ಪೆಟ್ರೋಲ್, ಡೀಸಲ್ ಮೇಲೆ ತಲಾ 10 ರೂ. ಅಬಕಾರಿ ಸುಂಕ ಕಡಿತ; ಪ್ರತಿ 15 ದಿನಗಳಿಗೊಮ್ಮೆ ದರ ಪರಿಶೀಲನೆ; ಕೇಂದ್ರ ಸರ್ಕಾರ | Central government

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ 10 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಇಂದಿನಿಂದ ಜಾರಿಗೆ ತಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರತಿ 15 ದಿನಗಳಿಗೊಮ್ಮೆ ಎರಡು ತೈಲಗಳ ದರವನ್ನು ಪರಿಶೀಲಿಸುವುದಾಗಿ ಶುಕ್ರವಾರ(ಮಾ. 27) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಲಿರುವ ಪೆಟ್ರೋಲಿಯಂ ಸಚಿವಾಲಯ, ಈ ಹೆಚ್ಚುವರಿ ಅಬಕಾರಿ ಸುಂಕ ಕಡಿತವು ಲೀಟರ್ ಪೆಟ್ರೋಲ್​​ಗೆ 11.9 ರೂ. ಮತ್ತು ಡಿಸೇಲ್​ಗೆ 7.8 ರೂ. ಗೆ ಇಳಿಕೆಯಾಗಲಿದೆ ಎಂದು ಹೇಳಿದೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷ ವಿವೇಕ್ ಚತುರ್ವೇದಿ, ಈ ಕಡಿತವು ಚಿಲ್ಲರೆ ಬೆಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇರಾನ್ ವಿರುದ್ಧದ ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧದಿಂದ ಉಂಟಾದ ಬೆಲೆ ಏರಿಕೆ ಆಘಾತ ಮತ್ತು ಪೂರೈಕೆ ಆಡಚಣೆ ಪರಿಣಾಮ ಕಂಪನಿಗಳು ಲಾಭದ ಉದ್ದೇಶದಿಂದ ಈ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಚ್ಚಾ ತೈಲ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ಏರಿಕೆ ಕಂಡುಬಂದಿದೆ. ಸರ್ಕಾರವು ಮಾಪನಾಂಕ ನಿರ್ಣಯಿಸಿದ ವಿಧಾನವನ್ನು ಹೊಂದಿದೆ. ಡೀಸೆಲ್ ಮತ್ತು ಎಟಿಎಫ್ ರಫ್ತನ್ನು ತಡೆಯಲು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಸೆಸ್ ಅನ್ನು ತರಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ದರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಫೆ. 28ರಂದು ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ಜಂಟಿ ಕಾರ್ಯಾಚರಣೆ ನಡೆಸಿದ ಬಳಿಕ ಶುರುವಾದ ಯುದ್ಧವು, ಬಳಿಕ ಪಶ್ಚಿಮ ಏಷ್ಯಾದಾದ್ಯಂತ ಇಂಧನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪರಸ್ಪರ ದಾಳಿ ನಡೆಸಿದವು. ಬಳಿಕ ಇರಾನ್ ಪ್ರಮುಖ ಸಾಗಾಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ಪರಿಣಾಮ ಕಚ್ಚಾತೈಲದ ಪ್ರತಿ ಬ್ಯಾರೆಲ್‌ಗೆ ಯುಎಸ್​ ಡಾಲರ್ $68ರಿಂದ ಮಾರ್ಚ್ 7ರಂದು $100ಗೆ ದಾಟಿತು. ಇದರಿಂದ ಬಹುತೇಕ ದೇಶಗಳಲ್ಲಿ ಇಂಧನಗಳ ಬೆಲೆ ಏರಿಕೆಗೆ ಕಾರಣವಾಗಿದೆ.
ಪಶ್ಚಿಮ ಏಷ್ಯಾದಿಂದಲೇ ಭಾರತ ಹೆಚ್ಚಿನ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯೇ ಕಚ್ಚಾ ತೈಲದ ಪ್ರಮುಖ ಮಾರ್ಗವಾಗಿದೆ. ಕತಾರ್, ಯುಎಇ ಹಾಗೂ ಇರಾನ್​​ನಿಂದ ಎಲ್​ಎನ್​ಜಿ, ಎಲ್​ಪಿಜಿ ಹಾಗೂ ದ್ರವೀಕೃತ ಪೆಟ್ರೋಲಿಯಂ ಅನಿಲದ ಆಮದಿನ ಶೇ. 40ರಿಂದ 50ರಷ್ಟು, ಅಂದರೆ ಪ್ರತಿದಿನ 2.2ರಿಂದ 2.8 ಮಿಲಿಯನ್ ಬ್ಯಾರಲ್​ಗಳನ್ನು ಈ ಮೂಲಕ ಭಾರತಕ್ಕೆ ಪೂರೈಕೆಯಾಗುತ್ತದೆ. ಸದ್ಯ ಸರ್ಕಾರ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net