17 ವರ್ಷಗಳಲ್ಲಿ ಇದೇ ಮೊದಲು! 'ಕಿಂಗ್' ಕೊಹ್ಲಿ ಹೆಸರಿಗೆ ಸೇರಿದ 'ಶೂನ್ಯ' ದಾಖಲೆ​, ಫ್ಯಾನ್ಸ್ ಬೇಸರ | Virat Kohli

ವಿಜಯವಾಣಿ (99)
Published on

ಆಸ್ಟ್ರೇಲಿಯಾ: ಎರಡು ಏಕದಿನ ಪಂದ್ಯಗಳಲ್ಲಿಯೂ ಬ್ಯಾಕ್ ಟು ಬ್ಯಾಕ್​ ಶೂನ್ಯಕ್ಕೆ ಔಟಾದ ವಿರಾಟ್​ ಕೊಹ್ಲಿ (Virat Kohli), ಪರ್ತ್‌ನಲ್ಲಿ ನಡೆದ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ಎಸೆತ ಎದುರಿಸಿ, ಡಕ್​ಔಟ್​ ಆದರು. ಇನ್ನು ಇಂದು (ಅ.23) ಅಡಿಲೇಡ್​ನಲ್ಲಿ ನಡೆದ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 4 ಎಸೆತಗಳನ್ನು ಆಡಿದ ಕೊಹ್ಲಿ, ಎಲ್​​ಬಿಡಬ್ಲ್ಯೂ ಔಟ್​ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ತಮ್ಮ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ಡ್ರೆಸ್ಸಿಂಗ್​ ರೂಮ್​ನತ್ತ ಮುಖ ಮಾಡಿದ ವಿರಾಟ್​, ಗ್ಲೌಸ್​ನ ಬಿಚ್ಚಿ ಅಭಿಮಾನಿಗಳತ್ತ ಕೈಬೀಸಿದ ರೀತಿ ಇದೀಗ ಅವರ ನಿವೃತ್ತಿ ಬಗ್ಗೆ ಚರ್ಚಿಸುವಂತೆ ಮಾಡಿದೆ.

ಸುಮಾರು 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡಿರುವ ವಿರಾಟ್​, ಭಾರಿ ನಿರೀಕ್ಷೆಗಳ ನಡುವೆಯೇ ಕಳಪೆ ಆಟ ಮುಂದುವರಿಸಿರುವುದು ಸದ್ಯ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಆಸೀಸ್ ವಿರುದ್ಧ ಆಡಿದ ಎರಡು ಏಕದಿನ ಪಂದ್ಯದಲ್ಲಿಯೂ ಡಕ್​ಔಟ್​ ಆಗಿದ್ದು, ಒಂದೇ ಒಂದು ರನ್​ ಕೂಡ ಗಳಿಸಿಲ್ಲ. ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದ ಕೊಹ್ಲಿ, ಕನಿಷ್ಠ ಡಿಆರ್‌ಎಸ್ ಕೂಡ ತೆಗೆದುಕೊಳ್ಳಲಿಲ್ಲ. ಇದಲ್ಲದೆ, ಔಟ್​ ಆಗಿ ಪೆವಿಲಿಯನ್​ನತ್ತ ಸಾಗುವಾಗ, ತಮ್ಮ ಗ್ಲೌಸ್​ಗಳನ್ನು ತೆಗೆದು ಅಭಿಮಾನಿಗಳತ್ತ ಕೈಬೀಸಿದರು. ಸದ್ಯ ಕೊಹ್ಲಿಯ ಈ ನಡೆ ಕ್ರಿಕೆಟ್​ ಪ್ರಿಯರಲ್ಲಿ ತೀರ ಕಳವಳ ಮೂಡಿಸಿದೆ.

ಬೇಡದ ದಾಖಲೆ ಕೊಹ್ಲಿ ಹೆಸರಿಗೆ!

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದಿನದಿಂದ ಇಂದಿನವರೆಗೆ ಅಂದರೆ ಕೊಹ್ಲಿ ವೃತ್ತಿಜೀವನದಲ್ಲಿ ಈ ರೀತಿ ಹಿಂದೆಂದೂ ಬ್ಯಾಕ್​ ಟು ಬ್ಯಾಕ್​ ಡಕ್​ಔಟ್​ ಆಗಿರಲಿಲ್ಲ. ಇದೀಗ ಬೇಡದ ದಾಖಲೆಯೊಂದು ಕೊಹ್ಲಿ ಹೆಸರಿಗೆ ಬಂದು ಸೇರಿರುವುದು ಸದ್ಯ ಅವರ ಅಭಿಮಾನಿ ಬಳಗಕ್ಕೆ ಬೇಸರ ತಂದಿದೆ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net