ಬಾಟಲ್​, ಕ್ಯಾನ್​ಗಳಲ್ಲಿ ಪೆಟ್ರೋಲ್​ ಕೊಡಲ್ಲ ಅಂದಿದ್ದಕ್ಕೆ ಈ ಯುವಕ ತಂದ ವಸ್ತು ನೋಡಿ ಬಂಕ್​ ಸಿಬ್ಬಂದಿಯೇ ದಂಗು! Petrol

ಬಾಟಲ್​, ಕ್ಯಾನ್​ಗಳಲ್ಲಿ ಪೆಟ್ರೋಲ್​ ಕೊಡಲ್ಲ ಅಂದಿದ್ದಕ್ಕೆ ಈ ಯುವಕ ತಂದ ವಸ್ತು ನೋಡಿ ಬಂಕ್​ ಸಿಬ್ಬಂದಿಯೇ ದಂಗು! Petrol
ಬಾಟಲ್​, ಕ್ಯಾನ್​ಗಳಲ್ಲಿ ಪೆಟ್ರೋಲ್​ ಕೊಡಲ್ಲ ಅಂದಿದ್ದಕ್ಕೆ ಈ ಯುವಕ ತಂದ ವಸ್ತು ನೋಡಿ ಬಂಕ್​ ಸಿಬ್ಬಂದಿಯೇ ದಂಗು! Petrol
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ
  • ದೇಶದ ಅನೇಕ ಕಡೆ ಎಲ್​ಪಿಜಿ ಸಿಲಿಂಡರ್​ಗಳು ಸಿಗುತ್ತಿಲ್ಲ
  • ಕೆಲವೆಡೆ ಪೆಟ್ರೋಲ್​ ಬಂಕ್​ಗಳಲ್ಲಿ ನೋ ಸ್ಟಾಕ್​ ಬೋರ್ಡ್​ ಹಾಕಲಾಗಿದೆ
  • ಇಂಧನ ಕೊರತೆ ಹಿನ್ನೆಲೆ ವಾಹನ ಸವಾರರು ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದಿದ್ದಾರೆ
Petrol : ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅನೇಕ ಕಡೆ ಎಲ್​ಪಿಜಿ ಸಿಲಿಂಡರ್​ಗಳು ಸಿಗುತ್ತಿಲ್ಲ. ಇದರಿಂದ ಅನೇಕ ಹೋಟೆಲ್​ಗಳು ಬಂದ್​ ಆಗಿವೆ. ಕೆಲವೆಡೆ ಪೆಟ್ರೋಲ್​ ಬಂಕ್​ಗಳಲ್ಲಿ ನೋ ಸ್ಟಾಕ್​ ಬೋರ್ಡ್​ ಹಾಕಲಾಗಿದೆ. ಇನ್ನು ಕೆಲವೆಡೆ ಶೀಘ್ರದಲ್ಲೇ ಪೆಟ್ರೋಲ್​-ಡೀಸೆಲ್​ ಕೊರತೆಯಾಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಅನೇಕ ವಾಹನ ಸವಾರರು ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್​ ಆಗುತ್ತಿವೆ.
ವಾಟರ್​ ಬಾಟಲ್​ ಹಾಗೂ ಕ್ಯಾನ್​ಗಳಲ್ಲಿ ಪೆಟ್ರೋಲ್​ ಅಥವಾ ಡೀಸೆಲ್​ ಕೊಡಬಾರದು ಎಂಬ ನಿಯಮ ಇರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅನೇಕ ಪೆಟ್ರೋಲ್​ ಬಂಕ್​ಗಳಲ್ಲಿ ಸೂಚನಾ ಫಲಕಗಳನ್ನೇ ಅಳವಡಿಸಿರುತ್ತಾರೆ. ಆದರೂ, ಕೆಲವು ಬಂಕ್​ಗಳಲ್ಲಿ ಬಾಟಲಿಗೆ ಪೆಟ್ರೋಲ್​ ಕೊಡುತ್ತಾರೆ. ಸದ್ಯ ಇಂಧನ ಕೊರತೆಯಾಗಲಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಅನೇಕರು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಪೆಟ್ರೋಲ್​-ಡೀಸೆಲ್​ ತುಂಬಿಸಿಕೊಂಡು ಹೊಗುತ್ತಿದ್ದಾರೆ.
ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್​ ಮೇಲೆ ಸಿಂಟೆಕ್ಸ್​ ತಂದು ಡೀಸೆಲ್​ ತುಂಬಿಸಿಕೊಂಡು ಹೋಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿತ್ತು. ಇದೀಗ ವ್ಯಕ್ತಿಯೊಬ್ಬ ಪೆಟ್ರೋಲ್​ ತುಂಬಿಸಿಕೊಳ್ಳಲು ತಂದಂತಹ ವಸ್ತು ಎಲ್ಲರ ಗಮನ ಸೆಳೆದಿದೆ. ವಾಟರ್​ ಬಾಟಲ್​ ಹಾಗೂ ಕ್ಯಾನ್​ಗಳಲ್ಲಿ ಪೆಟ್ರೋಲ್​ ಕೊಡುವುದಿಲ್ಲ ಅಂತಾ ಬೈಕ್​ನ ಟ್ಯಾಂಕ್​ ಅನ್ನೇ ಕಿತ್ತುತಂದು ಪೆಟ್ರೋಲ್​ ತುಂಬಿಸಿಕೊಂಡು ಹೋಗಿದ್ದಾನೆ.
ಯುವಕ ತನ್ನ ಬೈಕ್​ನಿಂದ ತೆಗೆದ ಇಂಧನ ಟ್ಯಾಂಕ್​ನಿಂದ ಪೆಟ್ರೋಲ್ ತುಂಬಿಸಲು ಬಂಕ್​ಗೆ ಬಂದಾಗ ಅದನ್ನು ಗಮನಿಸಿದ ಪಂಪ್ ಅಟೆಂಡೆಂಟ್ ಒಂದು ಕ್ಷಣ ದಂಗಾದರು. ಏನು ಹೇಳಬೇಕೆಂದು ತೋಚದೆ ಯುವಕನ ಕೈಯಲ್ಲಿದ್ದ ಟ್ಯಾಂಕ್​ಗೆ ಪೆಟ್ರೋಲ್ ತುಂಬಿ ಕಳುಹಿಸಿದರು. ಇದರಿಂದ, ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಅಂದಹಾಗೆ, ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೆಲವರು ಇದನ್ನು ತಮಾಷೆಯಾಗಿ ನೋಡಿದರು ಕೂಡ ಹೆಚ್ಚಿನವರು ಯುವಕನ ಕೃತ್ಯವನ್ನು ಟೀಕಿಸಿದ್ದಾರೆ. ವಾಹನದಿಂದ ಬೇರ್ಪಟ್ಟ ಇಂಧನ ಟ್ಯಾಂಕ್‌ಗೆ ಪೆಟ್ರೋಲ್ ಸುರಿಯುವುದು ಹೆಚ್ಚು ಅಪಾಯಕಾರಿ ಎಂದು ಕೆಲವರು ಹೇಳಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಗ್ರಾಹಕರ ವಿರುದ್ಧ ಮತ್ತು ಅದಕ್ಕೆ ಅವಕಾಶ ನೀಡುವ ಪಂಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net