9 ದಿನಗಳಲ್ಲಿ 36,000 ರೂ. ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ? | Gold Rates

gold
Published on

ನವದೆಹಲಿ: ದೀಪಾವಳಿ ಹಬ್ಬಕ್ಕೂ ಮೊದಲು ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold Rates) ಕಳೆದ ಕೆಲವು ದಿನಗಳಿಂದ ಗಣನೀಯವಾಗಿ ಕುಸಿತ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ 7000 ರೂ. ಕಡಿಮೆಯಾದರೆ, ಕಳೆದ 9 ದಿನಗಳಲ್ಲಿ ಬೆಳ್ಳಿ 36000 ಇಳಿಕೆಯಾಗಿದೆ. ಹಾಗಿದ್ದರೆ, ಇಂದಿನ ದರದಲ್ಲಿ ಎಷ್ಟು ಏರಿಕೆ ಮತ್ತು ಇಳಿಕೆ? ಎಂಬುದರ ವಿವರ ಹೀಗಿದೆ ಗಮನಿಸಿ.

ಈ ವಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 7 ಸಾವಿರ ರೂ. ಕಡಿಮೆಯಾಗಿದೆ. ಆದಾಗ್ಯೂ, ಶುಕ್ರವಾರ (ಅ.24) ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 380 ರೂ. ಜಾಸ್ತಿಯಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 350 ರೂ. ಹೆಚ್ಚಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ. ಒಂದು ಔನ್ಸ್ ಬೆಲೆ 18 ಡಾಲರ್​ನಷ್ಟು ಕಡಿಮೆಯಾಗಿದ್ದು, ಪ್ರಸ್ತುತ 4,111 ಡಾಲರ್​ನಷ್ಟಿದೆ.

ಬೆಳ್ಳಿಯ ಬೆಲೆಯಲ್ಲಿಯೂ ಭಾರಿ ಬದಲಾವಣೆಗಳು ಕಂಡುಬಂದಿವೆ. ಕಳೆದ 9 ದಿನಗಳಿಂದ ಬೆಳ್ಳಿಯ ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಇಂದು (ಶುಕ್ರವಾರ) ಸಹ ಬೆಲೆಯಲ್ಲಿ ಕುಸಿತವಾಗಿದೆ. ಒಂದು ಕೆಜಿ ಬೆಳ್ಳಿಗೆ 3 ಸಾವಿರ ರೂ. ಕಡಿಮೆಯಾಗಿದೆ. ಇದರೊಂದಿಗೆ, ಬೆಳ್ಳಿಯ ಬೆಲೆ ಒಂಬತ್ತು ದಿನಗಳಲ್ಲಿ 36 ಸಾವಿರ ರೂ.ಗೆ ಇಳಿದಿದೆ. ಹತ್ತು ದಿನಗಳ ಹಿಂದೆ ಇದೇ ಬೆಳ್ಳಿಯ ಬೆಲೆ ಕೆಜಿಗೆ 2 ಲಕ್ಷ ರೂ. ದಾಟಿತ್ತು. ಆದರೆ, ನಿರಂತರವಾಗಿ ಕುಸಿಯುತ್ತಿರುವುದರಿಂದ ಬೆಳ್ಳಿ ಖರೀದಿದಾರರಲ್ಲಿ ಸಂತಸ ಮೂಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10 ರೂ. ಕುಸಿದಿದ್ದು, 1,25,610 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,150 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 810 ರೂ. ಕುಸಿದಿದ್ದು, 1,25,460 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,000 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,25,460 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,15,000 ರೂ. ಆಗಿದೆ.

ಬೆಳ್ಳಿ ಬೆಲೆಯೂ ಕುಸಿತ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,56,000 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,56,000 ರೂ. ಇದೆ.
  • ಇನ್ನು ಹೈದರಾಬಾದ್‌, ತೆಲಂಗಾಣದಲ್ಲಿ ಪ್ರತಿ ಕೆಜಿ ಬೆಲೆ 1,71,000 ರೂ. ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net