ಕೋರ್ಟ್​ಗೆ ಬಂದು ಹೇಳಿಕೆ ದಾಖಲಿಸಲು ಸಿಡಿ ಲೇಡಿಗೆ ಸೂಚಿಸಿದ ಜಡ್ಜ್: ಮಧ್ಯಾಹ್ನ 3 ಕ್ಕೆ ಯುವತಿ ಹಾಜರು

cd
Published on

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಗೆ ಕೋರ್ಟ್​ಗೆ ಬಂದು ಹೇಳಿಕೆ ದಾಖಲಿಸಲು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಯುವತಿ ಪರ ವಕೀಲ ಜಗದೀಶ್ ಕುಮಾರ್ ಅವರಿಗೆ ಯುವತಿಯನ್ನು ಕೋರ್ಟ್​ಗೆ ಕರೆದುಕೊಂಡು ಬರಲು ಕೋರ್ಟ್​ ಹೇಳಿತು. ಅಲ್ಲದೇ ಕೋರ್ಟ್​​ಗೆ ಹೇಳಿಕೆ ದಾಖಲಿಸುವ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಎಸ್​ಐಟಿ ಸಲ್ಲಿಸಲಿಲ್ಲ. ಹೀಗಾಗಿ ಇಂದೇ ಯುವತಿ ಕೋರ್ಟ್​ಗೆ ಬಂದು ಜಡ್ಜ್​ ಮುಂದೆ ಹೇಳಿಕೆ ದಾಖಲಿಸಲಿದ್ದಾಳೆ ಎನ್ನಲಾಗಿದೆ. ತದನಂತರ ಎಸ್​ಐಟಿ ತನಿಖಾಧಿಕಾರಿ ಮುಂದೆ ಹಾಜರಾಗಿ ಯುವತಿ ಹೇಳಿಕೆ ನೀಡಲಿದ್ದಾಳೆ ಎನ್ನಲಾಗಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ ಕುಮಾರ್ ಅವರು ಸಂತ್ರಸ್ತ ಯುವತಿಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್​​ ಮುಂದೆ ಹಾಜರುಪಡಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಿಡಿ ಲೇಡಿ: ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಿಡಿ ಲೇಡಿ ಬೆಂಗಳೂರಿನಲ್ಲಿಯೇ ಇದ್ದಾಳೆ ಎನ್ನಲಾಗುತ್ತಿದೆ. ಇದೀಗ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಸೇರಿ 8 ಅಧಿಕಾರಿಗಳ ತಂಡ ಯುವತಿಗೆ ಭದ್ರತೆ ನೀಡಲು ಸಿದ್ದವಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ 24ನೇ ಎಸಿಎಂಎಂ ಕೋರ್ಟ್ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ.

ಸಿಡಿ ಲೇಡಿ ದೂರು ಎಸ್ಐಟಿಗೆ ವರ್ಗಾವಣೆ: ಯುವತಿ ಕಬ್ಬ‌ನ್‌‌ಪಾಕ್‌೯ ಪೊಲೀಸರಿಗೆ ನೀಡಿದ ದೂರನ್ನು ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರು ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಎಸಿಪಿ ಕವಿತಾ ಅವರನ್ನು ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಹೀಗಾಗಿ ಕವಿತಾ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net