ನಿಮ್ಮಿಂದಲೇ ಇರಾನಿನಲ್ಲಿ ಯುದ್ಧ ನಡೆಯುತ್ತಿದೆ: ಮುಸ್ಲಿಂ ವಿದ್ಯಾರ್ಥಿಗೆ ಟೆರೆರಿಸ್ಟ್​ ಎಂದ ಪ್ರೊಫೆಸರ್​; ವಿಡಿಯೋ ವೈರಲ್​! Professor calls Muslim Student a Terrorist

ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ಕರೆದ ಪ್ರೊಫೆಸರ್
ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ಕರೆದ ಪ್ರೊಫೆಸರ್
Published on

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ಕರೆದ ಪ್ರೊಫೆಸರ್
  • ಬೆಂಗಳೂರಿನ ಪಿ.ಎ.ಎಸ್​ ಕಾಲೇಜಿನಲ್ಲಿ ನಡೆದಿರುವ ಘಟನೆ
  • ಪ್ರೊಫೆಸರ್​ ವಿರುದ್ಧ ದೂರು ದಾಖಲು
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾವು ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದ ಕ್ಲಾಸ್​ರೂಮ್​ನ್ನು ತಲುಪಿದ್ದು, ಪ್ರೊಫೆಸರ್​ ವಿದ್ಯಾರ್ಥಿಯೊಬ್ಬನಿಗೆ ಟೆರೆರಿಸ್ಟ್​ ಎಂಬ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಈ ಘಟನೆ ಬೆಂಗಳೂರಿನ ಪಿ.ಇ.ಎಸ್​ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, ಪ್ರೊ. ಡಾ. ಮುರಳಿಧರ್​ ದೇಶಪಾಂಡೆ ಅವರು ಅಫ್ನಾನ್​ ಎಂಬ ವಿದ್ಯಾರ್ಥಿಗೆ ಟೆರೆರಿಸ್ಟ್​ (Professor calls Muslim Student a Terrorist) ಎಂದು ಕರೆದಿದ್ದಾರೆ ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಏನಿದು ಘಟನೆ?

ಪ್ರೊ. ಡಾ. ಮುರಳಿಧರ್​ ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅಫ್ನಾನ್ ಎಂಬ ವಿದ್ಯಾರ್ಥಿ, ನಾನು ಒಬ್ಬರನ್ನು ಬೇಟಿ ಮಾಡಲು ಹೋಗಬೇಕು, ನಿಮ್ಮ ಕ್ಲಾಸ್​ಗೆ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ, ಎಂದು ಹೇಳಿದ್ದಾನೆ.
ಈ ಮಾತನ್ನು ಕೇಳಿಸಿಕೊಂಡು ಸಿಟ್ಟಿಗೆದ್ದ, ಪ್ರೊ. ಮುರಳಿಧರ್​, ನಾನು ಇವತ್ತು ಶಾಂತಯುತವಾಗಿ ತರಗತಿ ನಡೆಸಲು ಬಂದರೆ ಎಲ್ಲಾ ಹಾಳು ಮಾಡಿದಿರಿ. ಈ ಮಾತನ್ನು ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ ​ಟೆರೆರಿಸ್ಟ್​ ಎಂದು ಅಫ್ನಾನ್ ಮೇಲೆ ರೇಗಿದ್ದಾರೆ.
ಇಷ್ಟಕ್ಕೆ ಮಾತನ್ನು ನಿಲ್ಲಿಸದ ಪ್ರೊಫೆಸರ್​, ನಿಮ್ಮಿಂದಲೇ ಇರಾನ್​ನಲ್ಲಿ ಯುದ್ಧ ನಡೆಯುತ್ತಿದೆ. ನೋಡ್ತಾಯಿರು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಿಮಗೆ ಸರಿಯಾದ ಪಾಠ ಕಲಿಸುತ್ತಾನೆ. ಟ್ರಂಪ್​ ನಿನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಾನೆ, ಗೋ ಟು ಹೆಲ್​ ಎಂದು ಪ್ರೊ. ಮುರಳಿಧರ್ ಆಕ್ರೋಶ ಹೊರಹಾಕಿದ್ದಾರೆ.

ಪ್ರೊಫೆಸರ್​ ಮೇಲೆ ಕಂಪ್ಲೇಂಟ್ ದಾಖಲು

ಕ್ಲಾಸ್​ರೂಮಿನಲ್ಲಿ ನಡೆದ ಈ ಘಟನೆಯನ್ನು ನಿನ್ನೊಬ್ಬ ವಿದ್ಯಾರ್ಥಿ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾನೆ.
ಈ ಘಟನೆಯ ವಿಡಿಯೋ ಎಲ್ಲಾ ಕಡೆ ಹರಿದಾಡಿದ ನಂತರ, ವಿಶ್ವ ವಿದ್ಯಾಲಯದ ಕುಲಪತಿಗಳು ಪ್ರೊ. ಡಾ. ಮುರಳಿಧರ್​ ದೇಶಪಾಂಡೆ ಅವರನ್ನು ಕೆಲಸದಿಂದ ಸಸ್ಪೆಂಡ್​ ಮಾಡಿದ್ದು, ಆಂತರಿಕ ತನಿಖೆಯನ್ನು ನಡೆಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಈ ರೀತಿಯ ಘಟನೆ ನಮ್ಮ ವಿವಿ ಯಲ್ಲಿ ಇದುವರೆಗೆ ಎಂದಿಗೂ ನಡೆದಿಲ್ಲ, ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net