ಕ್ರಾಫ್ಟನ್ ಜೊತೆ ಕೈಜೋಡಿಸಿದ ಟಾಕ್ಸಿಕ್: ಝೇನ್ ಜಿಗಳನ್ನು ಸೆಳೆಯಲು ಯಶ್​ ಮಾಸ್ಟರ್ ಪ್ಲಾನ್; BGMI ಗೇಮ್‌ಗೆ ಎಂಟ್ರಿ ಕೊಟ್ಟ ರಾಕಿಂಗ್ ಸ್ಟಾರ್! Rocking Star Yash in BGMI

ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್​!
ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್​!
Published on

ಪ್ರಮುಖ ಮುಖ್ಯಾಂಶಗಳು

  • ಯಶ್​ ಅಭಿನಯದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್​
  • ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್​!
  • BGMI ಗೇಮ್​ನಲ್ಲಿ ಯಶ್​ ಹವಾ
  • ಯಕ್ಷಪ್ರಶ್ನೆಯಾದ ಬಿಡುಗಡೆ ದಿನಾಂಕ!
ನವದೆಹಲಿ: ಸದ್ಯ ಭಾರತದ ಬಹು ನೀರಿಕ್ಷಿತ ಸಿನಿಮಾ ಯಾವುದೆಂದು ಕೇಳಿದರೆ ಸಿನಿ ಪ್ರೇಕ್ಷಕರಿಂದ ಕೇಳಿ ಬರುತ್ತಿರುವ ಹೆಸರೆಂದರೆ ಅದು ಟಾಕ್ಸಿಕ್​. ರಾಕಿಂಗ್​ ಸ್ಟಾರ್​​ ಯಶ್ (Rocking Star Yash in BGMI)​ ಸೇರಿದಂತೆ ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ ಸೆಟ್ಟೆರಲು ರೆಡಿಯಾಗಿ ನಿಂತಿದೆ.

ಕ್ರಾಫ್ಟನ್ ಜೊತೆ ಕೈ ಜೋಡಿಸಿದ ಟಾಕ್ಸಿಕ್​!

ಈ ಹಿಂದೆ ಬ್ಯಾನ್​ ಆಗಿದ್ದ ಪಬ್ಜಿ ಮೊಬೈಲ್​ನ ರೂಪಾಂತರವಾದ ಬ್ಯಾಟಲ್​​ ಗ್ರೌಂಡ್ಸ್​ ಮೊಬೈಲ್​ ಇಂಡಿಯಾದ ಒಡೆತನದ ಸಂಸ್ಥೆಯಾದ ಕ್ರಾಫ್ಟನ್ ಇಂಡಿಯಾ ಜೊತೆ ಟಾಕ್ಸಿಕ್​ ಚಿತ್ರತಂಡ ಕೈ ಜೋಡಿಸಿದೆ ಎಂದು ವರದಿಯಾಗಿದೆ.
ಬಿಡುಗಡೆಗೆ ತಯಾರಿರುವ ಬಹು ನೀರಿಕ್ಷಿತ ಸಿನಿಮಾಗಳಲ್ಲಿ ಮುಂಚೂಣಿಯಲ್ಲಿರುವ ಟಾಕ್ಸಿಕ್​ ಸಿನಿಮಾ ಕ್ರಾಫ್ಟನ್ ಇಂಡಿಯಾ ಜೊತೆ ಸೇರಿಕೊಳ್ಳುವ ಮೂಲಕ ಯುವ ಜನರನ್ನು ಅದರಲ್ಲೂ ಬ್ಯಾಟಲ್​​ ಗ್ರೌಂಡ್ಸ್​ ಮೊಬೈಲ್​ ಇಂಡಿಯಾ ಗೇಮ್​ನ್ನು ಇಷ್ಟ ಪಡುವ ಜನರನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಈ ಹಿಂದೆ ಅನೇಕ ಸಿನಿಮಾಗಳು ಈ ಕ್ರಾಫ್ಟನ್ ಇಂಡಿಯಾ ಜೊತೆ ಕೊಲಾಬರೇಶನ್​ ಮಾಡಿ ತಮ್ಮ ಸಿನಿಮಾದಲ್ಲಿರುವ ಪಾತ್ರಗಳನ್ನು ಗೇಮ್​ನಲ್ಲಿ ಬಳಕೆ ಮಾಡಲು ಅವಕಾಶ ಕೊಟ್ಟು ಖ್ಯಾತಿಗಳಿಸಿದ್ದವು. ಈಗ ಟಾಕ್ಸಿಕ್​ ಸಿನಿಮಾ ಕೂಡ ಕೊಲಾಬರೇಶನ್ ಮಾಡಿ ಕೊಂಡಿರುವ ಕಾರಣ ಬ್ಯಾಟಲ್​​ ಗ್ರೌಂಡ್ಸ್​ ಮೊಬೈಲ್​ ಇಂಡಿಯಾ ಗೇಮ್​ನಲ್ಲಿ ಯಶ್​ನ ಪಾತ್ರ ಸಹ ಬರಬಹುದು ಎಂದು ಹೇಳಲಾಗುತ್ತಿದೆ.

ಝೇನ್​ ಜಿಗಳನ್ನು ಸೆಳೆಯಲು ಈ ತಂತ್ರ!

ಈ ಬ್ಯಾಟಲ್​​ ಗ್ರೌಂಡ್ಸ್​ ಮೊಬೈಲ್​ ಇಂಡಿಯಾ ಗೇಮ್​ನ್ನು ಹೆಚ್ಚಿನ ಸಂಖ್ಯೆಯಲ್ಲಿ ಝೇನ್​ ಜಿಗಳು ಇಷ್ಟ ಪಡುವ ಕಾರಣ ಈ ಗೇಮ್​ನಲ್ಲಿ ಯಶ್​ ಸೇರಿದಂತೆ ಇತರೆ ನಟ ನಟಿಯರ ಕ್ಯಾರೆಕ್ಟರ್​ಗಳು ಸೇರ್ಪಡೆಯಾದರೆ ಅಪಾರ ಜನರನ್ನು ತಲುಪಬಹುದು ಎನ್ನುವುದು ಸಿನಿಮಾ ತಂಡದ ಲಕ್ಕಾಚಾರವಾಗಿದೆ.
ಯಶ್​ ಈಗಾಗಲೇ ಫ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿದ್ದಾರೆ. ಇದನ್ನು ನಾವು ಯುವ ಸಮುದಾಯವನ್ನು ಸೆಳೆಯಲು ಅವರ ಕ್ಯಾರೆಕ್ಟರ್​ನ್ನು ಗೇಮ್​ನಲ್ಲಿ ಸೇರ್ಪಡೆ ಮಾಡಿ ಅವರ ಧ್ವನಿಯನ್ನು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಸೇರಿಸಿದರೆ ಜನರಿಗೆ ಖಂಡಿತವಾಗಿ ಇಷ್ಟವಾಗುತ್ತದೆ ಎಂದು ಕ್ರಾಫ್ಟನ್ ಇಂಡಿಯಾ ಬಿಸ್​ನೆಸ್​ ಡೆವಲಪ್​ಮೆಂಟ್​ ಹಾಗೂ ಪಾರ್ಟ್ನರ್​ಶಿಪ್​ ಮುಖ್ಯಸ್ಥ ಸಿದ್ದಾರ್ಥ ಮೆರೋತ್ರಾ ಹೇಳಿಕೆ ನೀಡಿದ್ದಾರೆ.

ಟಾಕ್ಸಿಕ್​ ಬಗ್ಗೆ

ಟಾಕ್ಸಿಕ್​ ಇದೊಂದು ಕ್ರೈಮ್​ ಥ್ರಿಲ್ಲರ್​ ಸಿನಿಮಾವಾಗಿದ್ದು, ಇದರಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್​, ಹುಮಾ ಖುರೇಶಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್​ ದ್ವಿಪಾತ್ರದಲ್ಲಿ ಮಿಂಚಲಿದ್ದು, ಈ ಸಿನಿಮಾವನ್ನು ಗೀತು ಮೋಹನ್​ ದಾಸ್ ನಿರ್ದೇಶಿಸಿದ್ದಾರೆ.
ಯಕ್ಷಪ್ರಶ್ನೆಯಾದ ಬಿಡುಗಡೆ ದಿನಾಂಕ!
ಹೌದು ಸಿನಿಮಾದ ಟ್ರೇಲರ್​​, ಟೀಸರ್​, ಪಾತ್ರ ಪರಿಚಯ ಎಲ್ಲಾ ಬಿಡುಗಡೆ ಕಂಡಿದ್ದರೂ ಸಹ ಸಿನಿಮಾ ಬಿಡುಗಡೆಗೆ ದಿನಾಂಕ ಇನ್ನು ಫಿಕ್ಸ್ ಆಗಿಲ್ಲ. ಈ ಮೊದಲು ಮಾರ್ಚ್​ 19 ರಂದು ಧುರಂಧರ್​ 2 ಜೊತೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು.
ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಸಿನಿಮಾವನ್ನು ಜೂನ್​ 4 ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಈ ದಿನಾಂಕವನ್ನು ಸಹ ಮುಂದೂಡಲಾಗಿದ್ದು, ಜಾಗತಿಕ ಮಾರುಕಟ್ಟೆ ತಯಾರಿ ಸಲುವಾಗಿ ಮತ್ತೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದೆವೆಂದು ಸಿನಿಮಾ ತಂಡ ತಿಳಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net