ಚಾಣಕ್ಯ ನೀತಿ: ಈ ವಿಷಯಗಳನ್ನು ಇತರರೊಂದಿಗೆ ಅಪ್ಪಿತಪ್ಪಿಯೂ ಹಂಚಿಕೊಳ್ಳಬಾರದಂತೆ! | Chanakya Niti

untitled-design-37-687e56ff73bdc
Published on

Chanakya Niti: ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಜೀವನ ಸೇರಿದಂತೆ ಇತರ ಮಾಹಿತಿಯನ್ನು ಹಂಚಿಕೊಳ್ಳುವ ಚಾಳಿ ವ್ಯಸನವಾಗಿ ಬಿಟ್ಟಿದೆ. ಅಲ್ಲದೆ, ಇದನ್ನು ಟ್ರೆಂಡ್​ ಅಂತಲೂ ಕರೆಯುತ್ತಾರೆ. ಆಚಾರ್ಯ ಚಾಣುಕ್ಯ ಪ್ರಕಾರ, ಅಲೋಚನೆ ಮತ್ತು ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಕೆಲ ವಿಷಯಗಳು ನಮ್ಮಲ್ಲಿಯೇ ರಹಸ್ಯವಾಗಿ ಉಳಿಸಿಕೊಳ್ಳುವುದು ಒಳಿತು ಎಂದು ಹೇಳುತ್ತಾರೆ. ಹಾಗಾದ್ರೆ ಚಾಣಕ್ಯ ಹೇಳಿದ್ದೇನೆ ಎಂದು ತಿಳಿಯೋಣ.

1.ಬುದ್ಧಿವಂತರ ಲಕ್ಷಣ

ಜಗತ್ತಿಗೆ ಎಲ್ಲವನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಕೆಲ ವಿಷಯಗಳು ನಮ್ಮಲ್ಲಿಯೇ ಉಳಿಸಿಕೊಳ್ಳುವುದು ಒಳಿತು. ಕೆಲ ವಿಷಯಗಳು ಬಹಿರಂಗಪಡಿಸಿದ್ರೆ ಅಪಾಯನೇ ಜಾಸ್ತಿ ಎಂದು ಚಾಣುಕ್ಯ ಹೇಳಿದ್ದಾರೆ. ವೈಯಕ್ತಿಕ ಸಂಬಂಧಗಳು, ವೃತ್ತಿಪರ ಅವಕಾಶಗಳು ಮತ್ತು ಭದ್ರತೆಯಲ್ಲಿ ಸಮಸ್ಯೆಗಳು ಉಂಟಾಗಬಹುದು. ಏನು ಹೇಳಬೇಕು? ಏನು ರಹಸ್ಯವಾಗಿಡಬೇಕು? ಆಚಾರ್ಯ ಚಾಣಕ್ಯರು ಬುದ್ಧಿವಂತ ವ್ಯಕ್ತಿಯ ಲಕ್ಷಣವೆಂದರೆ ಯೋಚಿಸಿ ನಿರ್ಧರಿಸುವುದು ಎಂದು ಹೇಳಿದ್ದಾರೆ.

2.ಇವರು ಬುದ್ಧಿವಂತರು

ಇತ್ತೀಚಿನ ದಿನಗಳಲ್ಲಿ ಅನೇಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲವನ್ನೂ ಹಂಚಿಕೊಳ್ಳುವದು ಅಭ್ಯಾಸವಾಗಿ ಬಿಟ್ಟಿದೆ. ವೈಯಕ್ತಿಕ ಭಾವನೆ, ವಿಷಯ, ಹಣಕಾಸಿನ ವಿಷಯ, ಪ್ರಯಾಣ ಸೇರಿದಂತೆ ಇತರ ವಿಷಯಗಳನ್ನು ಬಹಿರಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಚಾರ್ಯ ಚಾಣಕ್ಯರು ಇಂತಹ ಮಾತುಗಳನ್ನು ಹೇಳುವ ಮೊದಲು 100 ಬಾರಿ ಯೋಚಿಸಬೇಕು ಮತ್ತು ಕೆಲವು ವಿಷಯಗಳ ಬಗ್ಗೆ ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂದು ಸಲಹೆ ನೀಡಿದರು.

3.ಪ್ರೀತಿಯಲ್ಲಿ ಗೌಪ್ಯತೆ

ಚಾಣಕ್ಯನ ಪ್ರಕಾರ, ಪ್ರೀತಿ ಒಂದು ಅವರ್ಚನೀಯ ಭಾವನೆ. ಅದು ಬಲವಾಗಿ ಬೆಳೆಯುವವರಿಗೂ ಅದನ್ನು ರಹಸ್ಯವಾಗಿಡುವುದು ಬುದ್ಧಿವಂತ ನಿರ್ಧಾರ ಏಕೆಂದರೆ.. ಅಲ್ಪಾವಧಿಯ ಅರ್ಥಹೀನ ಒಪ್ಪಂದಗಳು ಅಥವಾ ಇತರರ ಹಸ್ತಕ್ಷೇಪದಿಂದಾಗಿ ಬಂಧವು ಮುರಿದುಹೋಗುವ ಅಪಾಯವಿದೆ. ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಂಡ ನಂತರವೇ ಹೊರಗಿನ ಪ್ರಪಂಚಕ್ಕೆ ತಿಳಿಸುವುದು ಉತ್ತಮ.

4.ಸ್ನೇಹದ ಅಡಿಪಾಯೇ ನಂಬಿಕೆ

ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ಸ್ನೇಹಿತ ನಮ್ಮನ್ನು ನಂಬಿ ರಹಸ್ಯ ಹಂಚಿಕೊಂಡರೆ.ನಾವು ಅವರ ನಂಬಿಕೆಯನ್ನು ಉಳಿಸಿಕೊಂಡರೆ ಮಾತ್ರ ನಾವು ನಿಜವಾದ ಸ್ನೇಹಿತರಾಗಿ ನಿಲ್ಲುತ್ತೇವೆ.ಒಮ್ಮೆ ರಹಸ್ಯ ಬಹಿರಂಗವಾದರೆ.. ಆ ಸಂಬಂಧದಲ್ಲಿ ವಿಶ್ವಾಸವನ್ನು ಮರಳಿ ಪಡೆಯುವುದು ತುಂಬಾ ಕಷ್ಟ.

5. ಮನೆಯ ಸಮಸ್ಯೆಗಳು ಮನೆಯಲ್ಲಿಯೇ ಪರಿಹಾರ

ಮನೆಯಲ್ಲಿ ನಡೆಯುವ ಘರ್ಷಣೆಗಳ ಬಗ್ಗೆ ಹೊರಗೆ ಹೇಳುವುದು ಅರ್ಥಹೀನ ಎಂದು ಚಾಣುಕ್ಯ ಹೇಳುತ್ತಾರೆ. ಅದು ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ದುರ್ಬಲಗೊಳಿಸುತ್ತದೆ. ಕುಟುಂಬ ಎಂದರೆ ಪರಸ್ಪರ ನಂಬಿಕೆ ಮತ್ತು ಗೌರವ. ಅಂತಹ ಮನೆಯಲ್ಲಿ ಸಮಸ್ಯೆ ಉದ್ಭಿಸಿದ್ರೆ ಮನೆಯಲ್ಲಿಯೇ ಪರಿಹರಿಸಿಕೊಳ್ಳಿ. ಇದರಿಂದ ಬಂಧ ಗಟ್ಟಿಗೊಳ್ಳುತ್ತದೆ. ಕುಟುಂಬದ ಸಮರಸ್ಯ ಹೆಚ್ಚುತ್ತದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net