ಮನಾಲಿಯಲ್ಲಿ ಮೀತಿ ಮೀರಿದ ಪ್ರವಾಸಿಗರು: 10 ಕಿ.ಮೀ ಭೀಕರ ಟ್ರಾಫಿಕ್ ಜಾಮ್; ವಿಡಿಯೋ ವೈರಲ್​! Manali Traffic Jam

 ಮನಾಲಿಯಲ್ಲಿ 10 ಕಿ.ಮೀ ಭೀಕರ ಟ್ರಾಫಿಕ್ ಜಾಮ್
ಮನಾಲಿಯಲ್ಲಿ 10 ಕಿ.ಮೀ ಭೀಕರ ಟ್ರಾಫಿಕ್ ಜಾಮ್
Published on
ಮನಾಲಿ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಿಮಾಚಲ ಪ್ರದೇಶದ ಮನಾಲಿಯ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಸುಮಾರು 10 ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್‌ (Manali Traffic Jam) ನಲ್ಲಿ ಸಿಲುಕಿ ವಾಹನಗಳು ನಿಂತಲ್ಲಿಯೇ ತಾಸುಗಟ್ಟಲೇ ನಿಂತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಟ್ರಾಫಿಕ್​ನಲ್ಲಿ ನಿಲ್ಲಲು ಇಲ್ಲಿಗೆ ಬರಬೇಕೆ?

ನಿಖಿಲ್​ ಸೈನಿ ಎಂಬ ಬಳಕೆದಾರ ತಮ್ಮ ಎಕ್ಸ್​ (ಟ್ಚಿಟರ್​) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 10 ಕಿ.ಮೀ ಟ್ರಾಫಿಕ್ ಜಾಮ್‌ನಲ್ಲಿ ಗಂಟೆಗಟ್ಟಲೆ ನಿಲ್ಲಲು ನಾವು ರಜೆ ಹಾಕಿ ಇಲ್ಲಿಗೆ ಬರಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶ ಈಗ ಮೊದಲಿನ ರೀತಿಯಿಲ್ಲ, ಇಲ್ಲಿಗೆ ಬರುವುದು ನಿಜವಾಗಿಯೂ ಬೇಸರ ತರಿಸುತ್ತದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ನೀವು ಮನಾಲಿಗೆ ಬರುವುದೇ ಬೇಡ ಎನ್ನುವುದು ನನ್ನ ಸಲಹೆಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರವಾಸಿಗರು ವಿವೇಕಮತಿಗಳಾಲಿ!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಭಾರತದ ಪ್ರವಾಸಿ ತಾಣಗಳ ದುಸ್ಥಿತಿಯ ಬಗ್ಗೆ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ನಾವು 2016 ರಲ್ಲೇ ರೋಹ್ಟಾಂಗ್ ಪಾಸ್‌ನಲ್ಲಿ ಇಂತಹದ್ದೇ ಭೀಕರ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೆವು. ಆಗ ಟ್ವಿಟರ್​ ಅಥವಾ ಇನ್‌ಸ್ಟಾಗ್ರಾಮ್ ಈಗಿನಷ್ಟು ಇರಲಿಲ್ಲ ಅಷ್ಟೇ, ಸಮಸ್ಯೆ ಕೇವಲ ಇವತ್ತಿನದಲ್ಲ, ಇದು ಎಂದಿನಿಂದಲೂ ಇದ್ದದ್ದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಇಂದಿನ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ, ಒಂದಾನೊಂದು ಕಾಲದಲ್ಲಿ ಪ್ರವಾಸ ಎಂದರೆ ಪ್ರಕೃತಿಯೊಂದಿಗೆ ಬೆರೆಯುವುದು, ಹೊಸ-ಹೊಸ ಸ್ಥಳಗಳನ್ನು ನೋಡಿ ಆನಂದಿಸುವುದಾಗಿತ್ತು. ಆದರೆ ಈಗ ಕೇವಲ ಪ್ರವಾಸಿ ತಾಣಗಳಿಗೆ ಹೋಗಿ ಮದ್ಯ ಸೇವಿಸಿ, ಪಾರ್ಟಿ ಮಾಡಿ ಬೇರೆಯವರ ಮನಶಾಂತಿಯನ್ನು ಸಹ ಹಾಳು ಮಾಡುವುದಾಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಜೆ ಬಂತೆಂದರೆ ಸಾಕು 'ಮನಾಲಿಗೆ ಓಡೋ' ಕ್ರೇಜ್!

ಬೇಸಿಗೆ ರಜೆ, ದೀಪಾವಳಿ, ಕ್ರಿಸ್‌ಮಸ್ ಅಥವಾ ಯಾವುದೇ ಲಾಂಗ್ ವೀಕೆಂಡ್ ಸಿಕ್ಕರೆ ಸಾಕು, ಎಲ್ಲರೂ ಒಂದೇ ಜಾಗಕ್ಕೆ ನುಗ್ಗುತ್ತಾರೆ. ಟ್ರಡಿಂಗ್​ನಲ್ಲಿರುವ ಸ್ಥಳಗಳಿಗಿಂತ ನಾನ್​ ಟ್ರೆಡಿಂಗ್​ನಲ್ಲಿದ್ದು, ಸಮೀಪದ ಸ್ಥಳಗಳನ್ನು ಆಯ್ದುಕೊಳ್ಳುವುದು ಉತ್ತಮ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮನಾಲಿ ಹಾಟ್​ ಟ್ರೆಡಿಂಗ್​ನಲ್ಲಿದೆ ಈ ಸಮಯದಲ್ಲಿ ಮನಾಲಿ ರೀತಿಯಲ್ಲಿರುವ ಇತರೆ ಸ್ಥಳಗಳಿಗೆ ಹೋಗಿ, ಕೆಲ ದಿನಗಳ ನಂತರ ಮನಾಲಿಗೆ ಹೋಗುವುದು ಒಳ್ಳೆಯ ಯೋಜನೆ ಎಂದು ಜನ ಹೇಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ 'ರೀಲ್ಸ್' ತಂದಿಟ್ಟ ಆಪತ್ತು!

ಈ ಹಿಂದೆ ಪ್ರವಾಸಿತಾಣಕ್ಕೆ ಮನಸ್ಸಿಗೆ ಶಾಂತಿ ದೊರೆಯಲು, ನೂತನ ಸ್ಥಳಗಳನ್ನು ನೋಡಲು ಅಥವಾ ಮನೆಯವರೊಂದಿಗೆ ಹೊರಗೆ ಸಮಯ ಕಳೆಯಲು ಪ್ರವಾಸವನ್ನು ಕೈಗೊಳ್ಳಲಾಗುತ್ತಿತ್ತಿ. ಆದರೆ ಈಗ ಪ್ರವಾಸ ಎನ್ನುವುದು ಕೇವಲ ಇನ್​​ಸ್ಟಾಗ್ರಾಮ್​ ಪೋಸ್ಟ್, ರೀಲ್ಸ್​ಗಳಿಗೆ ಸೀಮಿತವಾಗಿ ಹೋಗಿದೆ.
ತಮ್ಮ ಕಣ್ಣುಗಳಿಂದ ಪ್ರಕೃತಿಯನ್ನು ನೋಡುವುದಕ್ಕಿಂತ ಯಾರೋ ಎಲ್ಲೋ ಕುಳಿತಿರುವರ ಲೈಕ್ಸ್, ಕಮೆಂಟ್‌ಗಳಿಗಾಗಿ ಪ್ರವಾಸ ಮಾಡುವಂತೆ ಜನ ವರ್ತಿಸುತ್ತಿದ್ದಾರೆ ಎಂದರೆ ಸುಳ್ಳಲ್ಲ.
ಒಟ್ಟಾರೆಯಾಗಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸದೆ, ಮಿತಿಮೀರಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಇಂದಿನ ಓವರ್ ಕ್ರೌಡೆಡ್​ ಟೂರಿಸಂ ನೀತಿ ಗಿರಿಧಾಮಗಳ ಅಸಲಿ ಸುಂದರತೆಯನ್ನೇ ನುಂಗಿ ಹಾಕುತ್ತಿದೆ ಎಂದತೆ ಅತಿಶಯೋಕ್ತಿ ಇಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net