ಐಪಿಎಲ್ ಆರಂಭಕ್ಕೂ ಮುನ್ನ ಹೇರ್​ಸ್ಟೈಲ್ ಚೇಂಜ್​​; ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ವಿರಾಟ್​ ಕೊಹ್ಲಿಯ ಹೊಸ ಲುಕ್​

Virat Kohli
Published on

ಮುಂಬೈ: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕಲ್ಕತ್ತಾ ನೈಟ್​ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗಲಿದೆ. ಈಗಾಗಲೇ ಉಬೈ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ನೂತನ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ ಕಾರಣ ಯಾರ ತಂತ್ರ ಕೈಹಿಡಿಯಲಿದೆ ಎಂಬುದನ್ನು ಕಾಡು ನೋಡಬೇಕಿದೆ.

ಈಗಾಗಲೇ ಆರ್​ಸಿಬಿ ತಂಡದ ಆಟಗಾರರು ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದ್ದು, ಪ್ರಮುಖ ಆಕರ್ಷಣೆ ವಿರಾಟ್ ಕೊಹ್ಲಿ (Virat Kohli) ಈವರೆಗೆ ತಂಡವನ್ನು ಕೂಡಿಕೊಂಡಿಲ್ಲ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಬಳಿಕ ಫ್ಯಾಮಿಲಿಯೊಂದಿಗೆ ವೆಕೇಷನ್ ಮೂಡ್​ಗೆ ಜಾರಿದ್ದ ವಿರಾಟ್​ ಮೊನ್ನೆಯಷ್ಟೇ ಭಾರತಕ್ಕೆ ಬಂದಿಳಿದಿದ್ದು, ಬಂದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನ ಎಬ್ಬಿಸಿದ್ದಾರೆ.

ಸಾಮಾನ್ಯವಾಗಿ ನಾವು ನೋಡಿರುವಂತೆ ವಿರಾಟ್ ಕೊಹ್ಲಿ (Virat Kohli) ಪ್ರಮುಖ ಟೂರ್ನಿಯ ಸಮಯದಲ್ಲಿ ತಮ್ಮ ಹೇರ್​ಸ್ಟೈಲ್​ಅನ್ನು ಬದಲಿಸುತ್ತಾರೆ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಐಪಿಎಲ್ ಆರಂಭವಾಗುವುದಕ್ಕೂ ಮುನ್ನ ವಿರಾಟ್​ ಕೊಹ್ಲಿ ತಮ್ಮ ಹೊಸ ಹೇರ್​ಸ್ಟೈಲ್​  ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಮೂಲದ ಆಕಿಮ್ ಹಾಲೀಮ್​ ವಿರಾಟ್​ ಕೊಹ್ಲಿಗೆ ಹೊಸ ಲುಕ್​ ನೀಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಸೊ ಟ್ರೆಂಡ್ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net