ವಿಶ್ವ ಕೆಡೆಟ್ ಚೆಸ್ ​ಚಾಂಪಿಯನ್​​ಶಿಪ್: ಕನ್ನಡದ ಚಾರ್ವಿಗೆ 5 ಲಕ್ಷ ರೂ. ಬಹುಮಾನ

Charvi
Published on

ಬೆಂಗಳೂರು: ವಿಶ್ವ ಕೆಡೆಟ್ ಚೆಸ್ ಚೆಸ್ ​ಚಾಂಪಿಯನ್​​ಶಿಪ್ 8 ವರ್ಷದೊಳಗಿನವರ ಪ್ರಶಸ್ತಿ ವಿಜೇತರಾಗಿರುವ ಕರ್ನಾಟಕದ ಚಾರ್ವಿಗೆ ಕ್ರೀಡಾ ಸಚಿವ ನಾರಾಯಣಗೌಡ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಜಾರ್ಜಿಯದ ಬಟುಮಿಯಲ್ಲಿ ನಡೆದ ವಿಶ್ವ ಕೆಡೆಟ್ಸ್‌ ಚೆಸ್‌ ಚೆಸ್ ​ಚಾಂಪಿಯನ್​​ಶಿಪ್​ನ ಬಾಲಕಿಯರ 8 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ರಾಜ್ಯಕ್ಕೆ ಕೀರ್ತಿ ತಂದಿರುವ ಚಾರ್ವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಾರ್ವಿ ಅಪಾರ ಪ್ರತಿಭೆ ಹೊಂದಿದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡುತ್ತಿದ್ದಾಳೆ. ಮುಂದಿನ ತಿಂಗಳು ಇಂಡೊನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್‌ ಯೂತ್‌ ಚೆಸ್ ​ಚಾಂಪಿಯನ್​​ಶಿಪ್​ನಲ್ಲೂ ಆಕೆ ದೇಶವನ್ನು ಪ್ರತಿನಿಧಿಸುವಳು. ನವೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಚೆಸ್‌ ಕೂಟದಲ್ಲೂ ಪಾಲ್ಗೊಳ್ಳಲಿದ್ದಾಳೆ. ಈ ಬಾಲ ಪ್ರತಿಭೆಗೆ ಎಲ್ಲಾ ರೀತಿಯ ನೆರವು ನೀಡಲಿದ್ದು, 5 ಲಕ್ಷ ರೂ. ನಗದು ಪುರಸ್ಕಾರ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net