ನಾಲಿಗೆಯಲ್ಲಿ ಗಡ್ಡೆ ಉಂಟಾಗಿ ನರಳುತ್ತಿದ್ದ 6ತಿಂಗಳ ಮಗುವಿಗೆ ಯಶಸ್ವಿ ಸರ್ಜರಿ; ಚೆನ್ನೈ ವೈದ್ಯರ ಸಾಧನೆ

Doctors
ಸಾಂದರ್ಭಿಕ ಚಿತ್ರ
Published on

ಚೆನ್ನೈ: ಹುಟ್ಟುವಾಗಲೇ ನಾಲಿಗೆಯಲ್ಲಿ ಥೈರೊಗ್ಲೋಸಲ್ ಸಿಸ್ಟ್​ಹೊಂದಿ ಕಷ್ಟಪಡುತ್ತಿದ್ದ ಮಗುವಿಗೆ ಚೆನ್ನೈ ವೈದ್ಯರು ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.

ಮಗುವಿಗೆ ಆರು ತಿಂಗಳಾಗಿತ್ತು. ಅದರ ಕುತ್ತಿಗೆ ಮುಂಭಾಗದಲ್ಲಿ, ನಾಲಿಗೆಯ ಮೇಲೆ ದ್ರವ ತುಂಬಿದ ಗಡ್ಡೆಯಿತ್ತು. ಈ ಸಮಸ್ಯೆ ಹುಟ್ಟಿನಿಂದಲೇ ಕಾಣಿಸಿಕೊಂಡಿತ್ತು.

ಚೆನ್ನೈನ ರೇನ್​ಬೋ ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮೂರ್ತಿಯವರ ನೇತೃತ್ವದಲ್ಲಿ ಮಗುವಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ ಆ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವುದೊಂದೇ ಮಾರ್ಗವಾಗಿತ್ತು.

ಆ ಪುಟ್ಟ ಮಗುವಿನ ಹೆಸರು ತೀರನ್​. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಗಂಟಲು ಉಬ್ಬಿಕೊಂಡಸ್ಥಿತಿಯಲ್ಲಿತ್ತು. ಹುಟ್ಟುವಾಗಿನಿಗಿಂತ ಆ ಗಡ್ಡೆ ಸ್ವಲ್ಪ ದೊಡ್ಡಾಗಿತ್ತು. ಹೀಗಾಗಿ ಮಗುವಿನ ಬಾಯಿಯೂ ಊದಿತ್ತು. ಅದಕ್ಕೆ ತಾಯಿ ಹಾಲು ಕುಡಿಯಲೂ ಆಗದ ಸ್ಥಿತಿ ಇತ್ತು. ಇದನ್ನೂ ಓದಿ:  ಭಾರತ ಈಗಾಗಲೇ ಆರ್ಥಿಕ ಚೇತರಿಕೆಯ ಹಸಿರು ಚಿಗುರು ನೋಡುತ್ತಿದೆ: ಪ್ರಧಾನಿ ಮೋದಿ

ಕೂಡಲೇ ಮಗುವಿಗೆ ಎಂಆರ್​ಐ ಸ್ಕ್ಯಾನ್​ ಮಾಡಲಾಯಿತು. ಸ್ಕ್ಲೆರೊಥೆರಪಿ ಮಾಡಿ, ಗುಣಪಡಿಸಲು ಸಾಧ್ಯವಿಲ್ಲ ಎಂಬುದು ತಿಳಿಯಿತು. ಆದರೆ ತುಂಬ ದಿನ ಬಿಡುವಂತೆ ಇರಲಿಲ್ಲ. ಆ ಗಡ್ಡೆ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇತ್ತು. ವೈದ್ಯರು ತಡ ಮಾಡದೆ ಮಗುವಿನ ನಾಲಿಗೆ ಮೇಲಿದ್ದ ಸಿಸ್ಟ್​ ಬಗ್ಗೆ ಅಧ್ಯಯನ ಮಾಡಿದರು. ಅದನ್ನು ಸರ್ಜರಿ ಮಾಡಿ, ತೆಗೆಯದೆ ಬೇರೆ ದಾರಿ ಇರಲಿಲ್ಲ.

ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ಬಳಿಕ ವೈದ್ಯರು, ಗಡ್ಡೆ ಯಾವ ಸ್ಥಿತಿಯಲ್ಲಿ ಇತ್ತು ಎಂಬುದನ್ನು ತಿಳಿಸಿದ್ದಾರೆ.

ಈ ಗಡ್ಡೆಯನ್ನು ಅತ್ಯಂತ ನಾಜೂಕಿನಿಂದ ಹೊರತೆಗೆಯಬೇಕಿತ್ತು. ಅದು ಸೂಕ್ಷ್ಮವಾದ ಜಾಗದಲ್ಲಿತ್ತು ಎಂದು ಡಾ. ಮೂರ್ತಿ ಅವರು ತಿಳಿಸಿದ್ದಾರೆ.

ಸರ್ಜರಿಯಾಗಿ ಮೂರೇ ದಿನಕ್ಕೆ ಮಗುವೂ ಡಿಸ್​ಚಾರ್ಜ್​ ಆಗಿದೆ. ಸುಧಾರಿಸಿಕೊಳ್ಳುತ್ತಿದ್ದು, ಹಾಲು ಕುಡಿಯುತ್ತಿದೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net