ದೇವಾಲಯಕ್ಕೆ ಸರ್ಕಾರದಿಂದ ವಾರ್ಷಿಕ 60 ಸಾವಿರ ರೂ. ವರ್ಷಾಸನ ಹಾಗೂ 2022ರಲ್ಲಿ ದೇವಾಲಯ ನವೀಕರಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಮಾಹಿತಿ ನೀಡುವಂತೆ ಆಯೋಗ ಆದೇಶ ನೀಡಿದ್ದರೂ ಸಾರ್ವಜನಿಕ ಮಾಹಿತಿ ಆಧಿಕಾರಿ ಗೋಪಾಲಕೃಷ್ಣರಾವ್ ಪಾಲಿಸಿರಲಿಲ್ಲ. ಆದ್ದರಿಂದ ಪ್ರತಿ ಪ್ರಕರಣಕ್ಕೆ ತಲಾ 25 ಸಾವಿರ ರೂ. ದಂಡ, ಎರಡು ಪ್ರಕರಣದಲ್ಲಿ ತಲಾ ೫ ಸಾವಿರ ರೂ. ಪರಿಹಾರ, ಹಾಗೂ ಉಳಿದೆರಡು ಪ್ರಕರಣದಲ್ಲಿ ತಲಾ ೩ ಸಾವಿರ ರೂ. ಪರಿಹಾರ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಆದೇಶ ನೀಡಿದ್ದಾರೆ.