ತೆಂಗಿನ ನಾರಿನ ಉತ್ಪನ್ನ ಖರೀದಿಗೆ ಮುಂದೆ ಬನ್ನಿ: ಸರ್ಕಾರಿ ಇಲಾಖೆಗಳಿಗೆ ಸಿ.ಎನ್. ಶಿವಪ್ರಕಾಶ್ ಮನವಿ-coconut fiber products
ಕೆಎಸ್ಸಿಡಿ ಎಂಡಿ ಸಿ.ಎನ್. ಶಿವಪ್ರಕಾಶ್ ಮನವಿ
Published on:
Copied
Follow Us
ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಮಾದರಿಯಲ್ಲೇ ರಾಜ್ಯದ ಇತರ ಸರ್ಕಾರಿ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳು ಅಗತ್ಯಕ್ಕೆ ತಕ್ಕಂತೆ ತೆಂಗಿನ ನಾರಿನ ಉತ್ಪನ್ನ ಖರೀದಿಸಲು ಮುಂದೆ ಬರಬೇಕು ಎಂದು ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ (ಕೆಎಸ್ಸಿಡಿ) ಎಂಡಿ ಸಿ.ಎನ್. ಶಿವಪ್ರಕಾಶ್ ಮನವಿ ಮಾಡಿದ್ದಾರೆ.
ಒಂದು ಕಾರಿಡಾರ್ ಮ್ಯಾಟ್ ತಯಾರಿಸಲು 100 ರೂ. ವೆಚ್ಚವಾಗಲಿದೆ. ಇದರಲ್ಲಿ ಕನಿಷ್ಠ 40 ರೂ. ಮೊತ್ತ ನೇರವಾಗಿ ಮಹಿಳಾ ಕೆಲಸಗಾರರಿಗೆ ದೊರೆಯಲಿದೆ. ಇದು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ಮಹಿಳೆಯರಿಗೆ ನಿರಂತರವಾಗಿ ಉದ್ಯೋಗಾವಕಾಶ ಸಿಗುತ್ತಿದೆ. ನಿಗಮದ ವ್ಯಾಪಾರ ವಹಿವಾಟು ವೃದ್ಧಿಸಿ, ಸಂಸ್ಥೆಯು ಆರ್ಥಿಕವಾಗಿ ಸದೃಢವಾಗುತ್ತದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ಲಭ್ಯವಾಗಲಿದೆ. ಹಿಂದೆ ಹೊರ ರಾಜ್ಯಗಳಿಗೆ ಹೋಗುತ್ತಿದ್ದ ತೆಂಗಿನ ಸಿಪ್ಪೆಗಳನ್ನು ಸ್ಥಳೀಯವಾಗಿ ಬಳಸುವುದರಿಂದ ರಾಜ್ಯದ ರೈತರಿಗೆ ಮತ್ತು ನಾರಿನ ಕೆಲಸಗಾರರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಮೀಣ ನಿರುದ್ಯೋಗಿಗಳಿಗೆ ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ನಿಗಮ ಸಿದ್ಧಪಡಿಸುವ ಉತ್ಪನ್ನಗಳಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಭಾರಿ ಬೇಡಿಕೆ ಇದೆ. ನಿಗಮದಿಂದ ಉತ್ಪಾದಿಸಲ್ಪಡುವ ಡಚ್ ಮತ್ತು ಕಾರಿಡಾರ್ ಮ್ಯಾಟ್ಗಳಿಗೆ ಈಗಾಗಲೇ ಜೈಪುರ ಹಾಗೂ ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ಕುಮಾರ್, ಎಂಎಸ್ಐಎಲ್ ನಿರ್ದೇಶಕ ಎ.ಎಂ. ಚಂದ್ರಪ್ಪ, ತಮ್ಮ ಅಧೀನದ ಎಲ್ಲ ಮಾರಾಟ ಮಳಿಗೆಗಳ ಉಪಯೋಗಕ್ಕಾಗಿ ಒಟ್ಟು 2,134 ಕಾರಿಡಾರ್ ಮ್ಯಾಟ್ಗಳ ಸರಬರಾಜಿಗೆ ಅಧಿಕೃತ ಆದೇಶ ನೀಡಿದ್ದಾರೆ.