ಕಟ್ಟಡ ಮತ್ತು ಇತರೆ ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚ, ಅಪಘಾತ ಪರಿಹಾರ ಹೆಚ್ಚಳ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊAಡ ಕಾರ್ಮಿಕರಿಗೆ ನೀಡುವ ಅಂತ್ಯಕ್ರಿಯೆ ವೆಚ್ಚದ ಅನುಗ್ರಹ ರಾಶಿ ಸಹಾಯಧನ ಹಾಗೂ ಅಪಘಾತ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ.

ನೋಂದಾಯಿತ ಕಾರ್ಮಿಕರು ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ವೆಚ್ಚ ಮತ್ತು ಕುಟುಂಬದ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಅನುಗ್ರಹ ರಾಶಿ ರೂಪದಲ್ಲಿ ೭೫,೦೦೦ ರೂ.ಗಳ ಸಹಾಯಧನ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು ೧,೫೦,೦೦೦ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಾರ್ಮಿಕರು ಕೆಲಸದ ಸ್ಥಳಗಳಲ್ಲಿ ಉಂಟಾಗುವ ಅಪಘಾತದಲ್ಲಿ ಮೃತಪಟ್ಟರೆ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುತ್ತಿದ್ದ, ೫,೦೦,೦೦೦ ರೂ.ಗಳ ಪರಿಹಾರ ಧನವನ್ನು ೮,೦೦,೦೦೦ ರೂ.ಗಳಿಗೆ ಹೆಚ್ಚಿಸಿದೆ.

ಈ ಪರಿಷ್ಕೃತ ಮೊತ್ತವನ್ನು ಪಡೆಯಲು ಜುಲೈ ೧೬ ರಂದು ಅಥವಾ ತದನಂತರ ಸಂಭವಿಸಿದ್ದಲ್ಲಿ ಮಾತ್ರ ಫಲಾನುಭವಿಗಳು ಪರಿಷ್ಕೃತ ಮೊತ್ತಕ್ಕೆ ಅರ್ಹರಿರುತ್ತಾರೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿ ಡಿ. ಭಾರತಿ ತಿಳಿಸಿರುತ್ತಾರೆಂದು ಕಾರ್ಮಿಕ ಅಧಿಕಾರಿ ಆರ್.ವರಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net