Marriage : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೆ ಚಾಣಕ್ಯರ ಪ್ರಕಾರ, ಕೆಲವು ರೀತಿಯ ಮಹಿಳೆಯರನ್ನು ಮದುವೆಯಾಗಬಾರದು. ಏಕೆಂದರೆ ಅಂತಹ ಮಹಿಳೆಯರು ಪುರುಷರ ಜೀವನವನ್ನು ಹಾಳುಮಾಡುತ್ತಾರೆ. ಚಾಣಕ್ಯನ ಪ್ರಕಾರ ಎಂತಹ ಮಹಿಳೆಯರನ್ನು ಮದುವೆಯಾಗಬಾರದು ಎಂಬುದನ್ನು ನಾವೀಗ ತಿಳಿಯೋಣ.
* ಅನೇಕ ಪುರುಷರು ಸುಂದರವಾಗಿರುವ ಯುವತಿಯನ್ನು ಪ್ರೀತಿಸಿ, ಮದುವೆಯಾಗಲು ಬಯಸುತ್ತಾರೆ. ಆದರೆ, ಚಾಣಕ್ಯನ ಪ್ರಕಾರ ಕೇವಲ ಸೌಂದರ್ಯ ಸಾಕಾಗುವುದಿಲ್ಲ. ಉತ್ತಮ ಬುದ್ಧಿವಂತಿಕೆ ಮತ್ತು ಕೌಶಲ್ಯವನ್ನೂ ಹೊಂದಿರಬೇಕು. ಸೌಂದರ್ಯ ಎಂಬುದು ತಾತ್ಕಾಲಿಕ. ಜೀವನದಲ್ಲಿ ಬುದ್ಧಿವಂತಿಕೆ ಮತ್ತು ಕೌಶಲ್ಯಗಳು ತುಂಬಾ ಅಗತ್ಯ ಎಂದು ಹೇಳಿದ್ದಾರೆ.
* ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮಹಿಳೆಯನ್ನು ಎಂದಿಗೂ ಮದುವೆಯಾಗಬೇಡಿ. ಪತಿ ಮತ್ತು ಆತನ ಕುಟುಂಬದ ಸದಸ್ಯರಿಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಸುಳ್ಳು ಹೇಳಿದರೆ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ನಂಬಿಕೆಯ ಕೊರತೆ ಉಂಟಾಗುತ್ತದೆ. ಹೀಗಾಗಿ ಸುಳ್ಳು ಹೇಳುವವರನ್ನು ಮದುವೆಯಾಗಬೇಡಿ.
* ಕೆಟ್ಟ ಸ್ವಭಾವ ಹೊಂದಿರುವ ಮಹಿಳೆಯೊಂದಿಗೆ ಏಳು ಹೆಜ್ಜೆ ಹಾಕಿದರೆ, ನೀವು ಪ್ರತಿ ಹಂತದಲ್ಲೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸದಾ ಸಿಟ್ಟು ಹಾಗೂ ಅಸೂಯೆ ತುಂಬಿರುವ ಹೆಂಗಸರು, ಗಂಡನ ಬದುಕನ್ನು ನರಕವಾಗಿಸುತ್ತಾರೆ. ಹೀಗಾಗಿ ಅಂಥವರಿಂದ ದೂರವಿರಿ.
* ಕೆಟ್ಟ ಕೌಟುಂಬಿಕ ಹಿನ್ನೆಲೆಯುಳ್ಳ ಮಹಿಳೆಯನ್ನು ಮದುವೆಯಾಗಬಾರದು. ಅಂತಹ ಜನರು ತಮ್ಮ ಕುಟುಂಬದ ಸದಸ್ಯರಿಂದ ಕೆಟ್ಟ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಪುರುಷರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.
* ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬೇಡಿ ಎಂದು ಚಾಣುಕ್ಯ ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಯ ಎಲ್ಲ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು. ಮನೆಗೆಲಸ ಮಾಡಲಾಗದ ಮಹಿಳೆ ತನ್ನ ಗಂಡನಿಗೆ ಹೊರೆಯಾಗುತ್ತಾಳೆ.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಇಲ್ಲಿದೆ ಜೀವನದ ಗುಟ್ಟು… ಅಪ್ಪಿತಪ್ಪಿಯೂ ಈ ವಿಚಾರಗಳನ್ನು ಎಂದಿಗೂ ಯಾರೊಂದಿಗೂ ಹೇಳಿಕೊಳ್ಳಬೇಡಿ! Chanakya Niti
ನೀವು ಸಮಾಜದಲ್ಲಿ ಗೌರವ ಸಂಪಾದಿಸಬೇಕಾ? ಹಾಗಾದ್ರೆ ಇಂದಿನಿಂದಲೇ ಈ 5 ಅಭ್ಯಾಸಗಳನ್ನು ಬಿಟ್ಟುಬಿಡಿ…