‘ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ’; ED ದಾಳಿ, ‘ವಂದೇ ಮಾತರಂ’ ವಿವಾದಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ! Priyank Kharge

ರಾಜ್ಯ ಗೃಹ ಸಚಿವ ಪ್ರಿಯಾಂಕ್​ ಖರ್ಗೆ
ರಾಜ್ಯ ಗೃಹ ಸಚಿವ ಪ್ರಿಯಾಂಕ್​ ಖರ್ಗೆ
Published on
ಬೆಂಗಳೂರು: ಗುರುವಾರ (ಸೆ.10) ಜಾರಿ ನಿರ್ದೇಶನಾಯದ ಅಧಿಕಾರಿಗಳು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಮನೆ, ಕಚೇರಿಗಳ ಮೇಲೆ ನಡೆಸಿರುವ ದಾಳಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಂಡಿಸಿದ್ದಾರೆ. 
ಈ ಇಡಿ, ಐಟಿ, ಸಿಬಿಐ ದಾಳಿ ಎನ್ನುವುದು ಕೇವಲ ರಾಜಕೀಯ ಪ್ರೇರಿತ ದಾಳಿಗಳಾಗಿ ಪರಿವರ್ತಿತವಾಗಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದು ಕೇವಲ ರಾಜಕೀಯ ಪ್ರೇರಿತ ದಾಳಿಯಾಗಿದ್ದು ಎಲ್ಲಾ ರೀತಿಯ ಲೆಕ್ಕವನ್ನು ಕೊಡಲು ನಾವು ತಯಾರಿದ್ದೇವೆ, ಏನೇ ಬಂದರು ಎದುರಿಸಲು ಸಿದ್ಧರಿದ್ದೇವೆಂದು ಸಚಿವರು ಹೇಳಿದ್ದಾರೆ.

ಕಾಂಗ್ರೆಸ್​ ಮೇಲೆ ಮಾತ್ರ ದಾಳಿ!

ಆದರೆ, ಈ ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್​ ನಾಯಕರನ್ನು ಗುರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕೇವಲ ಆಡಳಿತ ಪಕ್ಷದವರ ಮೇಲೆ ಮಾತ್ರ ರೈಡ್​ ನಡೆಸಲಾಗುತ್ತಿದೆ. ವಿರೋಧ ಪಕ್ಷದವರ ಮೇಲೇಕೆ ದಾಳಿ ನಡೆಯುತ್ತಿಲ್ಲ? ಕಾಂಗ್ರೆಸ್​ ನಾಯಕರ ಮೇಲೆ ಇಲ್ಲಿವರೆಗೆ 196 ದಾಳಿ ನಡೆದಿದ್ದೆ ಬಿಜೆಪಿಯ ಕೇವಲ ಇಬ್ಬರ ಮೇಲೆ ದಾಳಿ ನಡೆಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ನಾವು ಎರಡೇ ಪ್ಯಾರಾ ಹಾಡುತ್ತೇವೆ!

ಇನ್ನೂ ರಾಷ್ಟ್ರೀಯ ಗೀತೆ ವಂದೇ ಮಾತರಂ ನ ಸಂಪೂರ್ಣ ಹಾಡನ್ನು ಎರಡು ಪ್ಯಾರಾಗಳಿಗೆ ಕಡಿತಗೊಳಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ನಾವು ಯಾರೋ ಎಂಟು ಜನ ಕುಳಿತುಕೊಂಡು ತೆಗೆದುಕೊಂಡ ನಿರ್ಧಾರವನ್ನು ಒಪ್ಪಲ್ಲ. ರವೀಂದ್ರನಾಥ್ ಟಾಗೋರ್, ಗಾಂಧೀಜಿ, ಬೋಸ್​, ವಲ್ಲಬಭಾಯಿ ಪಟೇಲರು ಎಷ್ಟು ಹಾಡುತ್ತಿದ್ದರೋ ನಾವು ಅಷ್ಟನ್ನೇ ಹಾಡುತ್ತೇವೆ ಎಂದಿದ್ದಾರೆ. ಬ್ರಿಟಿಷರಿಂದ ಪಿಂಚಣಿ ತೆಗೆದುಕೊಂಡವರು ಯಾರೆಂದು ಎಲ್ಲರಿಗೂ ತಿಳಿದಿದೆ. ನಮಗೆ ದೇಶಭಕ್ತಿ ಬಗ್ಗೆ ಬಿಜೆಪಿ ಅಥವಾ ಆರ್​ಎಸ್​ಎಸ್​ನಿಂದ ಕಲಿಯುವುದಿಲ್ಲ ಎಂದು ಹೇಳಿದ್ದಾರೆ. 

ಹತ್ತು ವರ್ಷದಿಂದ ಏನು ಮಾಡಿದ್ದಾರೆ?

ಈಗ ವಂದೇ ಮಾತರಂ ಬಗ್ಗೆ ಮಾತನಾಡುವ ಇವರು ಈಗ ಅಧಿಕಾರಕ್ಕೆ ಬಂದಿದ್ದಾರಾ? ಕಳೆದ ಹತ್ತು ವರ್ಷದಿಂದ ಏನು ಮಾಡ್ತಿದ್ದರು? ಆಗ ಇವರಿಗೆ ವಂದೇ ಮಾತರಂ ನೆನಪಿಗೆ ಬರಲಿಲ್ವ? ವಾಜಪೇಯಿ ಪ್ರಧಾನಿ ಆಗಿದ್ದಾಗ ಇಂಡಿಯಾ ಶೈನಿಂಗ್ ಕ್ಯಾಂಪೇನ್ ನಡೆಸಿದ್ರು, ಆಗ ಏಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈಗ, ಈ ವಿಚಾರ ಏಕೆ ತಂದಿದ್ದಾರೆಂದೆ ಇವರ ವೈಫಲ್ಯ ಎಲ್ಲರಿಗೂ ತಿಳಿಯುತ್ತಿದೆ. ಇಷ್ಟು ವರ್ಷದ ಅಧಿಕಾರದಲ್ಲಿ ಏನು ಕೆಲಸ ಮಾಡಿಲ್ಲವೆಂದು ತಿಳಿದಿದೆ. ಅದನ್ನು ಮುಚ್ಚಿಹಾಕಲು ಈಗ ವಂದೇ ಮಾತರಂ ಅನ್ನು ದೊಡ್ಡ ವಿವಾದವೆಂಬಂತೆ ಬಿಂಬಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net