ವೈವಿಧ್ಯತೆಯಿಂದ ನೇಕಾರಿಕೆ ಮಾರುಕಟ್ಟೆ ವೃದ್ಧಿ: ಡಾ.ಅಮರಶ್ರೀ ಅಮರನಾಥ ಶೆಟ್ಟಿ ಅಭಿಮತ

New Project (71)
Published on

ಕಿನ್ನಿಗೋಳಿ: ದೇಶ ಬೇರೆ ಬೇರೆ ಭಾಗಗಳಲ್ಲಿ ಹಲವು ರೀತಿಯ ಸೀರೆ ಕಂಡಿದ್ದೇನೆ, ಮಾತ್ರವಲ್ಲದೆ ಖರೀದಿಸಿದ್ದೇನೆ. ಆದರೆ ಕೈ ಮಗ್ಗದ ಸೀರೆಯ ಬಗ್ಗೆ ಮೊದಲ ಬಾರಿಗೆ ನೋಡುತ್ತಿದ್ದೇನೆ. ನೇಕಾರಿಕೆ ಬೆಳೆಯಬೇಕು, ಇದರಲ್ಲಿ ಇನ್ನಷ್ಟು ವಿಭಿನ್ನತೆಗಳನ್ನು ಅಳವಡಿಕೊಳ್ಳಬೇಕು ಈ ಮೂಲಕ ಇನ್ನಷ್ಟು ಮಾರುಕಟ್ಟೆ ವೃದ್ಧಿಸಬೇಕು ಎಂದು ಡಾ.ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.

ಕಿನ್ನಿಗೋಳಿ ನೇಕಾರ ಸೌಧದ ಸಭಾಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕದಿಕೆ ಟ್ರಸ್ಟ್ ವತಿಯಿಂದ ನಡೆದ ಚಾವಡಿದ ತಮ್ಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೈ ಮಗ್ಗ ನೇಕಾರಿಕೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡ ದೇವಕಿ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಅನಂತ ಪ್ರಕಾಶ ಕಿನ್ನಿಗೋಳಿಯ ಸಚ್ಚಿದಾನಂದ ಉಡುಪ, ಮ್ಯಾಪ್ಸ್ ಕಾಲೇಜು ಉಪಪ್ರಾಂಶುಪಾಲ ಡಾ.ಪ್ರಭಾಕರ ನೀರುಮಾರ್ಗ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಅಳ್ವ, ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ರುಕ್ಮಿಣಿ ಶೆಟ್ಟಿಗಾರ್, ನಿರ್ವಾಹಕ ನಿರ್ದೇಶಕ ಮಾಧವ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಅಮಿತಾ ಅಶ್ವಿನಿ ಸನ್ಮಾನ ಪತ್ರ ವಾಚಿಸಿದರು. ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅಭಿನಂದನಾ ಭಾಷಣಗೈದರು. ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಸಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net