More

    ಸರ್ಕಾರಿ ಸಂಬಳ ಸಾಲ್ತಿಲ್ವಂತೆ: ಈ ಅಗ್ನಿಶಾಮಕ ಸಿಬ್ಬಂದಿಗೆ ತಿಂಗಳಿಗಿಷ್ಟು ಬೇಕೇ ಬೇಕಂತೆ!

    ಬೆಳಗಾವಿ: ಜನರ ಪರವಾಗಿ ಕಾರ್ಯನಿರ್ವಹಿಸಬೇಕಿದ್ದ, ಸರ್ಕಾರಿ ನೌಕರರೇ ದಂಧೆಗಿಳಿದ ಹಲವು ಪ್ರಕರಣಗಳು ನಡೆದಿವೆ. ಇದೀಗ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬ ಹಿರಿಯ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಹಣದ ದಂಧೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು, ಆನಂದ್ ಎಂಬ ಅಗ್ನಿಶಾಮಕದಳ ಸಿಬ್ಬಂದಿ, ಸಿಸಿಬಿ ವಿಭಾಗದ ಎಸಿಪಿ ರಿನಾ ಸುವರ್ಣ ಹೆಸರು ಬಳಕೆ ಮಾಡಿಕೊಂಡು ಹಣದ ದಂಧೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಪ್ರತಿ ತಿಂಗಳು ಗೌರವ ಮೊತ್ತದ ಸರ್ಕಾರಿ ಸಂಬಳ ಬರುತ್ತಿದ್ದರೂ, ಹಣದೆ ದಂಧೆ ಮಾಡಿದ್ದಾರೆ. ಘಟನೆ ಸಂಬಂಧ ಕೊಡಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೊದಲು ಪೀಣ್ಯಾ ಅಗ್ನಿಶಾಮಕದಳ ಸಿಬ್ಬಂದಿಯಾಗಿದ್ದ ಆನಂದ, ಈ ಹಿಂದೆ ಹಲವು ಕಡೆಗಳಲ್ಲಿ ಹಣ ದಂಧೆ ಮಾಡಿ ಸಿಕ್ಕಿ ಬಿದ್ದಿದ್ದ. ಹೀಗಾಗಿ ಇಲಾಖೆಯಿಂದ ಸಸ್ಪೆಂಡ್ ಆಗಿದ್ದ. ನಂತರ ಕೆಲವು ತಿಂಗಳುಗಳ ಹಿಂದೆ ಅಥಣಿಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿಯಾಗಿ ಮತ್ತೆ ಪೋಸ್ಟಿಂಗ್ ಆಗಿ ಬಂದಿದ್ದ. ಇಷ್ಟಾದರೂ ಮತ್ತೆ ಕರ್ತವ್ಯ ಲೋಪ ಎಸಗಿದ್ದಾನೆ.

    ತಿಂಗಳಿಗೆ ಸರಿಯಾಗಿ ಸಂಬಳ ಬರುತ್ತಿದ್ದರೂ ಹಣದ ದಂಧೆಯ ಮೂಲಕ ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿಕೊಂಡಿದ್ದ. ಹೀಗಾಗಿ ಸ್ಪಾ ಒಂದಕ್ಕೆ ತೆರಳಿ, ಹಿರಿಯ ಅಧಿಕಾರಿಗ: ಹೆಸರು ಹೇಳಿ 25 ಸಾವಿರ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ನಂತರ ಕೊಡಿಗೆಹಳ್ಳಿ ಸಾರಾ ಸ್ಪಾಗೆ ತೆರಳಿ 20 ಸಾವಿರ ಪಡೆದುಕೊಂಡಿದ್ದಾನೆ.

    ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಯೊಂದರಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts