ಅಧಿಕಾರದಲ್ಲಿಲ್ಲದ, ಬಹುಮತವಿಲ್ಲದ ರಾಜ್ಯಗಳಲ್ಲಿ ಮಿತ್ರಪಕ್ಷಗಳನ್ನು ಬಳಸಿ ಬೀಸಾಡುವುದು ಬಿಜೆಪಿ ತಂತ್ರ; ಕಪಿಲ್ ಸಿಬಲ್ | Kapil Sibal

ರಾಜ್ಯಸಭಾ ಸಂಸದ ಕಪಿಲ್ ಸಿಬಲ್
ರಾಜ್ಯಸಭಾ ಸಂಸದ ಕಪಿಲ್ ಸಿಬಲ್
Published on
ನವದೆಹಲಿ: ಅಧಿಕಾರದಲ್ಲಿಲ್ಲದ ಅಥವಾ ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿಯ ತಂತ್ರವೆಂದರೆ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಕಡೆಗಣಿಸುವುದು ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್(Kapil Sibal) ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯ ರಾಜಕೀಯ ತಂತ್ರ, ಅವರು ಅಧಿಕಾರದಲ್ಲಿಲ್ಲದ ಅಥವಾ ಬಹುಮತವಿಲ್ಲದ ರಾಜ್ಯಗಳಲ್ಲಿ? ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಿ, ಅಧಿಕಾರಕ್ಕೆ ಬನ್ನಿ, ನಂತರ ಅವರನ್ನು ಅಂಚಿನಲ್ಲಿಡಿ. ಈ ತಂತ್ರ ಬಿಹಾರದಲ್ಲಿ ಯಶಸ್ವಿಯಾಗಿದೆ, ಈಗ ಮಹಾರಾಷ್ಟ್ರದಲ್ಲಿಯೂ ಬಳಸಲಾಗುತ್ತಿದೆ ಎಂದು ಬರೆದಿದ್ದಾರೆ.
ಮಹರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 2,869 ಸ್ಥಾನಗಳಲ್ಲಿ ಬಿಜೆಪಿ 1,425 ಸ್ಥಾನಗಳಲ್ಲಿ ಗೆದ್ದು, ಮುಂಬೈ, ಪುಣೆ ಸೇರಿ ಡಜನ್​ಗೂ ಹೆಚ್ಚು ಪುರಸಭೆಗಳಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದೆ. ಮುಂಬೈ ಪಾಲಿಕೆಯಲ್ಲಿ 227 ಸ್ಥಾನಗಳ ಪೈಕಿ ಬಿಜೆಪಿ 89, ಅದರ ಮಿತ್ರ ಪಕ್ಷ ಶಿಂಧೆ ಶಿವಸೇನಾ 29 ಸ್ಥಾನಗಳಲ್ಲಿ ಗೆದ್ದು ಪಾಲಿಕೆಯಲ್ಲಿ 30 ವರ್ಷಗಳ ಉದ್ದವ್ ಠಾಕ್ರೆ ಅವರ ಶಿವಸೇನೆಯ ಅಧಿಪತ್ಯವನ್ನು ಕೊನೆಗಾಣಿಸಿದೆ.
ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷವೂ ವಿಭಜನೆಯಾದ್ರೂ ಗಮನಾರ್ಹ ಸಾಧನೆ ಮಾಡಿದ್ದು 65 ಸ್ಥಾನಗಳಲ್ಲಿ ಗೆದ್ದಿದೆ. ಮಿತ್ರ ಪಕ್ಷ ಎಂಎನ್​ಎಸ್​ 6, ಕಾಂಗ್ರೆಸ್ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net