆ. ನಿನ್ನ ವಸ್ತುವನ್ನ ನೀನು ಜೋಪಾನ ಮಾಡಿಕೊ ಎಂದು ಅವನಿಗೆ ಎಚ್ಚರಿಸಿದ್ದೆ ಎಂದು ಹಲವು ಸಂಗತಿಗಳನ್ನು ಪ್ರಶಾಂತ್​ ಸಂಬರಗಿ ಬಿಚ್ಚಿಟ್ಟರು.

  See also  ರಾಜ್ಯದಲ್ಲಿ ಆಮ್ ಆದ್ಮಿ ಬಂದು ಏನು ಮಾಡುತ್ತೆ: ಎಚ್​.ಡಿ.ಕುಮಾರಸ್ವಾಮಿ

  ಬಿಗ್​ಬಾಸ್​ ಕನ್ನಡ ಸೀಸನ್​ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿ ಇಬ್ಬರು 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ಚಂದನ್ ಶೆಟ್ಟಿ ಸಿನಿಮಾ ಇಂಡಸ್ಟ್ರೀಯಲ್ಲಿ ಪತ್ನಿ ನಿವೇದಿತಾ ಗೌಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಆಗಿದ್ದರು. 20 ದಿನಗಳ ಹಿಂದಷ್ಟೇ ಪತ್ನಿ ನಿವೇದಿತಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಚಂದನ್ ಪೋಸ್ಟ್ ಮಾಡಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ ಗುರುವಾರ (ಜೂನ್​ 6) ಡಿವೋರ್ಸ್​ಗಾಗಿ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ನ್ಯಾಯಾಲಯ ಇಬ್ಬರಿಗೂ ಡಿವೋರ್ಸ್​ ಮಂಜೂರು ಮಾಡಿದೆ. ಚಂದನ್​ ಮತ್ತು ನಿವೇದಿತಾ ಕಳೆದ ಒಂದು ವರ್ಷಗಳಿಂದ ಕಾಯ್ದುಕೊಂಡಿದ್ದರು. ಅಂತಿಮವಾಗಿ ಇಬ್ಬರು ಬೇರೆ ಬೇರೆಯಾಗಿ, ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.

  ಇಬ್ಬರ ಡಿವೋರ್ಸ್​ ಸಂಬಂಧ ನಾನಾ ವದಂತಿಗಳು ಹರಿದಾಡುತ್ತಿವೆ. ನಿವೇದಿತಾರ ಅತಿಯಾದ ಸೋಶಿಯಲ್​ ಮೀಡಿಯಾ ಕ್ರೇಜ್​ ಚಂದನ್​ಗೆ ಅಸಮಾಧಾನ ತರಿಸಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಅಲ್ಲದೆ, ನಿವೇದಿತಾ ಮಗು ಮಾಡಿಕೊಳ್ಳಲು ಒಪ್ಪದಿದ್ದಕ್ಕೆ ಚಂದನ್​ ಬೇರೆಯಾಗಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ಸೃಜನ್​ ಲೋಕೇಶ್​ ಹೆಸರು ಸಹ ತಳುಕು ಹಾಕಿಕೊಂಡಿದೆ. ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹರಿಬಿಟ್ಟು ಇದೇ ಡಿವೋರ್ಸ್​ಗೆ ಕಾರಣ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಸೃಜನ್​ ಈವರೆಗೂ ಪ್ರತಿಕ್ರಿಯಿಸಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಶೆಟ್ಟಿ ಜತೆಗಿನ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿರುವ ನಿವೇದಿತಾ ಗೌಡ, ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ ಎಂದಿದ್ದಾರೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು. ಇಂತಿ ನಿಮ್ಮ ನಿವೇದಿತಾ ಗೌಡ ಎಂದು ಬರೆದುಕೊಂಡಿದ್ದಾರೆ.

  ಈ ವಿಚಾರಕ್ಕೆ ಹೆದರಿದ್ರಾ ನಿವೇದಿತಾ? ಇಡೀ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಮೊಬೈಲ್​ ಕೂಡ….

  ರ‍್ಯಾಪರ್​ ಚಂದನ್​ ಶೆಟ್ಟಿಯಿಂದ ಇಷ್ಟೊಂದು ಜೀವನಾಂಶ ಪಡೆದ್ರಾ ನಿವೇದಿತಾ ಗೌಡ? ಅಸಲಿ ಸಂಗತಿ ಬಹಿರಂಗ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts