More

    ಇಂದು ಸಿಎಸ್‌ಕೆ-ಗುಜರಾತ್ ಕಾದಾಟ: ಅಹಮದಾಬಾದ್‌ನಲ್ಲಿ ಶುಭಮಾನ್ ಗಿಲ್ ಬಳಗ ಸೋತರೆ ಔಟ್

    ಅಹಮದಾಬಾದ್: ಪ್ಲೇಆಫ್​ಗೇರುವ ಅವಕಾಶ ವೃದ್ಧಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ‌್ಯತೆ ಎದುರಿಸುತ್ತಿರುವ ತಂಡಗಳಾದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಐಪಿಎಲ್-17ರಲ್ಲಿ ಶುಕ್ರವಾರ ಮರುಮುಖಾಮುಖಿಯಾಗಲಿವೆ. ಋತುರಾಜ್ ಗಾಯಕ್ವಾಡ್ ಬಳಗ ಫಾರ್ಮ್‌ನಲ್ಲಿದ್ದರೆ, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನದ ಕೊರತೆಯಿಂದ ಹೊರಬೀಳುವ ಭೀತಿಯಲ್ಲಿರುವ ಶುಭಮಾನ್ ಗಿಲ್ ಪಡೆಗೆ ಮಾಡು ಇಲ್ಲವೆ ಮಡಿ ಪಂದ್ಯ ಎನಿಸಿದೆ.

    ಸ್ಟಾರ್ ಆಟಗಾರರ ಅಲಭ್ಯತೆ ಹಾಗೂ ಗಾಯದ ಸಮಸ್ಯೆ ಎದುರಿಸುತ್ತಿರುವ ಸಿಎಸ್‌ಕೆ ತನ್ನ ಅಂಕಪಟ್ಟಿಯ ಮಧ್ಯದಲ್ಲಿ ಏರಿಳಿತ ಕಾಣುತ್ತಿದೆ. ಸಿಎಸ್‌ಕೆ ಆಡಿರುವ 11 ಪಂದ್ಯಗಳ ಪೈಕಿ 6 ಗೆಲುವು, 5 ಸೋಲಿನೊಂದಿಗೆ 12 ಅಂಕ ಕಲೆಹಾಕಿದೆ. ಮುಂದಿನ 3 ಪಂದ್ಯಗಳಲ್ಲಿ ಕನಿಷ್ಠ 2 ಜಯ ದಾಖಲಿಸಿದರೆ ಪ್ಲೇಆ್ಗೇರಲಿದೆ. ಗುಜರಾತ್ ವಿರುದ್ಧ ಸೋತರೆ ದೊಡ್ಡ ಹಿನ್ನಡೆ ಎದುರಾಗಲಿದೆ. ಏಕೆಂದರೆ ಮುಂದಿನ 2 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಆರ್‌ಸಿಬಿ ವಿರುದ್ಧ ಆಡಲಿದೆ. ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದ್ದರೂ ಪ್ಲೇಆ್ ಆಸೆ ಜೀವಂತವಿರಿಸಿರುವ ಗುಜರಾತ್, ಗರಿಷ್ಠ 14 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಜಯ, 7 ಸೋಲಿನೊಂದಿಗೆ 8 ಅಂಕ ಸಂಪಾದಿಸಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಸೊಲುಂಡಿರುವ ಗುಜರಾತ್ ಕಂಬ್ಯಾಕ್ ಮಾಡುವ ಹಂಬಲದಲ್ಲಿದೆ.

    ಸಮಬಲದ ಹೋರಾಟ: ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ 6 ಬಾರಿ ಎದುರಾಗಿದ್ದು, ಉಭಯ ತಂಡಗಳು ತಲಾ 3 ಗೆಲುವು, 3 ಸೋಲಿನೊಂದಿಗೆ ಸಮಬಲ ಹೋರಾಟ ಪ್ರದರ್ಶಿಸಿವೆ. 2022ರಲ್ಲಿ ಆಡಿದ 2 ಪಂದ್ಯಗಳಲ್ಲಿ ಗುಜರಾತ್ ಮೇಲುಗೈ ಸಾಧಿಸಿದ್ದರೆ, 2023ರ ೈನಲ್ ಸೇರಿ 3 ಬಾರಿಯ ಕಾದಾಟದಲ್ಲಿ ಸಿಎಸ್‌ಕೆ 2 ಬಾರಿ ಗೆದ್ದು ಬೀಗಿದೆ. ೈನಲ್‌ನಲ್ಲಿ ಡಿಎಲ್‌ಎಸ್ ನಿಯಮದನ್ವಯ 5 ವಿಕೆಟ್‌ಗಳ ಜಯ ದಾಖಲಿಸಿದೆ. ಹಾಲಿ ಋತುವಿನಲ್ಲಿ ಮಾ.26ರಂದು ಉಭಯ ತಂಡಗಳು ಚೆನ್ನೈನಲ್ಲಿ ಕಾದಾಟ ನಡೆಸಿದಾಗ ಸಿಎಸ್‌ಕೆ ಮೇಲುಗೈ ಸಾಧಿಸಿತ್ತು. ಇದೀಗ ಟೂರ್ನಿಯ ಪ್ರಮುಖ ಘಟ್ಟದಲ್ಲಿ 2 ತಂಡಗಳಿಗೂ ಪಂದ್ಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ.

    ಪ್ರಮುಖ ವೇಗಿಗಳ ಗೈರು: ಲಂಕಾದ ವೇಗಿ ಮಥೀಶ ಪಥಿರಣ ಗಾಯದಿಂದ ಚೇತರಿಸಿಕೊಳ್ಳಲು ತವರಿಗೆ ಹಿಂದಿರುಗಿದ್ದು ಟೂರ್ನಿಗೆ ಅಲಭ್ಯರಾಗಿದ್ದಾರೆ. ದೀಪಕ್ ಚಹರ್ ಲಭ್ಯತೆ ಅನುಮಾನ ಎನ್ನಲಾಗಿದೆ. ಉಳಿದ ಲೀಗ್ ಪಂದ್ಯಗಳಲ್ಲಿ ಸಿಎಸ್‌ಕೆ ತನ್ನ 2ನೇ ಸ್ತರದ ಬೌಲರ್‌ಗಳನ್ನು ನೆಚ್ಚಿಕೊಂಡಿದೆ. ಪಂಜಾಬ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಸಿಎಸ್‌ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಶಿವಂ ದುಬೆ ಸತತ ಪಂದ್ಯಗಳಲ್ಲಿ ಡಕೌಟ್ ಆಗಿದ್ದು, ಾರ್ಮ್‌ಗೆ ಮರಳಬೇಕಿದೆ. ಅಜಿಂಕ್ಯ ರಹಾನೆ ಬ್ಯಾಟಿಂಗ್ ದೊಡ್ಡ ಹಿನ್ನಡೆ ಎನಿಸಿದೆ. ನಾಯಕ ಋತುರಾಜ್ ಗಾಯಕ್ವಾಡ್ 541 ರನ್‌ಗಳಿಸಿದ್ದು ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್ ಹಾಗೂ ಮೊಯಿನ್ ಅಲಿ ಪ್ರಮುಖ ಅಸ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts