VIDEO | ಕ್ವಾರಂಟೈನ್​ನಲ್ಲಿ ಟೀಮ್​ ಇಂಡಿಯಾ ಆಟಗಾರರ ಭರ್ಜರಿ ವರ್ಕ್​ಔಟ್​

zim web
Published on

ಮುಂಬೈ: ಇಂಗ್ಲೆಂಡ್​ ಪ್ರವಾಸಕ್ಕೆ ತೆರಳುವ ಮುನ್ನ ಮುಂಬೈನಲ್ಲಿ ಕ್ವಾರಂಟೈನ್​ ಆಗಿರುವ ಟೀಮ್​ ಇಂಡಿಯಾ ಆಟಗಾರರು ಹೋಟೆಲ್​ನಲ್ಲಿ ದೈಹಿಕ ವ್ಯಾಯಾಮಗಳನ್ನು ಆರಂಭಿಸುವ ಮೂಲಕ ಫಿಟ್ನೆಸ್​ನತ್ತ ಗಮನಹರಿಸಿದ್ದಾರೆ. ಆಟಗಾರರ ವರ್ಕ್​ಔಟ್​ ವಿಡಿಯೋವನ್ನು ಟ್ವಿಟರ್​ನಲ್ಲಿ ಪ್ರಕಟಿಸಿರುವ ಬಿಸಿಸಿಐ, ಪ್ರತಿದಿನ ಬಲಿಷ್ಠರಾಗುತ್ತಿದ್ದೇವೆ ಎಂದು ಬರೆದುಕೊಂಡಿದೆ.

ಅಜಿಂಕ್ಯ ರಹಾನೆ, ಮಯಾಂಕ್​ ಅಗರ್ವಾಲ್​, ಮೊಹಮದ್​ ಶಮಿ, ರಿಷಭ್​ ಪಂತ್​, ಇಶಾಂತ್​ ಶರ್ಮ, ಶುಭಮಾನ್​ ಗಿಲ್​ ಮುಂತಾದ ಆಟಗಾರರು ಹೋಟೆಲ್​ ಜಿಮ್​ನಲ್ಲಿ ಬೆವರು ಹರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮೇ 19ರಿಂದ ಕ್ವಾರಂಟೈನ್​ನಲ್ಲಿರುವ ಹೆಚ್ಚಿನ ಆಟಗಾರರು ಜಿಮ್​ನಲ್ಲಿ ಸಿಕ್ಕ ಅವಕಾಶವನ್ನು ದೈಹಿಕ ಕಸರತ್ತಿಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಜೂನ್​ 2ರಂದು ತಂಡ ಲಂಡನ್​ ವಿಮಾನ ಏರುವ ಮುನ್ನ ಎಲ್ಲ ಆಟಗಾರರು 3 ನೆಗೆಟಿವ್​ ವರದಿಗಳನ್ನು ಹೊಂದಿರಬೇಕಾಗುತ್ತದೆ. ತಂಡದ ಹೆಚ್ಚಿನ ಆಟಗಾರರು ಈಗಾಗಲೆ ಕರೊನಾ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡಿದ್ದಾರೆ. ಪ್ರವಾಸದ ಆರಂಭದಲ್ಲಿ ಬ್ರಿಟನ್​ನಲ್ಲೂ ಮೊದಲ 10 ದಿನ ಆಟಗಾರರು ಕ್ವಾರಂಟೈನ್​ನಲ್ಲಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net