ಶ್ರೇಯಸ್ ಅಯ್ಯರ್ ಸಹೋದರಿಗೆ ಬೆದರಿಕೆ:ವಿಡಿಯೋ ಮಾಡಿ ಕಣ್ಣೀರಿಟ್ಟ ಶ್ರೇಷ್ಠಾ; ವಿಕೃತ ಫ್ಯಾನ್ಸ್ ವಿರುದ್ಧ ಆಕ್ರೋಶ! Shreyas Iyer Sister Shrestha Iyer

ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್
ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್
Published on

ಪ್ರಮುಖ ಮುಖ್ಯಾಂಶಗಳು

  • ಮುಕ್ತಾಯದ ಹಂತಕ್ಕೆ ಬಂದ ಐಪಿಎಲ್​​
  • ಪಂಜಾಬ್​ ತಂಡದ ನಾಯಕ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್ ಗೆ ಟ್ರೋಲಿಂಗ್​
  • ಸೋಷಿಯಲ್​ ಮೀಡಿಯಾನಲ್ಲಿ ಅಯ್ಯರ್​ ಕುಟುಂಬದವರಿಗೆ ಜೀವ ಬೆದರಿಕೆ
ವೈರಲ್​: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್​ ಹಬ್ಬವಾದ ಐಪಿಎಲ್​ 2026 ಮುಕ್ತಾಯವಾಗಲಿದ್ದಯ, ಫೈನಲ್​ ಪ್ರವೇಶಿಸಿರುವ ಆರ್​ಸಿಬಿ ವಿರುದ್ಧ ಯಾರು ಆಡಲಿದ್ದಾರೆ ಎಂದು ಶುಕ್ರವಾರ (ಮೇ.29) ರಂದು ತಿಳಿಯಲಿದೆ.
ವರ್ಷದಲ್ಲಿ ಎರಡು ತಿಂಗಳುಗಳ ಕಾಲ ಇರುವ ಈ ಕ್ರೀಡಾಕೂಟವನ್ನು ನಮ್ಮ ಜನ ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ ಎನ್ನುವುದು ತಿಳಿದಿರುವ ವಿಷಯವೇ ಆಗಿದೆ. ಆದರೆ ಇತ್ತೀಚೆಗೆ ಕ್ರಿಕೆಟಿಗ ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್ (Shreyas Iyer Sister Shrestha Iyer) ಹಂಚಿಕೊಂಡಿರುವ ವಿಡಿಯೋ ಕ್ರಿಕೆಟ್​ ಫ್ಯಾನ್ಸ್ ಮೇಲೆ ಕುಪಿತರಾಗುವಂತೆ ಮಾಡಿದೆ.

ನಮಗೆ ದಿನನಿತ್ಯ ಬೆದರಿಕೆ ಕರೆ ಬರುತ್ತದೆ!

ಈ ಭಾರಿಯ ಐಪಿಎಲ್​ನ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್​ ಅಯ್ಯರ್​ ನೇತೃತ್ವದ ಪಂಜಾಬ್​ ಕಿಂಗ್ಸ್​ ತಂಡ ಮಧ್ಯದಲ್ಲಿ ನಿರಂತರ ಸೋಲನ್ನು ಕಂಡ ಪರಿಣಾಮ ಕ್ವಾಲಿಫೈವ್​ ಆಗುವಲ್ಲಿ ವಿಫಲವಾಯಿತು.
ಆದರೆ ಅವರ ತಂಡದ ಸೋಲನ್ನು ಸಂಭ್ರಮಿಸಿದ ವಿಕೃತ ಅಭಿಮಾನಿಗಳು ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್​ ಹಾಗೂ ಅವರ ಕುಟುಂಬ ವರ್ಗದವರಿಗೆ ಬೆದರಿಕೆ ಹಾಗೂ ಅವಾಚ್ಯ ಬೈಗುಳಗಳನ್ನು ಬಳಸಿದ್ದಾರೆ ಎಂದು ಶ್ರೇಷ್ಠಾ ವಿಡಿಯೋ ಮೂಲಕ ಹಂಚಿ ಕೊಂಡಿದ್ದಾಳೆ.

ಶ್ರೇಷ್ಠಾಳ ವಿಡಿಯೋನಲ್ಲಿ ಏನಿದೆ?

ಶ್ರೇಯಸ್​ ಅಯ್ಯರ್​ ಸಹೋದರಿ ಶ್ರೇಷ್ಠಾ ಅಯ್ಯರ್​ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾನು ನನ್ನ ಸಹೋದರ ಪ್ರತಿನಿಧಿಸುವ ತಂಡವಾದ ಪಂಜಾಬ್​ ಕಿಂಗ್ಸ್​ ತಂಡಕ್ಕೆ ನನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದೆ, ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್​ಗಳನ್ನು ಶೇರ್​ ಮಾಡುತ್ತಿದೆ.
ಆದರೆ ಯಾವಾಗ ಪಂಜಾಬ್​ ತಂಡ ಕ್ವಾಲಿಫೈವ್​ ಆಗಿಲ್ಲವೋ ಆಗ ಕೆಲ ವಿಕೃತ ಕ್ರೀಡಾಭಿಮಾನಿಗಳು ನನಗೆ ಹಾಗೂ ನನ್ನ ಕುಟುಂಬದವರಿಗೆ ಬೇಕಾಬಿಟ್ಟಿ ಬೈಯುತ್ತಾ, ಬೆದರಿಕೆ ಹಾಕುತ್ತಿದ್ದಾರೆ. ಆದರೆ ನನಗೆ ಇತರೆ ಯಾವುದೇ ಕ್ರಿಕೆಟ್​ ಆಟಗಾರರ ಮೇಲೆ ಅಸೂಹೆಯಿಲ್ಲ, ಅವರೆಲ್ಲಾ ನನ್ನ ಅಣ್ಣನ ರೀತಿಯಲ್ಲಿದ್ದಾರೆ.
ಅದರೆ ಕೆಲ ಕ್ರಿಕೆಟರ್​ಗಳ ಅಭಿಮಾನಿ ಎಂದು ಹೇಳಿಕೊಂಡು ನನ್ನ ತೆಜೋವಧೆ ಮಾಡುತ್ತಿದ್ದಾರೆ. ಆದರೆ ಇವರೆಲ್ಲಾ ನಿಜವಾಗಿಯೂ ಕ್ರಿಕೆಟ್​ ಅಭಿಮಾನಿಗಳಲ್ಲ, ಬದಲಿಗೆ ನಿರುದ್ಯೋಗಿ ವಿಕೃತ ಹೃದಯಗಳು ಎಂದು ಶ್ರೇಷ್ಠಾ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ನನ್ನ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಅವಾಚ್ಯ ಕಮೆಂಟ್​ ಮಾಡುವುದು, ನನ್ನ ತಂದೆ-ತಾಯಿ ಬಗ್ಗೆ ಕೆಟ್ಟದಾಗಿ ಹೇಳುವುದು ಮತ್ತು ನಾನು ಡಾನ್ಸ್ ಹೇಳಿಕೊಡುವ ವಿದ್ಯಾರ್ಥಿಗಳಿಗೂ ನೀವು ತೊಂದರೆ ನೀಡಿದ್ದಿರಿ ಎಂದು ಶ್ರೇಷ್ಠಾ ವಿಡಿಯೋನಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net