ಪನೀರ್ ಪ್ರಿಯರೇ ಎಚ್ಚರ! ಕೆಮಿಕಲ್ ಮೂಲಕ ತಯಾರಿಕೆ; ಹೈದರಾಬಾದ್‌ನಲ್ಲಿ 825 ಕೆಜಿ ನಕಲಿ ಪನೀರ್ ಜಪ್ತಿ! Hyderabad Fake Paneer
ಕೆಮಿಕಲ್ ಬಳಸಿ ತಯಾರಿಸುತ್ತಿದ್ದ 825 ಕೆಜಿ ನಕಲಿ ಪನೀರ್ ಜಪ್ತಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೈದರಾಬಾದ್‌ನ 45 ಅಂಗಡಿಗಳ ಮೇಲೆ ಪೊಲೀಸರ ದಾಳಿ!
ಕೆಮಿಕಲ್ ಬಳಸಿ ತಯಾರಿಸುತ್ತಿದ್ದ 825 ಕೆಜಿ ನಕಲಿ ಪನೀರ್ ಜಪ್ತಿ
ಸಸ್ಯಮೂಲ ತೈಲ ಹಾಗೂ ಸಿಂಥೆಟಿಕ್ ಹಾಲಿನಿಂದ ತಯಾರಾಗುತ್ತಿದ್ದ ನಕಲಿ ಪನೀರ್
ಹೈದರಾಬಾದ್: ಭಾರತದಲ್ಲಿ ದಿನ ಕಳೆದಂತೆ ಆಹಾರ ಸುರಕ್ಷತಾ ಮತ್ತು ತಯಾರಿಕೆಯಲ್ಲಿ ಕೊರತೆಗಳು ತಾಂಡವವಾಡುತ್ತಿದೆ. ಪ್ರತಿದಿನ ದೇಶದ ಯಾವುದಾದರೂ ಒಂದು ಸ್ಥಳದಲ್ಲಿ ನಕಲಿ ಆಹಾರ ಪದಾರ್ಥವನ್ನು ತಯಾರು ಮಾಡಲಾಗುತ್ತಿರುವ ಜಾಲವನ್ನು ಭೇದಿಸಲಾಗುತ್ತಿದೆ.
ಇತ್ತೀಚೆಗೆ ಹೈದರಾಬಾದ್‌ನ ಪೊಲೀಸರು, ನಕಲಿ ಪನೀರ್ (Hyderabad Fake Paneer) ತಯಾರಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿ ನಡೆಸಿದ ದಾಳಿಯಲ್ಲಿ ಸುಮಾರು 825 ಕಿ.ಲೋ ನಕಲಿ ಪನ್ನೀರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ವರದಿ ಪ್ರಕಾರ, ಹೈದರಾಬಾದಿನ ಸುಮಾರು 45 ಶಂಕಿತ ರಿಟೇಲ್ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿ ಅವರು ನಕಲಿ ಪನೀರ್ನ್ನು ಮಾರಾಟ ಮಾಡುತ್ತಿರುವುದು ಖಚಿತವಾಗಿದೆ.
ಈ ಅಂಗಡಿಗಳಲ್ಲಿ ಸಂಶ್ಲೇಷಿತ ಹಾಲು (Synthetic Milk) ಹಾಗೂ ಸಸ್ಯಮೂಲ ತೈಲಗಳಿಂದ ತಯಾರಿಸಲಾದ ವಸ್ತುವನ್ನು ಪನೀರ್ ಎಂದು ಮಾರಾಟ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಹಾಗೆಯೇ ಚೀಸ್ನ್ನು ತಾಜಾ ಪನೀರ್ ಎಂದು ಸುಳ್ಳು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಕಲಿ ಪನೀರ್ನ್ನು ಜಫ್ತಿ ಮಾಡಿದ ಬಳಿಕ ಮಾತನಾಡಿದ ಉಪ ಪೊಲೀಸ್ ಆಯುಕ್ತ ವೈಭವ್ ಗಾಯಕ್ವಾಡ್ ರಘುನಾಥ್, ಈ ನಕಲಿ ಪನೀರ್ ಜಾಲ ಬಹಳ ವಿಸ್ತಾರವಾಗಿದ್ದು, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಈ ನಕಲಿ ಪನೀರ್ ತಯಾರಾಗುತ್ತೆ ಎಂದು ಹೇಳಿದ್ದಾರೆ.
ಈ ನಕಲಿ ಪನೀರ್ನ್ನು ಸೇವಿಸಿದರೆ, ಹೊಟ್ಟೆ ನೋವು, ವಾಂತಿ-ಭೇದಿ ಮತ್ತು ಕೆಲ ಸನ್ನಿವೇಶಗಳಲ್ಲಿ ಕ್ಯಾನ್ಸರ್ ಕೂಡ ಉಂಟಾಗಬಹುದೆಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ವಿಶೇಷ ತಂಡವನ್ನು ರಚಿಸಿ ಈ ಜಾಲವನ್ನು ಭೇದಿಸುತ್ತೆವೆಂದು ಆಯುಕ್ತರು ತಿಳಿಸಿದ್ದಾರೆ, (ಏಜನ್ಸೀಸ್).