ನೇಮಕಾತಿ ಅಕ್ರಮ ತಡೆಗೆ ಹೊಸ ಮಾರ್ಗ: ಓಎಂಆರ್ ಕಾರ್ಬನ್ ಪ್ರತಿ ಸಲ್ಲಿಸುವಂತೆ ಕೆಪಿಎಸ್‌ಸಿ ಸೂಚನೆ

ಕರ್ನಾಟಕ ಲೋಕಸೇವಾ ಆಯೋಗ
ಕರ್ನಾಟಕ ಲೋಕಸೇವಾ ಆಯೋಗ
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಬಿ ಮತ್ತು ಉಳಿಕೆ ಮೂಲ ವೃಂದದ 277 ಹಾಗೂ ಹೈ-ಕ ವೃಂದದ 50 ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ
  • ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಕಚೇರಿಗೆ ಖುದ್ದು ಹಾಜರಾಗಿ ಸಲ್ಲಿಸುವಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಸೂಚನೆ
  • ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಓಎಂಆರ್ ಉತ್ತರ ಹಾಳೆಯ ಕಾರ್ಬನ್ ಪ್ರತಿಯನ್ನು ಮೇ 25ರಿಂದ 30ರೊಳಗೆ ಸಲ್ಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಸೂಚನೆ
  • ಅಭ್ಯರ್ಥಿಯು ಕಾರ್ಬನ್ ರಹಿತ ಒಎಂಆರ್ ಉತ್ತರ ಹಾಳೆಯ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಭ್ಯರ್ಥಿತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಸೂಚನೆ
ಬೆಂಗಳೂರು: ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಬಿ ಮತ್ತು ಉಳಿಕೆ ಮೂಲ ವೃಂದದ 277 ಹಾಗೂ ಹೈ-ಕ ವೃಂದದ 50 ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಓಎಂಆರ್ ಉತ್ತರ ಹಾಳೆಯ ಕಾರ್ಬನ್ ಪ್ರತಿಯನ್ನು ಮೇ 25ರಿಂದ 30ರೊಳಗೆ ಸಲ್ಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಸೂಚನೆ ನೀಡಿದೆ.
ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಕಚೇರಿಗೆ ಖುದ್ದು ಹಾಜರಾಗಿ ಸಲ್ಲಿಸುವಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಸೂಚನೆ ನೀಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದ್ದು, ನೇಮಕಾತಿ ಪ್ರಕ್ರಿಯೆ ಮುಗಿಯುವ ತನಕ ಅಭ್ಯರ್ಥಿಗಳು ತಮ್ಮ ಮೂಲ ಓಎಂಆರ್ ಕಾರ್ಬನ್ ಪ್ರತಿಯನ್ನು ಜೋಪಾನವಾಗಿ ಸಂರಕ್ಷಿಸಿಟ್ಟುಕೊಳ್ಳಬೇಕು. ಒಂದ ವೇಳೆ ಆಯೋಗವು ಯಾವುದೇ ಸಂದರ್ಭದಲ್ಲಿ ಹಾಜರುಪಡಿಸುವಂತೆ ಸೂಚಿಸಿದ್ದಲ್ಲಿ ತಪ್ಪದೇ ಅದೇ ಪ್ರತಿಯನ್ನು ಹಾಜರುಪಡಿಸಬೇಕು. ತಪ್ಪಿದ್ದಲ್ಲಿ ಅಭ್ಯರ್ಥಿತ್ವವನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ತಾತ್ಕಾಲಿಕ ಆಯ್ಕೆಪಟ್ಟಿಗೆ ಸ್ವಿಕೃತವಾಗಿರುವ ಆಕ್ಷೇಪಣೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಕುರಿತಂತೆ ಸಂದೇಹ ವ್ಯಕ್ತವಾಗಿವೆ. ಆದ್ದರಿಂದ ನೇಮಕಾತಿಯ ಸಲುವಾಗಿ ಆಯೋಗದಲ್ಲಿರುವ ಅಭ್ಯರ್ಥಿಗಳ ಮೂಲ ಓಎಂಆರ್ ಹಾಗೂ ಅಭ್ಯರ್ಥಿಗಳ ಬಳಿ ಇರುವ ಕಾರ್ಬನ್ ರಹಿತ ಒಎಂಆರ್ ಪ್ರತಿಯೊಂದಿಗೆ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಕಾರ್ಬನ್ ಪ್ರತಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅಭ್ಯರ್ಥಿಯು ಕಾರ್ಬನ್ ರಹಿತ ಒಎಂಆರ್ ಉತ್ತರ ಹಾಳೆಯ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಭ್ಯರ್ಥಿತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಸೂಚನೆಯನ್ನು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net