ವರುಣ್​ ವಿರುದ್ಧ ಖಾಸಗಿ ಫೋಟೋ ಇಟ್ಕೊಂಡು ಬ್ಲಾಕ್​ಮೇಲ್ ಮಾಡಿದ​ ಆರೋಪ: ಹೊಸ ಟ್ವಿಸ್ಟ್​ ಕೊಟ್ಟ ವರ್ಷಾ ಕಾವೇರಿ

Varun Varsha Breakup

ಬೆಂಗಳೂರು: ಸೋಶಿಯಲ್​ ಮೀಡಿಯಾ ಸ್ಟಾರ್​ ಹಾಗೂ ಬೃಂದಾವನ ಸೀರಿಯಲ್​ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ವರ್ಷಾ ಕಾವೇರಿ ತನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿರುವ ಸ್ಟೋರಿ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ತನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ವರಣ್​ ಬ್ಲಾಕ್​ಮೇಲ್ ಮಾಡುತ್ತಿದ್ದಾರೆ ಎಂದು ವರ್ಷಾ ಕಾವೇರಿ ದೂರು ನೀಡಿರುವುದಾಗಿ ನಿನ್ನೆಯಿಂದ ಅನೇಕ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ವರ್ಷಾ ಕಾವೇರಿ ಇನ್​​ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ವರುಣ್​​ ಆರಾಧ್ಯ ಅವರು ಸೀರಿಯಲ್​ಗೆ ಎಂಟ್ರಿ ಕೊಡುವ ಮುನ್ನವೆ ಇವರಿಬ್ಬರ ಬ್ರೇಕಪ್​ ಆಗಿತ್ತು. ಇನ್​ಸ್ಟಾಗ್ರಾಂ ​ಸೇರಿದಂತೆ ಎಲ್ಲಾ ಫ್ಲಾಟ್​ಫಾರ್ಮ್​ನಲ್ಲಿ ಈ ಜೋಡಿ ಫೇಮಸ್​ ಆಗಿತ್ತು. 4 ವರ್ಷದ ಹಿಂದೆ ಇನ್​ಸ್ಟಾಗ್ರಾಂನಲ್ಲಾದ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಆದರೆ, ವರುಣ್​​ ಆರಾಧ್ಯ, ವರ್ಷಾ ಕಾವೇರಿ ಜತೆ ಪ್ರೀತಿಯಲ್ಲಿರುವಾಗಲೇ ಬೇರೊಂದು ಹುಡುಗಿ ಜತೆ ಅಫೇರ್ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಫೋನ್‌ನಲ್ಲಿ‌ ಮತ್ತೊಂದು ‌ಯುವತಿ ಜತೆಗಿದ್ದ ಖಾಸಗಿ ‌ಫೋಟೋಗಳು ಪತ್ತೆಯಾದ ಬಳಿಕ, ಅದರ ಬಗ್ಗೆ ಪ್ರಶ್ನೆ ಮಾಡಿದ್ದೆ. ಈ ವೇಳೆ ಬೆದರಿಕೆ ಹಾಕಿದ್ದನು ಎಂದು ವರ್ಷಾ ಕಾವೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮಗಳ ವರದಿಗಳು ಹೇಳಿದ್ದವು.  ಆದರೆ ಇದು ಸುಳ್ಳು ಅಂತ ವರ್ಷಾ ಕಾವೇರಿ ಇದೀಗ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಶೇರ್​ ಮಾಡಿರುವ ವರ್ಷಾ, ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವುದು ಸುಳ್ಳು ಮಾಹಿತಿಯಾಗಿದೆ. ಇದು ಇನ್​ಸ್ಟಾಗ್ರಾಂ ಪ್ರೊಫೈಲ್​ ಮತ್ತು ಇತರ ಸಾಮಾಜಿಕ ಮಾಧ್ಯಮ ಫ್ಲಾಟ್​ಫಾರ್ಮ್​​ಗಳಿಂದ ಎಲ್ಲಾ ರೀಲ್​ಗಳನ್ನು ತೆಗೆದುಹಾಕುವುದರ ಕುರಿತು… ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ… ಎಂದು ವರ್ಷಾ ಬರೆದಿದ್ದಾರೆ. ಈ ಮೂಲಕ ತನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ಅಲ್ಲದೆ, ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಯಾರೆಲ್ಲ ಮೆಸೇಜ್ ಮಾಡುತ್ತಿದ್ದೀರಾ ಅವರೆಲ್ಲ ಸುಮ್ಮನಿರಿ ಇನ್ನು ಕೆಲವೇ ದಿನಗಳಲ್ಲಿ ನಾನು ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.

Insta Story

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಖ್ಯಾತಿ ಪಡೆದಿರುವ ವರುಣ್‌ ಆರಾಧ್ಯಾ ಹಾಗೂ ವರ್ಷಾ ಕಾವೇರಿ ಸದ್ಯ ದೂರವಾಗಿರುವ ಹಕ್ಕಿಗಳಾಗಿದ್ದಾರೆ. ಅವರಿಬ್ಬರೂ ದೂರವಾಗಿರುವುದಕ್ಕೆ ಕಾರಣ ವರುಣ್‌ ಅವರು ಬೇರೆ ಯಾವುದೋ ಹುಡುಗಿಯ ಜೊತೆ ಸಂಬಂಧ ಹೊಂದಿರುವುದು ಎಂದು ಹೇಳಲಾಗಿತ್ತು. ಇದೀಗ ನಟನ ಮೇಲೆ ದೊಡ್ಡ ಆರೋಪ ಕೇಳಿ ಬಂದಿದ್ದು, ಈ ಸುದ್ದಿ ಸೋಷಿಯಲ್‌ ಮಿಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಇನ್ನು ಇನ್​ಸ್ಟಾಗ್ರಾಂ ಪ್ರೊಫೈಲ್​ ಪ್ರಕಾರ ವರ್ಷಾ ಕಾವೇರಿ, ಮೇಕಪ್​ ಆರ್ಟಿಸ್ಟ್​ ಮತ್ತು ಕ್ರಿಯೇಟಿವ್​ ಕ್ರಿಯೆಟರ್​. 6 ಲಕ್ಷ ಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಅವರ ಖಾತೆಯಲ್ಲಿ ವರುಣ್​ ಜತೆಗೆ ರೀಲ್ಸ್​ ಮಾಡಿದ ವಿಡಿಯೋಗಳೇ ತುಂಬಿರುತ್ತಿದ್ದವು. ಆದರೆ, ಎಲ್ಲವನ್ನು ಡಿಲೀಟ್​ ಮಾಡಿದ್ದಾರೆ.

ಬ್ರೇಕಪ್​ ಬಗ್ಗೆ ಸ್ಪಷ್ಟನೆ
ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತು ಎಂದು. ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾನು ಮತ್ತು ವರುಣ್​ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ನಿಮಗೆ ಗೊತ್ತಿಲ್ಲದ ಸಂಗತಿ ಏನೆಂದರೆ ವರುಣ್​ ನನ್ನನ್ನು ಬಿಟ್ಟು ಮತ್ತೊಂದು ಹುಡುಗಿಯನ್ನು ಲವ್​ ಮಾಡುತ್ತಿದ್ದಾರೆ. ನಾನಿಲ್ಲಿ ಆ ಹುಡುಗಿಯ ಹೆಸರನ್ನು ಹೇಳಿ ಆಕೆಯ ಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ. ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ಅವನಿಗೆ ಎಷ್ಟು ಬಾರಿ ಹೇಳಿದರೂ ಆ ಹುಡುಗಿಯನ್ನು ಬಿಡಲು ತಯಾರಿಲ್ಲ. ನಾನು ನಿನ್ನನ್ನು ಪ್ರೀತಿಸಲು ಬಯಸುವುದಿಲ್ಲ, ನಾನು ಆ ಹುಡುಗಿಯೊಂದಿಗೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಆತ ಹೇಳಿದಾಗ ಅದು ನನಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಮತ್ತು ವರುಣ್‌ನ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವವರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಅನಿಸುತ್ತದೆ. ಹೀಗಾಗಿ ನಾನಿಂದು ನಿಮಗೆ ತಿಳಿಸುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೇಮ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯೊಂದಿಗೆ ಸಂತೋಷವಾಗಿರಲಿ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದೆ. ನಾನು ಅವರಿಗಾಗಿ ನನ್ನ ಜೀವನವನ್ನು ನಡೆಸಬೇಕಿದೆ. ಹೀಗಾಗಿ ನನಗೆ ಅನಿಸಿದ್ದನ್ನು ನಿಮಗೆ ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನವೇ ನನ್ನ ಮಾರ್ಗವಾಗಿದ್ದು, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಮತ್ತು ಇನ್ನು ಮುಂದೆಯೂ ನನ್ನನ್ನು ಬೆಂಬಲಿಸಿ, ಧನ್ಯವಾದಗಳು ಎಂದು ವರ್ಷಾ ಈ ಹಿಂದೆ ಸುದೀರ್ಘವಾಗಿ ಬರೆದುಕೊಂಡಿದ್ದರು.

ಇದೀಗ ವರ್ಷಾ ಕಾವೇರಿ ಅವರು ವರುಣ್​ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದರೆ, ಇನ್ನೊಂದೆಡೆ ವರ್ಷಾ ಕಾವೇರಿ ತನ್ನ ವಿರುದ್ಧ ಹರಿದಾಡುತ್ತಿರುವುದೆಲ್ಲ ಸುಳ್ಳು ಸುದ್ದಿ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಪ್ರಕರಣ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬೃಂದಾವನ ಸಿರಿಯಲ್​ ನಟ ವರುಣ್​​​ ಆರಾಧ್ಯ ವಿರುದ್ಧ FIR; ಕಾರಣ ಹೀಗಿದೆ…

ರೀಲ್ಸ್​ ಜೋಡಿಯ ಬ್ರೇಕಪ್​ ಕಹಾನಿ! ವರುಣ್​-ವರ್ಷಾ ಮಧ್ಯೆ ಮತ್ತೊಬ್ಬಳ ಎಂಟ್ರಿ, ಗುಟ್ಟು ಬಿಚ್ಚಿಟ್ಟ ಕಾವೇರಿ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…