ಧಾರ್ಮಿಕ ಪ್ರವಾಸಕ್ಕೆ ಭರ್ಜರಿ ಗಿಫ್ಟ್​ ಕೊಟ್ಟ ಸಿದ್ದರಾಮಯ್ಯ: ವಾರಾಣಸಿ,ಮಂತ್ರಾಲಯದಲ್ಲಿ ಕರ್ನಾಟಕದ ಭಕ್ತರಿಗೆ ಧಾರ್ಮಿಕ ಛತ್ರ; ವೈಷ್ಣೋದೇವಿ ಯಾತ್ರಿಗಳಿಗೆ ₹5,000 ಪ್ರೋತ್ಸಾಹ ಧನ! CM Siddaramaiah Budget

2026-27ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತರಿಗೆ ಬಂಪರ್ ಗಿಫ್ಟ್
2026-27ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತರಿಗೆ ಬಂಪರ್ ಗಿಫ್ಟ್
Published on

ಪ್ರಮುಖ ಮುಖ್ಯಾಂಶಗಳು

  • 2025-26ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತರಿಗೆ ಬಂಪರ್ ಗಿಫ್ಟ್
  • ವೈಷ್ಣೋದೇವಿ ಯಾತ್ರೆಗೆ ₹5,000 ಪ್ರೋತ್ಸಾಹ ಧನ
  • ವಾರಾಣಸಿ ಮತ್ತು ಮಂತ್ರಾಲಯದಲ್ಲಿ ಧಾರ್ಮಿಕ ಛತ್ರ ನಿರ್ಮಾಣ
  • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳ ಮೂಲ ಸೌಕರ್ಯಗಳ ಉನ್ನತೀಕರಣ
ಬೆಂಗಳೂರು: ಶುಕ್ರವಾರ (ಮಾ.6) ಸಿಎಂ ಸಿದ್ದರಾಮಯ್ಯನವರು 2026-27 ನೇ ಸಾಲಿನ ಬಜೆಟ್​ನ್ನು ಮಂಡಿಸಿದ್ದು, ಇದು ಸಿದ್ದರಾಮಯ್ಯ (CM Siddaramaiah Budget) ಅವರು ಮಂಡಿಸಿದ 17 ನೇ ಬಜೆಟ್​ ಆಗಿದೆ.
ಬಜೆಟ್​ ಮಂಡನೆಯನ್ನು ಆರಂಭಿಸದ ಸಿಎಂ, ಧಾರ್ಮಿಕ ಪ್ರವಾಸೋಧ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ, ವಾರಾಣಾಸಿ, ಶ್ರೀಶೈಲ ಹಾಗೂ ಮಂತ್ರಾಲಯದಲ್ಲಿ ಭಕ್ತಾಧಿಗಳು ತಂಗಲು ಧಾರ್ಮಿಕ ಛತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೇ, ವೈಷ್ಣೋದೇವಿ ಪ್ರವಾಸಕ್ಕೆ ತೆರಳುವು ಭಕ್ತರಿಗೆ 5,000 ಪ್ರೋತ್ಸಾಹ ಧನ ನೀಡುವುದಾಗಿ ಸಹ ಹೇಳಿದ್ದಾರೆ. ಈ ಯೋಜನೆಯಿಂದಾಗಿ ರಾಜ್ಯದ ಭಕ್ತರು ತಮ್ಮ ಧಾರ್ಮಿಕ ಯಾತ್ರೆಯ ಸಮಯದಲ್ಲಿ ಸಂಭವಿಸುವ ಆರ್ಥಿಕ ಹೊರೆಯಿಂದ ಪಾರಾಗಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಹಾಗೆಯೇ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳ ಮೂಲ ಸೌಕರ್ಯಗಳನ್ನು ಉನ್ನತೀಕರಣ ಗೊಳಿಸಲು ವಿಶೇಷ ಯೋಜನೆಯನ್ನು ರೂಪಿಸುವುದಾಗಿ ಸಿಎಂ ಸಿದ್ದರಾಮಯ್ಯನರು ತಮ್ಮ ಐತಿಹಾಸಿಕ 17 ಬಜೆಟ್​ನಲ್ಲಿ ಘೋಷಿಸಿದ್ದಾರೆ.

ವೈಷ್ಣೋದೇವಿ ಯಾತ್ರೆ ಬಗ್ಗೆ

ವೈಷ್ಣೋದೇವಿ ಯಾತ್ರೆಯು ಜಮ್ಮು ಮತ್ತು ಕಾಶ್ಮೀರದ ತ್ರಿಕುಟ ಪರ್ವತಗಳ ಮೇಲೆ ನೆಲೆಸಿರುವ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಕೈಗೊಳ್ಳುವ ಅತ್ಯಂತ ಪವಿತ್ರವಾದ ಧಾರ್ಮಿಕ ಯಾತ್ರೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 5,200 ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯವನ್ನು ತಲುಪಲು ಭಕ್ತರು ಕತ್ರಾದಿಂದ ಸುಮಾರು 12 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ಸಾಗಬೇಕು.
ದಾರಿಯಲ್ಲಿ ಅರ್ಧಕುಮಾರಿ ಗುಹೆ ಮತ್ತು ಭೈರೋನಾಥ ದೇವಾಲಯಗಳು ಪ್ರಮುಖ ತಾಣಗಳಾಗಿವೆ. ವರ್ಷದ ಯಾವುದೇ ಸಮಯದಲ್ಲಿ ಈ ಯಾತ್ರೆ ಕೈಗೊಳ್ಳಬಹುದಾದರೂ, ನವರಾತ್ರಿಯ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಅತಿ ಹೆಚ್ಚಿರುತ್ತದೆ. ಕಠಿಣ ಹಾದಿಯಾದರೂ, ದೇವಿಯ ದರ್ಶನದಿಂದ ಮನಸ್ಸಿಗೆ ಅಪಾರ ಶಾಂತಿ ಮತ್ತು ಪುಣ್ಯ ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಕಂದಾಯ ಸೇವೆಗೆ ಇ ಕೆವೈಸಿ ಕಡ್ಡಾಯ

ಸಿಎಂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್​ನಲ್ಲಿ 19,845 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಇನ್ನು ಮುಂದೆ ಕಂದಾಯ ಇಲಾಖೆಯ ಸೇವೆಗಳನ್ನು ಪಡೆಯಲು ಇ- ಕೆವೈಸಿ ಮಾಡುವುದು ಕಡ್ಡಾಯ ಎಂದು ಘೋಷಿಸಿದ್ದಾರೆ. ಹೀಗೆ ಇ- ಕೆವೈಸಿ ಕಡ್ಡಾಯ ಮಾಡಿದರೆ ಇಲಾಖೆಯಲ್ಲಿ ಅಕ್ರಮವನ್ನು ತಡೆಯಬಹುದು ಎನ್ನುವುದು ಸರ್ಕಾರದ ವಾದವಾಗಿದೆ.

ಸಿಎಂ ದಾಖಲೆ ಬಜೆಟ್​

ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ.
https://www.facebook.com/share/v/1CPEi22gaQ/
ಸುಮಾರು 4.2 ರಿಂದ 4.5 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net