ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾನೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಚಾಣಕ್ಯ ತತ್ವಗಳ ಪ್ರಕಾರ ಜೀವನದಲ್ಲಿ ಯಶಸ್ವಿಯಾಗಲು ಬಯಸುವವರು ಕೆಲ ಗುಣಗಳನ್ನು ಹೊಂದಿರುವ ಜನರೊಂದಿಗೆ ಸ್ವಲ್ಪ ಜಾಗರೂಕರಾಗಿರಬೇಕು. ಆ ನಾಲ್ಕು ಜನರು ಯಾರೆಂಬುದನ್ನು ನಾವೀಗ ತಿಳಿಯೋಣ.
1. ನೀರನ್ನು ಜೀವನದಲ್ಲಿ ಬಹಳ ಮುಖ್ಯವೆಂದು ನೋಡಲಾಗುತ್ತದೆ. ಅದನ್ನು ಸರಿಯಾಗಿ ನಿಭಾಯಿಸಲು ತಿಳಿದಿರುವವರಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ನೀರು ಮತ್ತು ಬೆಂಕಿಯ ಬಗ್ಗೆ ತಲೆಕೆಡಿಸಿಕೊಳ್ಳದವರು ಅಥವಾ ನೀರನ್ನು ಸರಿಯಾಗಿ ಸರಿಯಾಗಿ ಬಳಸದವರು ಬದುಕಿರುವಾಗಲೇ ನರಕವನ್ನು ನೋಡುತ್ತಾರೆ ಎನ್ನುತ್ತಾರೆ ಚಾಣಕ್ಯ.
2. ಸಿಂಹ, ಕರಡಿ, ಹುಲಿಯಂತಹ ಅಪಾಯಕಾರಿ ಪ್ರಾಣಿಗಳಿಂದ ದೂರವಿರುವುದು ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಕೆಲವರು ಈ ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಸಾಕುತ್ತಾರೆ. ಆದರೆ, ತನ್ನ ಒಡನಾಟವನ್ನು ಲೆಕ್ಕಿಸದೆ ಜೀವ ತೆಗೆಯುವ ಪ್ರಾಣಿಗಳಾಗಿ ಇವುಗಳನ್ನು ನೋಡಲಾಗುತ್ತದೆ. ಅದೇ ರೀತಿ ಇಂತಹ ಮೃಗೀಯ ಜನರನ್ನು ನಿಮ್ಮ ಜೀವನದಿಂದ ದೂರವಿಡುವುದು ತುಂಬಾ ಉತ್ತಮ. ಜೊತೆಯಲ್ಲೇ ಇದ್ದುಕೊಂಡು ದ್ರೋಹ ಬಗೆಯುವವರ ಬಗ್ಗೆ ತುಂಬಾ ಎಚ್ಚರವಿರಲಿ.
3. ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ ಅಸೂಯೆ ಪಡುವ ಮತ್ತು ಸ್ವಾರ್ಥ ವ್ಯಕ್ತಿಗಳಿಂದ ದೂರವಿರಬೇಕು. ಸವಾಲಿನ ಸಂದರ್ಭಗಳಲ್ಲಿ ಅಂತಹ ಜನರು ದುರಾಸೆ ಮತ್ತು ಅಸೂಯೆಯ ವಿಷಯದಲ್ಲಿ ನಿಮಗೆ ಹಾನಿಯನ್ನುಂಟುಮಾಡುವುದರಿಂದ ಅಂತಹ ಜನರ ಬಳಿ ಸಹಾಯ ಕೇಳಬಾರದು. ವಾಸ್ತವದಲ್ಲಿ, ಅಸೂಯೆ ಸ್ವಭಾವದವರಿಗೆ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅವರು ಎಂದಿಗೂ ಇತರರ ಪ್ರಗತಿ ಮತ್ತು ಯಶಸ್ಸಿನ ಬಗ್ಗೆ ತೃಪ್ತರಾಗುವುದಿಲ್ಲ.
4. ಸೋಮಾರಿಗಳನ್ನು ಎಂದಿಗೂ ಹತ್ತಿರ ಇಟ್ಟುಕೊಳ್ಳಬೇಡಿ. ಅವರು ನಿಮ್ಮ ಜೀವನವನ್ನೇ ಹಾಳು ಮಾಡುತ್ತಾರೆ. ಸೋಮಾರಿ ಜನರಿಗೆ ಗೆಲುವು ಬಹಳ ದೂರವಾಗಿರುತ್ತದೆ. ಇಂತಹ ವ್ಯಕ್ತಿಗಳೊಂದಿಗೆ ನೀವು ಡೇಟಿಂಗ್ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಕನಸುಗಳನ್ನು ನಾಶಪಡಿಸುತ್ತಾರೆ.
5. ಚಾಣಕ್ಯನ ಪ್ರಕಾರ ಕೋಪದ ಸ್ವಭಾವದವರನ್ನು ಎಂದಿಗೂ ಸಂಪರ್ಕಿಸಬಾರದು ಎಂದು ಸಲಹೆ ನೀಡುತ್ತಾರೆ. ಮನುಷ್ಯನ ದೊಡ್ಡ ಶತ್ರುವೇ ಕೋಪ. ಕೋಪವು ವ್ಯಕ್ತಿಯ ತಾರ್ಕಿಕ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಕೋಪಗೊಂಡ ವ್ಯಕ್ತಿಯು ತನ್ನನ್ನು ಮತ್ತು ಇತರರನ್ನು ಸಹ ನೋಯಿಸುತ್ತಾನೆ. ಕೋಪವು ಒಬ್ಬ ವ್ಯಕ್ತಿಯು ಸರಿ ಮತ್ತು ತಪ್ಪುಗಳ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಅವರ ಸ್ವಂತ ತೃಪ್ತಿಯ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ. ಈ ವ್ಯಕ್ತಿಗಳು ವಿರೋಧಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಚಾಣಕ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
ಚಾಣಕ್ಯನ ಪ್ರಕಾರ ಈ ಅಪಾಯಕಾರಿ ಅಭ್ಯಾಸಗಳು ನಿಮ್ಮ ಸೌಂದರ್ಯವನ್ನೇ ಕಸಿದುಕೊಳ್ಳುತ್ತೆ!
ಶಿಕ್ಷಣ, ಮಾಡೆಲಿಂಗ್ ಮತ್ತು… ಈ ಬ್ಯೂಟಿಫುಲ್ IPS ಅಧಿಕಾರಿಯ ಹಿಂದಿದೆ ಒಂದು ಮನಮಿಡಿಯುವ ಕತೆ!
ವರುಣ್ ವಿರುದ್ಧ ಖಾಸಗಿ ಫೋಟೋ ಇಟ್ಕೊಂಡು ಬ್ಲಾಕ್ಮೇಲ್ ಮಾಡಿದ ಆರೋಪ: ಹೊಸ ಟ್ವಿಸ್ಟ್ ಕೊಟ್ಟ ವರ್ಷಾ ಕಾವೇರಿ