ವಿದ್ಯಾರ್ಥಿಗೆ ಟೆರೆರಿಸ್ಟ್​ ಎಂದ ಪ್ರೊಫೆಸರ್​: ವಿದ್ಯಾರ್ಥಿ ಒಕ್ಕೂಟದಿಂದ ದೂರು; ಕೆಲಸದಿಂದ ವಜಾ ಮಾಡಿ ಕುಲಪತಿ ಆದೇಶ! Professor Calls Student Terrorist

ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಪ್ರೊಫೆಸರ್
ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಪ್ರೊಫೆಸರ್
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗೆ ಟೆರರಿಸ್ಟ್ ಎಂದ ಪ್ರೊಫೆಸರ್
  • ಪಿ.ಇ.ಎಸ್​. ಪ್ರೊಫೆಸರ್ ವಿರುದ್ಧ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ದೂರು ದಾಖಲು
  • ಆರೋಪಿದ ಅಧ್ಯಾಪಕನನ್ನು ಕೆಲಸದಿಂದ ಹೊರಹಾಕಿದ ವಿವಿ ಕುಲಪತಿ
  • ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿರುವ ಕುಲಪತಿ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಪಿ.ಇ.ಎಸ್​ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಒಬ್ಬರು ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಟೆರೆರಿಸ್ಟ್ (Professor Calls Student Terrorist)​ ಎಂದು ಕರೆದ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ.
ಈಗ ಈ ಘಟನೆ ಕುರಿತು ಆಕ್ರೋಶ ಹೊರಹಾಕಿರುವ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಕಾಲೇಜಿನ ಕೊಠಡಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಯೊಬ್ಬನನ್ನು ಉಗ್ರಗಾಮಿ ಎಂದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಿದ್ಯಾರ್ಥಿಗೆ ಭಯೋತ್ಪಾದಕ ಎಂದು ಕರೆದಿರುವ ಪ್ರೊ. ಮುರಳಿಧರ್​ ದೇಶಪಾಂಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ​ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿ ದೂರನ್ನು ನೀಡಿದೆ.

ಪ್ರೊಫೆಸರ್​ ಸಸ್ಪೆಂಡ್​​!

ಈ ರೀತಿಯ ಘಟನೆ ನಮ್ಮ ವಿವಿ ಯಲ್ಲಿ ಇದುವರೆಗೆ ಎಂದಿಗೂ ನಡೆದಿಲ್ಲ, ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೀಡಿರುವ ದೂರನ್ನು ಸ್ವೀಕರಿಸಿರುವ ವಿವಿ ಕುಲಪತಿ, ಆರೋಪಿತ ಪ್ರೊಫೆಸರ್​ ಮೇಲೆ ಆಂತರಿಕ ತನಿಖೆ ನಡೆಯುತ್ತಿದ್ದು, ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೆವೆ. ಅಲ್ಲಿಯವರೆಗೆ ಪ್ರೊಫೆಸರ್​ ಮುರಳಿಧರ್​ ದೇಶಪಾಂಡೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕುಲಪತಿಗಳು ಪ್ರಕಟಣೆ ನೀಡಿದ್ದಾರೆ.

ಪ್ರಕರಣದ ಹಿನ್ನಲೆ

ಪ್ರೊ. ಡಾ. ಮುರಳಿಧರ್​ ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅಫ್ನಾನ್ ಎಂಬ ವಿದ್ಯಾರ್ಥಿ, ನಾನು ಒಬ್ಬರನ್ನು ಬೇಟಿ ಮಾಡಲು ಹೋಗಬೇಕು, ನಿಮ್ಮ ಕ್ಲಾಸ್​ಗೆ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದ್ದಾನೆ.
ಈ ಮಾತನ್ನು ಕೇಳಿಸಿಕೊಂಡು ಸಿಟ್ಟಿಗೆದ್ದ, ಪ್ರೊ. ಮುರಳಿಧರ್​, ನಾನು ಇವತ್ತು ಶಾಂತಯುತವಾಗಿ ತರಗತಿ ನಡೆಸಲು ಬಂದರೆ ಎಲ್ಲಾ ಹಾಳು ಮಾಡಿದಿರಿ. ಈ ಮಾತನ್ನು ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ ​ಟೆರೆರಿಸ್ಟ್​ ಎಂದು ಅಫ್ನಾನ್ ಮೇಲೆ ರೇಗಿದ್ದಾರೆ.
ಇಷ್ಟಕ್ಕೆ ಮಾತನ್ನು ನಿಲ್ಲಿಸದ ಪ್ರೊಫೆಸರ್​, ನಿಮ್ಮಿಂದಲೇ ಇರಾನ್​ನಲ್ಲಿ ಯುದ್ಧ ನಡೆಯುತ್ತಿದೆ. ನೋಡ್ತಾಯಿರು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಿಮಗೆ ಸರಿಯಾದ ಪಾಠ ಕಲಿಸುತ್ತಾನೆ. ಟ್ರಂಪ್​ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಾನೆ, ಗೋ ಟು ಹೆಲ್​ ಎಂದು ಪ್ರೊ. ಮುರಳಿಧರ್ ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net