ಆಲಿಗಢ: ರಸ್ತೆ ಬದಿ ನಿಂತಿದ್ದ ಯುವಕನ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಆಲಿಗಢದಲ್ಲಿ ನಡೆದಿದೆ. ಮೃತನನ್ನು ಹರೀಶ್ (25) ಅಲಿಯಾಸ್ ಕಟ್ಟಾ ಎಂದು ಗುರುತಿಸಲಾಗಿದ್ದು, ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ಮನೆಯ ಆಚೆ ಇಬ್ಬರು ಯುವಕರು ಮಾತನಾಡುತ್ತ ನಿಂತಿದ್ದು, ಕೊಲೆಯಾದ ಹರೀಶ್ ಜತೆಗಿದ್ದ ವ್ಯಕ್ತಿ ಅಲ್ಲೇ ಕುಳಿತುಕೊಳ್ಳುತ್ತಾರೆ. ಈ ವೇಳೆ ಬೈಕಿನಲ್ಲಿ ಬರುವ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಹರೀಶ್ ಮೇಲೆ ಗುಂಡು ಹಾರಿಸಿದ್ದು, ಜತೆಗಿದ್ದಾತ ಓಡಿ ಹೋಗುತ್ತಾರೆ. ದುಷ್ಕರ್ಮಿಗಳ ಗುಂಪು 6-7 ಬಾರಿ ಹರೀಶ್ ಮೇಲೆ ಗುಂಡು ಹಾರಿಸಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ಧಾನೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಕೂಗಿಕೊಳ್ಳುತ್ತ ಓಡಿ ಬರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ (Video Viral) ನೋಡಬಹುದಾಗಿದೆ.
Warning: Mockery of law and order in UP
In UP’s Aligarh, a young man identified as Haarish was gunned down after 4 bike-borne assailants (seen in the CCTV grab) ambushed and opened indiscriminate fire at the victim. The assailants could be seen firing from close range as the… pic.twitter.com/woMcbFKBhP
— Piyush Rai (@Benarasiyaa) March 14, 2025
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆ ಬೆಳಗಿನ ಜಾವ 3:00 ಘಂಟೆ ಸುಮಾರಿಗೆ ನಡೆದಿದ್ದು, ಸೆಹ್ರಿ ಪ್ರಾರ್ಥನೆ ಶುರುವಾಗುವುದಕ್ಕೂ ಮುನ್ನ ಈ ಕೊಲೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಹರೀಶ್ ಎಂಬುವವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಯಾವ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮೃತರ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಅರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಕ್ಕೆ ತುತ್ತಾಗಿದ್ದ ಆಟಗಾರ ಈಗ ಸಂಪೂರ್ಣ ಫಿಟ್; ಐಪಿಎಲ್ ಆರಂಭಕ್ಕೂ ಮುನ್ನ ಎಲ್ಎಸ್ಜಿಗೆ ಸಿಕ್ತು ಭರ್ಜರಿ ಸುದ್ದಿ
6 ತಿಂಗಳ ಮಗುವಿನೊಂದಿಗೆ ವಿಮಾನ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್