6 ತಿಂಗಳ ಮಗುವಿನೊಂದಿಗೆ ವಿಮಾನ​ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್​​

Flight Travel
Published on

ನವದೆಹಲಿ: ಪುಟ್ಟ ಮಕ್ಕಳನ್ನು ಕರೆದುಕೊಂಡು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವುದು ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಏಕೆಂದರೆ ಪುಟ್ಟ ಮಕ್ಕಳು ಹೊಸ ಜಾಗದ ಭಯ ಅಥವಾ ಕಿರಿಕಿರಿ ಉಂಟಾಗಿ ಹಠ ಹಿಡಿಯುತ್ತಾರೆ. ಇದರಿಂದ ಸಹ ಪ್ರಯಾಣಿಕರು ಕಿರಿಕಿರಿಯನ್ನು ಅನುಭವಿಸಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಈ ನಿಟ್ಟಿನಲ್ಲಿ ವಿಮಾನ (Flight) ಪ್ರಯಾಣದ ವೇಳೆ ದಂಪತಿಗಳಿಬ್ಬರು ಮಾಡಿರುವ ಕೆಲಸವೊಂದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾಜಿಕ ಜಾಲತಾಣದ ರೆಡ್ಡಿಟ್​ನಲ್ಲಿ ಇದಕ್ಕೆ ಸಂಬಂಧಿಸಿದ ಪೋಸ್ಟ್ ಒಂದು ವೈರಲ್ ಆಗಿದ್ದು, ದಂಪತಿಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಅವರು ಬರೆದಿರುವ ಕ್ಯೂಟ್ ಪತ್ರವೊಂದು ವೈರಲ್ ಆಗಿದ್ದು, ಚಾಕೋಲೇಟ್ ಹಾಗೂ ಇಯಪ್ಲ್​ಗಗಳನ್ನು ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೈರಲ್ ಆಗಿರುವ ಪೋಸ್ಟ್ ನೋಡುವುದಾದರೆ ಇದು ನಮ್ಮ ಮಗುವಿನ ಮೊದಲ ವಿಮಾನ ಪ್ರಯಾಣ, ಮಗು ವಿಮಾನದಲ್ಲಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಐಡಿಯಾ ನಮಗಿರಲಿಲ್ಲ ಅದಕ್ಕಾಗಿ ಸಹ ಪ್ರಯಾಣಿಕರಿಗೆ ಚಾಕೋಲೇಟ್‌ ಮತ್ತು, ಇಯರ್‌ ಪ್ಲಗ್‌ಗಳನ್ನು ನೀಡಿದ್ದೇವೆ ಎಂದು ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾಗಿದೆ.

ನನ್ನ ಹೆಸರು ಜೆರೆಮಿಯಾ, ಇದು ನನ್ನ ಮೊದಲ ವಿಮಾನ (Flight) ಪ್ರಯಾಣ. ನಾನು 6 ತಿಂಗಳ ಮಗುವಾಗಿರುವುದರಿಂದ, ಹಸಿವು ಕಿರಿಕಿರಿಯಿಂದ ಅಳಬಹುದು ಅಥವಾ ಜೋರಾಗಿ ಡ್ರಾಮಾ ಮಾಡಬಹುದು. ಹೀಗೆ ಇದರಿಂದ ಏನಾದ್ರೂ ನಿಮಗೆ ಕಿರಿಕಿರಿ ಆದರೆ ಕ್ಷಮಿಸಿ, ದಯವಿಟ್ಟು ಈ ಇಯರ್‌ಪ್ಲಗ್‌ ಮತ್ತು ಚಾಕೊಲೇಟ್‌ಗಳನ್ನು ಆನಂದಿಸಿ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಾರ್ಚ್​ 11ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 7.5 ಸಾವಿರಕ್ಕೂ ಅಧಿಕ ಜನರನ್ನು ತಲುಪಿದ್ದು, ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ. ಅನೇಕರು ದಂಪತಿಯ ಕಾರ್ಯವನ್ನು ಹಾಡಿ ಹೊಗಳುತ್ತಿದ್ದು, ನಿಜಕ್ಕೂ ಇದೊಂದು ಒಳ್ಳೆಯ, ಚಿಂತನಶೀಲ ನಡೆಯಾಗಿದೆ ಎಂದು ಕಮೆಂಟ್ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net