More

    ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ದೇವಾಲಯಗಳಲ್ಲಿ ನಾಳೆ ‘ಹನುಮಾನ್ ಚಾಲೀಸಾ’ ಪಠಣ

    ಬೆಂಗಳೂರು: ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ‘ಬಜರಂಗ ದಳ’ ನಿಷೇಧ ಮಾಡುವ ಅಂಶವನ್ನು ಖಂಡಿಸಿ ಹಿಂದುಪರ ಸಂಘಟನೆಗಳು ಗುರುವಾರ ರಾಜ್ಯಾದ್ಯಂತ ಏಕಕಾಲಕ್ಕೆ ‘ಹನುಮಾನ್ ಚಾಲೀಸಾ ಪಠಣ’ ಕಾರ್ಯಕ್ರಮ ಆಯೋಜಿಸುವ ಮೂಲಕ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದೆ.

    ರಾಜ್ಯಾದ್ಯಂತ ಎಲ್ಲ ಹಿಂದು ದೇವಾಲಯಗಳಲ್ಲಿ ಸಂಜೆ 7 ಗಂಟೆಗೆ ಹಿಂದುಗಳು ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಣ ಮಾಡುವ ಮೂಲಕ ಧರ್ಮರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಹಿಂದು ಜಾಗರಣ ವೇದಿಕೆ (ಕರ್ನಾಟಕ) ಕರೆ ನೀಡಿದೆ.

    ಇದನ್ನೂ ಓದಿ: ಬಿಜೆಪಿಗರಿಗೆ ಹನುಮಾನ್ ಚಾಲೀಸಾ ಗೊತ್ತಿಲ್ಲ, ಚಾಲೀಸ್ ಪರ್ಸೆಂಟ್ ಮಾತ್ರ ಗೊತ್ತು: ಸುರ್ಜೆವಾಲಾ

    ಕಾನೂನು ಚೌಕಟ್ಟಿನಲ್ಲಿ ರಚನೆಯಾಗಿರುವ ಬಜರಂಗ ದಳ ಸೇವೆ-ಸುರಕ್ಷತೆ-ಸಂಸ್ಕಾರ ಎಂಬ ಧ್ಯೇಯದೊಂದಿಗೆ ಸಮಾಜದ ಕೆಲಸಗಳನ್ನು ಮಾಡುತ್ತಿದೆ. ರಾಷ್ಟ್ರದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಧರ್ಮಕ್ಕೆ ಈ ರೀತಿಯ ಸಂಕಟ ಎದುರಾಗಿರುವಾಗ ಒಟ್ಟಾಗಿ ನಿಂತು ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗಬೇಕು ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಧೋ. ಕೇಶವಮೂರ್ತಿ ಹಾಗೂ ಉತ್ತರ ಪ್ರಾಂತ ಸಂಚಾಲಕ ಅಯ್ಯನಗೌಡ ಹೇರೂರ ತಿಳಿಸಿದ್ದಾರೆ.

    ಇದನ್ನೂ ಓದಿ: ಹನುಮ ಭಕ್ತರು ಸಿಡಿದೆದ್ದರೆ ಕಾಂಗ್ರೆಸ್ ದೇಶದಿಂದಲೇ ನಿರ್ಮೂಲ: ಸಿಎಂ ಬೊಮ್ಮಾಯಿ

    ಈ ಹಿಂದೆ ಮುಖ್ಯಮಂತ್ರಿಯಾಗದ್ದ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಪಿಎಫ್ಐ ಭಯೋತ್ಪಾದಕ ಸಂಘಟನೆಯ ಮೇಲಿನ 175 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹಿಂದು ವಿರೋಧಿ ದುಷ್ಕೃತ್ಯ ನಡೆಸಿದವರಿಗೆ ಬೆಂಬಲ ನೀಡಿದ್ದರು. ಆ ಮೂಲಕ ತನ್ನ ಹಿಂದು ವಿರೋಧಿ ಮಾನಸಿಕತೆಯನ್ನು ಸಮಾಜದ ಎದುರು ತೆರೆದಿಟ್ಟಿದ್ದರು. ಆದರೆ ಕೇಂದ್ರ ಸರ್ಕಾರವು ಪಿಎಫ್​ಐ ಭಯೋತ್ಪಾದಕ ಸಂಘಟನೆಯನ್ನೇ ದೇಶಾದ್ಯಂತ ನಿಷೇಧಿಸುವ ಮೂಲಕ ದೇಶದ್ರೋಹಿಗಳನ್ನು ಮಟ್ಟಹಾಕಲು ಕಠಿಣ ಕ್ರಮ ಕೈಗೊಂಡಿತು. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಓಲೈಸಲು ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts