ಶೀಘ್ರವೇ 200 ವೈದ್ಯರ ನೇಮಕಾತಿಗೆ ಕ್ರಮ; ಯು.ಟಿ.ಖಾದರ್ ಘೋಷಣೆ

ಶೀಘ್ರವೇ 200 ವೈದ್ಯರ  ನೇಮಕಾತಿಗೆ ಕ್ರಮ; ಯು.ಟಿ.ಖಾದರ್ ಘೋಷಣೆ
ಶೀಘ್ರವೇ 200 ವೈದ್ಯರ ನೇಮಕಾತಿಗೆ ಕ್ರಮ; ಯು.ಟಿ.ಖಾದರ್ ಘೋಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಶೀಘ್ರವೇ 200 ವೈದ್ಯರ ನೇಮಕಾತಿಗೆ ಕ್ರಮ
  • ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಣೆ
  • 1000 ಗುತ್ತಿಗೆ ವೈದ್ಯರ ನೇಮಕಾತಿಗೂ ಅನುಮತಿ

ಬೆಂಗಳೂರು:ಆರೋಗ್ಯ ಇಲಾಖೆಯಲ್ಲಿಸಾವಿರಕ್ಕಿಂತ ಹೆಚ್ಚಿನ ವೈದ್ಯರಸ್ಥಾನ ಖಾಲಿ ಇದ್ದು,ತಕ್ಷಣಕ್ಕೆ 200ಹುದ್ದೆಗಳ ನೇರನೇಮಕಾತಿ ಮಾಡಿಕೊಳ್ಳುವುದಾಗಿಆರೋಗ್ಯ ಸಚಿವ ಯು.ಟಿ.ಖಾದರ್ಹೇಳಿದ್ದಾರೆ.ಆರೋಗ್ಯ ಸೌಧದಲ್ಲಿಬುಧವಾರ ನಡೆದ ಇಲಾಖೆಯ ಸಭೆ ನಂತರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಇದೇವೇಳೆ 1 ಸಾವಿರವೈದ್ಯರನ್ನು ಗುತ್ತಿಗೆ ಆಧಾರದಲ್ಲಿನಿಯೋಜಿಸಿಕೊಳ್ಳುವುದಾಗಿ ಹೇಳಿದರು.

‘‘ರಾಜ್ಯದಲ್ಲಿ1290 ಎಂಬಿಬಿಎಸ್ವೈದ್ಯರು, 924 ತಜ್ಞವೈದ್ಯರ ಸ್ಥಾನ ಖಾಲಿ ಇದೆ.892 ಶುಶ್ರೂಕಿಯರಅಗತ್ಯವಿದ್ದು,ಆರ್ಥಿಕ ಇಲಾಖೆಯಿಂದಈಗಾಗಲೇ ನೇಮಕಾತಿಗೆ ಅನುಮೋದನೆಸಿಕ್ಕಿದ್ದು,ಕರ್ನಾಟಕ ಪರೀಕ್ಷಾಪ್ರಾಧಿಕಾರದ ಮೂಲಕ 200ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡಲಾಗುವುದು.ನೇಮಕಾತಿ ಕರೆದುಪರೀಕ್ಷೆ,ಕೌನ್ಸೆಲಿಂಗ್ಪ್ರಕ್ರಿಯೆಗಳನ್ನು ಒಂದು ವಾರದಲ್ಲಿಮುಗಿಸಲಾಗುವುದು ಎಂದು ಸಚಿವರುಭರವಸೆ ನೀಡಿದ್ದಾರೆ.

‘‘ಗುತ್ತಿಗೆಆಧಾರದಲ್ಲಿ ಸೇವೆಗಾಗಿ ಎಂಬಿಬಿಎಸ್ಅಥವಾ ಸ್ನಾತಕೋತ್ತರ ವೈದ್ಯಕೀಯ(ಪಿಜಿ)ವ್ಯಾಸಂಗ ಮಾಡಿದವೈದ್ಯರು ಡಿಎಚ್‌ಒಗೆ ಅರ್ಜಿಸಲ್ಲಿಸಬಹುದು.5 ವರ್ಷದ ಕಾರ್ಯಕ್ಷಮತೆಗಮನಿಸಿ ಖಾಯಂ ಸರಕಾರಿ ವೈದ್ಯರನ್ನಾಗಿನೇಮಿಸಿಕೊಳ್ಳಲಾಗುವುದು.ಪಿಜಿ ಮಾಡಲುಇಚ್ಚಿಸಿದಲ್ಲಿ ಅದಕ್ಕೂ ಅವಕಾಶಕಲ್ಪಿಸಲಾಗುವುದು.ಈ ಕುರಿತುಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲು ಯೋಜಿಸಿದ್ದೇವೆ,ಎಂದು ತಿಳಿಸಿದರು.

‘‘ಎಂಬಿಬಿಎಸ್ವೈದ್ಯರಿಗೆ 60ಸಾವಿರ ರೂ.ಹಾಗೂ ಪಿಜಿಕಲಿತವರಿಗೆ 1.10ಲಕ್ಷ ರೂ.ವೇತನ ನೀಡಲಾಗುವುದು.ಕುಗ್ರಾಮ,ಗಡಿಭಾಗದಲ್ಲಿಸೇವೆ ಸಲ್ಲಿಸಲು ಮುಂದೆ ಬಂದಲ್ಲಿ15ಸಾವಿರಹೆಚ್ಚುವರಿ ಸಂಬಳ ದೊರೆಯಲಿದೆ.ನಿವೃತ್ತರಾದವೈದ್ಯರು ಮಾನಸಿಕ ಹಾಗೂ ದೈಹಿಕವಾಗಿಸದೃಢರಾಗಿದ್ದರೆ,ಗುತ್ತಿಗೆಆಧಾರದಲ್ಲಿ 70ವರ್ಷದವರೆಗೆಅವರಿಗೆ ಕೆಲಸ ಮಾಡಲು ಅವಕಾಶನೀಡಲಾಗುತ್ತದೆ.ಜತೆಗೆ,ತಲಾ 400ಫಾರ್ಮಸಿಸ್ಟ್,ನರ್ಸ್,ಲ್ಯಾಬ್ಟೆಕ್ನಿಶಿಯನ್ಸ್ ನೇಮಕಾತಿಗೂಕ್ರಮ ವಹಿಸುವುದಾಗಿ ಸಚಿವರುವಿವರಿಸಿದರು.

ಅಪರೂಪದಔಷಧ ದಾಸ್ತಾನಿಗೆ ಸೂಚನೆ

ಶಿವಮೊಗ್ಗ,ಶಿರಸಿ,ಸಾಗರ ಮತ್ತಿತರಕಡೆ ಕಂಡುಬರುವ ಕ್ಯಾಸನೂರುಫಾರೆಸ್ಟ್ ಡಿಸೀಸ್ (ಕೆಎಫ್‌ಡಿ-ಮಂಗನಕಾಯಿಲೆ) ಚಿಕಿತ್ಸೆಗೆನೀಡಲಾಗುವ ಚುಚ್ಚುಮದ್ದು ಬಳಕೆ2-3 ವರ್ಷದಿಂದನಿಂತಿದೆ. ಹೀಗಾಗಿಈಗ ಚಿಕಿತ್ಸೆಗೆ ಆಯಿಲ್ (ದೀಪ-30)ನೀಡಲಾಗುತ್ತಿದೆ.ಈ ಜಿಲ್ಲೆಗಳಲ್ಲಿಪ್ರತಿ ಆರೋಗ್ಯ ಕೇಂದ್ರಗಳಲ್ಲಿ10 ಔಷಧಲಭ್ಯವಿರಬೇಕು.ಜತೆಗೆ ಹಾವುಕಡಿತಕ್ಕೆ ಅಗತ್ಯವಿರುವ ಔಷಧಿಗಳನ್ನುದಾಸ್ತಾನಿಡುವಂತೆ ಸೂಚಿಸಿದ್ದೇವೆ.ಸರಕಾರಿ,ಖಾಸಗಿ ಆಸ್ಪತ್ರೆಗಳಲ್ಲಿಇವುಗಳಿಗೆ ಉಚಿತ ಚಿಕಿತ್ಸೆ ನೀಡಲುಕ್ರಮ ಕೈಗೊಳ್ಳಲಾಗಿದೆ.

ಪ್ರಸ್ತುತ200ಕ್ಕೂಅಧಿಕ ಔಷಧ ಖರೀದಿಗೆ ಟೆಂಡರ್ಆಗಿದ್ದು, ಮುಂದಿನ3 ತಿಂಗಳಲ್ಲಿಔಷಧ ಕೊರತೆ ನಿವಾರಿಸಿ,ಮುಂದಿನ ವರ್ಷಕ್ಕೆಅಗತ್ಯವಿರುವ ಔಷಧ ಖರೀದಿಗೆ ಕ್ರಮಕೈಗೊಳ್ಳಲಾಗುವುದು.ಸರಕಾರಿಆಸ್ಪತ್ರೆಗಳಲ್ಲಿ ಔಷಧ ಸಮಸ್ಯೆಎದುರಾದರೆ ನೇರವಾಗಿ ಸಚಿವರಕಚೇರಿಗೆ ಅಥವಾ ಇಲಾಖೆಯ ಕಾರ್ಯದರ್ಶಿಗಳಕಚೇರಿಗೆ ಕರೆ ಮಾಡಿದರೆ ಕೂಡಲೇಸರಿಪಡಿಸಲಾಗುವುದು.ಶೀಘ್ರದಲ್ಲಿಇದಕ್ಕಾಗಿ ಸಹಾಯವಾಣಿ ತೆರೆಯಲಾಗುವುದುಎಂದು ಸಚಿವರು ಭರವಸೆ ನೀಡಿದರು.

ವಿವಿಧಸಮಿತಿಗಳ ರಚನೆ

ಕಣ್ಣಿಗೆ ಸಂಬಂಧಿಸಿ ಆರೋಗ್ಯ ಇಲಾಖೆಯಲ್ಲಿರುವಯೋಜನೆಗಳು,ಸಮಸ್ಯೆಗಳು,ಪರಿಹಾರಗಳಬಗ್ಗೆ ವಿಶನ್ ಕಮಿಟಿ ರಚನೆ.ಅದೇ ರೀತಿ ಮಾನಸಿಕಆರೋಗ್ಯ, ಬಾಯಿರೋಗಕ್ಕೆ ಸಂಬಂಧಿಸಿಯೂ ಸಮಿತಿರಚಿಸಲಾಗುವುದು.ಸಮಿತಿಯಲ್ಲಿತಜ್ಞ ವೈದ್ಯರು ಇರಲಿದ್ದು,ಇವರು ಜನರ ನಡುವೆಸೇತುವೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆಎಂದು ಸಚಿವರು ತಿಳಿಸಿದ್ದಾರೆ.

ಗ್ರಾಮೀಣಮಟ್ಟದಲ್ಲಿ ರಕ್ತನಿಧಿ ಸಂಗ್ರಹಕ್ಕಾಗಿದುಡಿವ ಸಂಸ್ಥೆಗಳು ಕೇಂದ್ರಗಳಿಗೆವಿಶೇಷ ವೆಬ್‌ಸೈಟ ಮಾಡಲಾಗುವುದು.ಸಂಸ್ಥೆಗಳುನೋಂದಣಿ ಮಾಡಿಕೊಂಡು ಎಷ್ಟುರಕ್ತಸಂಗ್ರಹ ಮಾಡುತ್ತಿದ್ದೇವೆಎಂಬ ಮಾಹಿತಿಯನ್ನು ನಿಯಮಿತವಾಗಿನೀಡಿದಲ್ಲಿ ಅವರಿಗೆ ಪ್ರಮಾಣಪತ್ರನೀಡಲಾಗುವುದು.

ರಾಜ್ಯದಲ್ಲಿ ಆ್ಯಂಟಿಬಯೋಟಿಕ್ ಔಷಧಗಳ ನಿಯಂತ್ರಣವಿಲ್ಲದ ಖರೀದಿ, ಬಳಕೆಯ ದುಷ್ಪರಿಣಾಮ, ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ತಡೆಯಲು ಸಮಿತಿ ರಚಿಸಲಾಗಿದ್ದು, ಆ್ಯಕ್ಷನ್ ಪ್ಲಾನ್ ಪ್ರಗತಿಯಲ್ಲಿದೆ. ಆದಷ್ಟು ಬೇಗ ಇದು ಕಾಯಪ್ರವೃತ್ತವಾಗಲಿದೆ.

— ಯು.ಟಿ.ಖಾದರ್, ಆರೋಗ್ಯ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net