ಶೌಚಾಲಯದಲ್ಲಿಯೇ ಉಸಿರು ಚೆಲ್ಲಿದ ನ್ಯಾಯಾಧೀಶರ ಪತ್ನಿ: ಸೈಲೆಂಟ್ ಹಾರ್ಟ್ ಅಟ್ಯಾಕ್ ಶಂಕೆ! Heart Attack

ರೈಲಿನ ಶೌಚಾಲಯದಲ್ಲಿ ಮೃತಪಟ್ಟ ನ್ಯಾಯಾಧೀಶನ ಪತ್ನಿ
ರೈಲಿನ ಶೌಚಾಲಯದಲ್ಲಿ ಮೃತಪಟ್ಟ ನ್ಯಾಯಾಧೀಶನ ಪತ್ನಿ
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನ ಶೌಚಾಲಯದಲ್ಲಿ ಮೃತಪಟ್ಟ ನ್ಯಾಯಾಧೀಶನ ಪತ್ನಿ
  • ರಾಜಸ್ಥಾನ ನ್ಯಾಯಾಧೀಶ ರಾಜ್​ಕುಮಾರ್​ ಚೌಹಾಣ್​ ಅವರ ಪತ್ನಿ ಉಷಾ ಚೌಹಾಣ್​ ಸಾವು
  • ಸೈಲೆಂಟ್​ ಹಾರ್ಟ್​ ಅಟ್ಯಾಕ್​ ಶಂಕೆ
ಮಧ್ಯಪ್ರದೇಶ: ರಾಜಸ್ಥಾನದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಪತ್ನಿ, ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ರೈಲಿನ ಶೌಚಾಲಯದೊಳಗೆ ಸಾವ(Heart Attack) ನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ಮಹಿಳೆಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್​ಕುಮಾರ್​ ಚೌಹಾಣ್​ ಅವರ ಪತ್ನಿ ಉಷಾ ಚೌಹಾಣ್​ ಎಂದು ಗುರುತಿಸಲಾಗಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಉಷಾ ಚೌಹಾಣ್ ತಮ್ಮ ಪತಿಯೊಂದಿಗೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (17606) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ದೀರ್ಘಕಾಲದವರೆಗೆ ಶೌಚಾಲಯದಿಂದ ಹೊರಬರದೇ ಇದ್ದಾಗ, ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಶೌಚಾಲಯದ ಬಾಗಿಲನ್ನು ಒಡೆದು ಉಷಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ, ಆದರೆ ಅದಾಗಲೇ ಉಷಾ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ವರದಿಗಳ ಪ್ರಕಾರ, ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಮತ್ತು ಅವರ ಪತ್ನಿ ಜೋಧ್‌ಪುರದಿಂದ ನಿಂಬಹೆರಾಗೆ ಹಿಂತಿರುಗುತ್ತಿದ್ದರು. ಒಟ್ಟಿಗೆ ಪ್ರಯಾಣಿಸುತ್ತಿದ್ದರೂ, ಅವರು ಪ್ರತ್ಯೇಕ ಬೋಗಿಗಳಲ್ಲಿ ಕುಳಿತಿದ್ದರು. ರೈಲು ನಿಂಬಹೆರಾಕ್ಕೆ ಬರುವ ಸ್ವಲ್ಪ ಸಮಯದ ಮೊದಲು, ಉಷಾ ಚೌಹಾಣ್ ತನ್ನ ಪತಿಗೆ ಕರೆ ಮಾಡಿ ತಾನು ವಾಶ್‌ರೂಮ್‌ಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ನಿಂಬಹೆರಾಗೆ ರೈಲು ತಲುಪಿದ ನಂತರ ನ್ಯಾಯಾಧೀಶರು ತಮ್ಮ ಪತ್ನಿ ಬರುವಿಕೆಗಾಗಿ ಬಹಳ ಸಮಯ ಕಾದಿದ್ದಾರೆ. ಆದರೆ ಎಷ್ಟೇ ಸಮಯವಾದರೂ ಪತ್ನಿ ಮರಳದಿದ್ದಾಗ, ಗಾಬರಿಯಾದ ಪತಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈಧ್ಯಕೀಯ ವರದಿಗಳ ಪ್ರಕಾರ, ಉಷಾ ಅವರಿಗೆ ಸೈಲೆಂಟ್​ ಹೃದಯಾಘಾತವಾಗಿದ್ದು, ಅವರು ಶೌಚಾಲಯದಲ್ಲೇ ಕುಸಿತು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net