ಮುಂದೆ 1997ರಲ್ಲಿ ಕಿಯೋನಿಕ್ಸ್ ಸಂಸ್ಥೆಯು ಅದನ್ನು ನಿರ್ವಹಣೆ ಮಾಡಲು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಫ್ ಅಥಾರಿಟಿಗೆ ವಹಿಸಿದೆ. ಇದು ಕರ್ನಾಟಕ ಪುರಸಭೆ ಕಾಯ್ದೆ 1964ರ ಸೆಕ್ಷನ್ 364-ಎ ಅಡಿಯಲ್ಲಿ ರೂಪಗೊಂಡು ಶಾಸನಬದ್ದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 2010ರ ಸರ್ಕಾರದ ಅಧಿಸೂಚನೆಯಂತೆ ಪ್ರಾಧಿಕಾರ ರಸ್ತೆ, ನೀರು, ನೈರ್ಮಲ್ಯದಂತ ಸಾರ್ವಜನಿಕ ಸಂಸ್ಥೆಗಳನ್ನು ನೀಡುವ ಜವಾಬ್ದಾರಿ ಸಂಸ್ಥೆಯಾಗಿದೆ.