ಜೈಲು ಪಾಲಾದ ಕೆಬಿಸಿ ವಿಜೇತೆ: ನೆರೆ ಸಂತ್ರಸ್ತರ ಪರಿಹಾರ ನುಂಗಿದ ಅಮಿತಾ ಸಿಂಗ್​ ಅರೆಸ್ಟ್​! KBC Winner Amita Singh

ನೆರೆ ಪರಿಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
ನೆರೆ ಪರಿಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
Published on

ಪ್ರಮುಖ ಮುಖ್ಯಾಂಶಗಳು

  • ಜೈಲು ಪಾಲಾದ ಕೆಬಿಸಿ ವಿಜೇತೆ
  • ಅಮಿತಾಭ್​ ಬಚ್ಚನ್ ಕೈಯಿಂದ 50 ಲಕ್ಷ ಬಹುಮಾನ ಪಡೆದಿದ್ದ ತಹಶೀಲ್ದಾರ್
  • ನೆರೆ ಪರಿಹಾರಕ್ಕೆ ಸಂಬಂಧಿಸಿದ ಹಗರಣದಲ್ಲಿ ಅಮಿತಾ ಸಿಂಗ್ ತೋಮರ್ ಅರೆಸ್ಟ್
ಮಧ್ಯಪ್ರದೇಶ: ಜೀವನದಲ್ಲಿ ಹಣವನ್ನು ಗಳಿಸಬೇಕೆನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿ ಮೂಡುವ ಸಹಜ ಆಸೆಯಾಗಿದೆ. ಆದರೆ ಈ ಆಸೆಯನ್ನು ಇಡೇರಿಸಿಕೊಳ್ಳಲು ಅಡ್ಡದಾರಿ ಹಿಡಿದರೆ, ಗಳಿಸಿದ ದುಡ್ಡು ನಮಗೆ ದಕ್ಕುವುದಿಲ್ಲ ಎನ್ನುವುದಕ್ಕೆ ಈ ಯುವತಿಯ ಪ್ರಕರಣವೇ ತಾಜಾ ಉದಾಹರಣೆಯಾಗಿದೆ.

ಕೆಬಿಸಿಯಲ್ಲಿ ಐವತ್ತು ಲಕ್ಷ ಗೆದ್ದಿದ್ದ ಮಹಿಳೆ!

ಭಾರತೀಯ ಟೆಲಿವಿಷನ್​ ಇಂಡಸ್ಟ್ರಿಯಲ್ಲಿ ಅತ್ಯಂತ ಯಶಸ್ಸನ್ನು ಕಂಡಿರುವ ಯಾವುದಾದರೂ ಒಂದು ಕಾರ್ಯಕ್ರಮವಿದ್ದರೆ ಅದು ಕೋನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮ. ಈ ಕಾರ್ಯಕ್ರದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಮೂಲಕ ಕೋಟಿ ಹಣವನ್ನು ಗೆಲ್ಲುವ ಅವಕಾಶ ಇರುತ್ತದೆ.
ಈ ಕಾರ್ಯಕ್ರಮದ ಮೊದಲ ಪ್ರಯೋಗ ಹಿಂದಿ ಭಾಷೆಯಲ್ಲಿ ನಡೆದಿದ್ದು, ಇಲ್ಲಿ ಬಾಲಿವುಡ್​ನ ಖ್ಯಾತ ನಟ ಅಮಿತಾಭ್​ ಬಚ್ಚನ್​ ನಿರೂಪಕರಾಗಿ ಈ ಪ್ರೋಗ್ರಾಮ್​ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ಸುದ್ದಿಯಲ್ಲಿರುವ ಮಹಿಳೆ 2019 ರಲ್ಲಿ ಇದೇ ಕೆಬಿಸಿ ಕಾರ್ಯಕ್ರಮದಲ್ಲಿ ಐವತ್ತು ಲಕ್ಷ ನಗದು ಬಹುಮಾನ ಗೆದ್ದಿದ್ದಳು.

2.5 ಕೋಟಿ ಹಗರಣದ ಪ್ರಮುಖ ಆರೋಪಿ

2019 ರಲ್ಲಿ ಅಮಿತಾಭ್​ ಬಚ್ಚನ್​ ಅವರ ಕೈಯಿಂದ ಐವತ್ತು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದ ಅಮಿತಾ ಸಿಂಗ್​ ತೋಮರ್(KBC Winner Amita Singh)​, ಮಧ್ಯಪ್ರದೇಶ ಸರ್ಕಾರದಲ್ಲಿ ತಹಶೀಲ್ದಾರ್ ಆಗಿ ಸುಮಾರು 2.5 ಕೋಟಿ ಹಗರಣದಲ್ಲಿ ಭಾಗಿಯಾದ ಕಾರಣ ಇಕೆಯನ್ನು ಗುರುವಾರ (ಮಾರ್ಚ್​ 26) ಗ್ವಾಲಿಯರ್​ ಪೊಲೀಸರು ಬಂಧಿಸಿದ್ದಾರೆ.
ಅಮಿತಾ ಸಿಂಗ್​ 2021 ರಲ್ಲಿ ಗ್ವಾಲಿಯರ್​ನ ತಹಶೀಲ್ದಾರ್ ಆಗಿದ್ದಾಗ, ಅಂದು ಸಂಭವಿಸಿದ್ದ ಪ್ರವಾಹಕ್ಕೆ ತುತ್ತಾಗಿದ್ದ ಸಂತ್ರಸ್ತರಿಗೆ ನೀಡಬೇಕಿದ್ದ ಧನ ಪರಿಹಾರವನ್ನು ದುರ್ಬಳಿಕೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಕೆಯ ವಿರುದ್ಧ ಸುಮಾರು 110 ಜನ ಸಂತ್ರಸ್ತರು ದೂರನ್ನು ದಾಖಸಲಿದ್ದರು. ಅಮಿತಾ ಸಿಂಗ್​ ಕೆಲಸಕ್ಕೆ ಗೈರಾಗಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು, ಆದರೆ ನಾವು ಇವರನ್ನು ಗ್ವಾಲಿಯರ್​ನಲ್ಲಿ ಬಂಧಿಸಿದ್ದೆವೆ ಎಂದು ಎಸ್ಪಿ ಸುಧೀರ್​ ಕುಮಾರ್​ ಅರ್ಗವಾಲ್​ ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net