ಚಂದ್ರಯಾನ-3: ಇಸ್ರೋ ಲೈವ್​​ಗೆ ಭರ್ಜರಿ ಪ್ರತಿಕ್ರಿಯೆ; ನಿಮಿಷ ನಿಮಿಷಕ್ಕೂ ಲಕ್ಷ ಲಕ್ಷ ಹೆಚ್ಚಳ..

Chandrayaan3 b
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆಯಾದ ಚಂದ್ರಯಾನ-3ರ ಅಂತಿಮ ರೋಚಕ ಕ್ಷಣಗಳನ್ನು ಜಗತ್ತೇ ಬೆರಗಿನಿಂದ ನೋಡುತ್ತಿದೆ.

ಈ ಅಪೂರ್ವ ಕ್ಷಣಗಳನ್ನು ಎಲ್ಲರೂ ಕಣ್ತುಂಬಿಕೊಳ್ಳಲಿ ಎಂದೇ ಇಸ್ರೋ ತನ್ನ ಸೋಷಿಯಲ್ ಮೀಡಿಯಾದಲ್ಲಿ ನೇರಪ್ರಸಾರವನ್ನೂ ಮಾಡುತ್ತಿದೆ. ಇಸ್ರೋದ ಯೂಟ್ಯೂಬ್​, ಫೇಸ್​​ಬುಕ್​ ಹಾಗೂ ವೆಬ್​ಸೈಟ್​ನಲ್ಲಿ ಲೈವ್ ಪ್ರಸಾರವಾಗುತ್ತಿದೆ.

ಅದರಲ್ಲೂ ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ನಡೆಯತ್ತಿರುವ ಲೈವ್​ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಲೈವ್ ಆರಂಭವಾದ 15 ನಿಮಿಷಗಳಲ್ಲೇ 35 ಲಕ್ಷಕ್ಕೂ ಅಧಿಕ ಮಂದಿ ನೇರಪ್ರಸಾರ ನೋಡಲು ಆರಂಭಿಸಿದ್ದಾರೆ. ಇದು 25ನೇ ನಿಮಿಷದಲ್ಲಿ 45 ಲಕ್ಷಕ್ಕೂ ಅಧಿಕವಾಗಿದ್ದು, 10 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. ಇನ್ನೊಂದೆಡೆ ಚಂದ್ರಯಾನದ ಯಶಸ್ಸಿಗಾಗಿ ಶುಭ ಹಾರೈಸಿ ಅಪಾರ ಸಂಖ್ಯೆಯ ಜನರು ಕಮೆಂಟ್ ಮಾಡುತ್ತಿದ್ದು, ಶುಭ ಹಾರೈಕೆಯ ಸುರಿಮಳೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net