ದುಬೈನಿಂದ ಚೆನ್ನೈಗೆ ಹೊರಟಿದ್ದವರು ತಲುಪಿದ್ದು ಬೆಂಗಳೂರಿಗೆ!; ನೆರವಿಗೆ ಬಂದ 'ಐರಾವತ'

Airavatha
Published on

ಬೆಂಗಳೂರು: ಅವರೆಲ್ಲರೂ ದುಬೈನಿಂದ ಚೆನ್ನೈಗೆ ಹೊರಟಿದ್ದರು, ಆದರೆ ಬಂದಿಳಿದಿದ್ದು ಬೆಂಗಳೂರಿಗೆ. ಅನಿವಾರ್ಯವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರೆಲ್ಲರಿಗೂ 'ಐರಾವತ' ನೆರವಿಗೆ ಬಂದಿದ್ದಾನೆ.

ಮಳೆಯಿಂದಾಗಿ ತೀವ್ರ ಸಮಸ್ಯೆ ಉಂಟಾಗಿರುವ ಕಾರಣ ದುಬೈನಿಂದ ಚೆನ್ನೈಗೆ ಹೊರಟಿದ್ದ ವಿಮಾನವನ್ನು ಬೆಂಗಳೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಚೆನ್ನೈನ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಆಗಿರುವುದರಿಂದ ಅವರಿಗೆ ಈ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ದುಬೈನಿಂದ ನೇರ ಚೆನ್ನೈಗೆ ಹೋಗಬೇಕಿದ್ದ ವಿಮಾನದಿಂದ ಬೆಂಗಳೂರಿನಲ್ಲಿ ಇಳಿದ ಪ್ರಯಾಣಿಕರನ್ನು ಕೊನೆಗೆ ಕೆಎಸ್​ಆರ್​ಟಿಸಿಯ ಐರಾವತ ಬಸ್​ ಮೂಲಕ ಚೆನ್ನೈಗೆ ಕಳುಹಿಸಿಕೊಡಲಾಗಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಮಂದಿ ಬಸ್​ನಲ್ಲಿ ಚೆನ್ನೈಗೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net