ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(ಎಚ್ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟು 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ. ಉಜ್ವಲಾ ಯೋಜನೆಯಡಿ ಐಒಸಿಎಲ್ನ 13,93,748, ಬಿಪಿಸಿಎಲ್ನ 7,40,897 ಹಾಗೂ ಎಚ್ಪಿಸಿಎಲ್ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. 2 ವರ್ಷದಿಂದ ಎಲ್ಪಿಸಿ ಸಂಪರ್ಕ ಹೊಂದಿರುವ ಸಂಖ್ಯೆ ಮೇಲಿನ ಅಂಕಿ-ಅಂಶದಿಂದ ತುಸು ಹೆಚ್ಚಳವಾಗಿದೆ.