ಪಾಕ್​​ನ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ಭಾರತ ದಾಳಿ ಮಾಡಿದೆ ಎಂಬುದು ಸುಳ್ಳು: ಸ್ಪಷ್ಟನೆ ನೀಡಿದ Central Government

Central Government
Published on

Central Government: ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ಭಾರತ ಡ್ರೋನ್ ದಾಳಿ ನಡೆಸಿದೆ ಎಂಬುದು ಸುಳ್ಳು ಎಂದು ಕೇಂದ್ರ ಸರ್ಕಾರ ಶನಿವಾರ (ಮೇ.10) ಸ್ಪಷ್ಟನೆ ನೀಡಿದೆ.

"ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಭಾರತವು ನಂಖಾನಾ ಸಾಹಿಬ್ ಗುರುದ್ವಾರದ ಮೇಲೆ ಡ್ರೋನ್ ದಾಳಿ ನಡೆಸಿದೆ ಎಂದು ಹೇಳುತ್ತಿದ್ದು, ಇದು ಸಂಪೂರ್ಣವಾಗಿ ಸುಳ್ಳು" ಎಂದು ಪಿಐಬಿ ಸತ್ಯ ಪರಿಶೀಲನಾ ಘಟಕ ತಿಳಿಸಿದೆ. ಭಾರತದಲ್ಲಿ ಕೋಮು ದ್ವೇಷವನ್ನು ಸೃಷ್ಟಿಸಲು ಇಂತಹ ವಿಷಯವನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದೆ.

ನಂಖಾನ ಸಾಹಿಬ್ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮಸ್ಥಳವಾಗಿದೆ ಮತ್ತು ಗುರುದ್ವಾರವು ಸಿಖ್ಖರಿಗೆ ಪೂಜ್ಯ ದೇವಾಲಯ ಮತ್ತು ಯಾತ್ರಾ ಕೇಂದ್ರವಾಗಿದೆ.

ಪಾಕಿಸ್ತಾನದ ಸೈಬರ್ ದಾಳಿಯಿಂದಾಗಿ ಭಾರತದ ವಿದ್ಯುತ್ ಜಾಲವು ನಿಷ್ಕ್ರಿಯಗೊಂಡಿದೆ ಮತ್ತು ಮುಂಬೈ-ದೆಹಲಿ ವಿಮಾನಯಾನ ಮಾರ್ಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆಗಳನ್ನು ಕೂಡ ಸರ್ಕಾರ ಸುಳ್ಳು ಎಂದು ತಿಳಿಸಿದೆ.

ಕಾರ್ಯಾಚರಣೆಯ ಕಾರಣಗಳಿಂದಾಗಿ ದೆಹಲಿ ಮತ್ತು ಮುಂಬೈ ವಿಮಾನ ಮಾಹಿತಿ ಪ್ರದೇಶಗಳಲ್ಲಿನ 25 ವಿಭಾಗಗಳ ವಾಯು ಸಂಚಾರ ಸೇವೆ (ATS) ಮಾರ್ಗಗಳ ತಾತ್ಕಾಲಿಕ ಮುಚ್ಚುವಿಕೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ವಿಸ್ತರಿಸಿದೆ ಎಂದು ಸ್ಪಷ್ಟನೆ ನೀಡಿದೆ.

ಭಾರತದ ಮೇಲೆ ಪಾಕಿಸ್ತಾನದ ದಾಳಿಗಳು ಮುಂದುವರೆದಿವೆ. ಜಮ್ಮುವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಡೋನ್ ದಾಳಿ ನಡೆಸಿತು. ಜಮ್ಮು ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ. ನಡೆಸಲಾಯಿತು. ಜಮ್ಮುವಿನ ಒಟ್ಟು ಏಳು ಸ್ಥಳಗಳಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಅಮೃತಸರಗಳಲ್ಲಿ ವಿದ್ಯುತ್ ವ್ಯತ್ಯಯ ಹೇರಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಅನ್ನೂರ್‌ನಲ್ಲಿ ಸೈರನ್‌ಗಳು ಮೊಳಗಿದವು. ಭಾರತ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು. ಪಾಕಿಸ್ತಾನ ಎರಡು ಜೆಎಫ್ -17 ಯುದ್ಧ ವಿಮಾನಗಳನ್ನು ಮತ್ತು ಒಂದು ಎಫ್ -16 ವಿಮಾನವನ್ನು ಹೊಡೆದುರುಳಿಸಿತು. ಅದು 5400 ಮೂಲಕ 10 ಪಾಕಿಸ್ತಾನಿ ಡೋನ್‌ಗಳನ್ನು ಹೊಡೆದುರುಳಿಸಿತು. ಪಾಕಿಸ್ತಾನವು ಪಠಾಣ್‌ ಕೋಟ್ ವಾಯುನೆಲೆಯನ್ನೂ ಗುರಿಯಾಗಿಸಿಕೊಂಡಿತು. ಪಾಕಿಸ್ತಾನವು ಕ್ಷಿಪಣಿ ವಿರೋಧಿ ವ್ಯವಸ್ಥೆಗಳಿಂದ ಪತ್ತೆಹಚ್ಚಲು ಸಾಧ್ಯವಾಗದ ಡೋನ್‌ಗಳನ್ನು ಉಡಾಯಿಸುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net