ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

untitled-design-13-68790d611d7f8
Published on

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ ಅವರು ನೀತಿಯನ್ನು ಹೇಳುತ್ತಿರಲಿಲ್ಲ. ಅವರ ನೀತಿ ಸಮಸ್ತ ಸೃಷ್ಠಿಗೆ ಕೂಡ ಅನ್ವಯವಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ವಿದುರ ನೀಡಿರುವ ನೀತಿ-ನಿಯಮಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಅತ್ಯುತ್ತಮ ಮಟ್ಟವನ್ನು ತಲುಪಬಹುದು. ಸಂತೋಷದಿಂದ ಇರಲು ಯಾವ ರೀತಿಯ ಜನರಿಂದ ದೂರ ಇರಬೇಕು ಎಂದು ವಿದುರ ಹೇಳಿದ್ದಾನೆ ತಿಳಿಯೋಣ.

ಪಕ್ಕದಲ್ಲಿರುವ ಹಿತ ಶತ್ರುಗಳು

ಅನೇಕ ಜನರು ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುತ್ತಾರೆ. ಇದು ಸಾಮಾನ್ಯ ಮನುಷ್ಯ ನಡುವಳಿಕೆ. ಇಂತಹ ಜನರು ಆತ್ಮ ವಿಶ್ವಾಸವನ್ನು ಹಾಳು ಮಾಡುತ್ತಾರೆ. ನಿಮ್ಮ ಜೀವನ ತುಂಬಾ ನಕಾರಾತ್ಮಕ ಭಾವನೆ ತುಂಬುತ್ತಾರೆ. ಅವರು ನಿಮ್ಮ ಪ್ರಗತಿ ಮತ್ತು ಶಾಂತಿಗೆ ಅಡ್ಡಿಯಾಗ್ತರೆ. ಅವರು ಬೇರೆ ಯಾರು ಅಲ್ಲ, ನಮ್ಮ ಸುತ್ತ ಮತ್ತು ಪಕ್ಕದಲ್ಲಿರುವ ಶತ್ರುಗಳು. ಇವರಿಂದ ದೂರ ಇರಬೇಕು ಎಂದು ವಿದುರ ನೀತಿ ಹೇಳುತ್ತದೆ.

ಅಸೂಯೆ ಪಡುವವರಿಂದ ದೂರ ಇರಿ

ಇತರರ ಬಗ್ಗೆ ಅಸೂಯೆ ಪಡುವ ಜನರು ಯಾವಾಗಲೂ ನಕಾರಾತ್ಮಕತೆಯನ್ನು ಹರಡುತ್ತಾರೆ. ಅವರು ತಮ್ಮ ಮಾತು, ಆಲೋಚನೆಗಳು ಮತ್ತು ನಡವಳಿಕೆಯಿಂದ ಯಾರನ್ನಾದರೂ ಕಡಿಮೆ ಮಾಡುತ್ತಾರೆ. ಅವರು ಇತರರನ್ನು ಟೀಕಿಸುತ್ತಾರೆ. ಅಂತಹ ಜನರಿಂದ ದೂರವಿರುವುದು ಉತ್ತಮ.

ಮಾನಸಿಕ ಶಾಂತಿಗೆ ಭಂಗ

ಯಾರಾದರೂ ನಿಮ್ಮ ಯಶಸ್ಸು ಅಥವಾ ಸಂತೋಷದ ಬಗ್ಗೆ ಅಸೂಯೆ ಪಟ್ಟರೆ, ಅವರು ನಿಮ್ಮನ್ನು ಮುಜುಗರಕ್ಕೀಡು ಮಾಡಲು ಅಥವಾ ನಿಮ್ಮ ಸಂತೋಷವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಅವರ ಗಾಸಿಪ್ ಮತ್ತು ವ್ಯಂಗ್ಯದ ಮಾತುಗಳು ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡಬಹುದು.

ಅವರ ಮೇಲೆ ನಂಬಿಕೆ ಬೇಡ

ನಿಮ್ಮ ಯಶಸ್ಸು ಮತ್ತು ಪ್ರಗತಿಯನ್ನು ನೋಡಿ ಅಸೂಯೆ ಪಡುವವರು ನಿಮ್ಮ ನಾಶವನ್ನು ಹುಡುಕುತ್ತಾರೆ. ಅವರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಾರೆ. ಅಂತಹ ಜನರು ನೀಡುವ ಸಲಹೆಯನ್ನು ಎಂದಿಗೂ ಅನುಸರಿಸಬೇಡಿ. ಅವರನ್ನು ನಂಬಬೇಡಿ.

ವಿದುರ ಹೇಳಿದ್ದೇನು?

ನಿಮ್ಮನ್ನು ಅಸೂಯೆಪಡುವವರನ್ನು ಗುರುತಿಸಿ ಮತ್ತು ಅವರಿಂದ ದೂರವಿರಿ. ಅವರ ಮಾತುಗಳನ್ನು ನಿರ್ಲಕ್ಷಿಸಿ. ಸಕಾರಾತ್ಮಕ, ಪ್ರಗತಿಪರ ಜನರೊಂದಿಗೆ ಸಹವಾಸ ಮಾಡಿ. ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net