ರಷ್ಯಾದ ತೈಲಗಾರದ ಮೇಲೆ ಉಕ್ರೇನ್​ ಡ್ರೋನ್​ ಅಟ್ಯಾಕ್​: ಮಾಸ್ಕೋದಲ್ಲಿ ಸುರಿದ ಭಯಾನಕ ತೈಲ ಮಿಶ್ರಿತ ಕಪ್ಪು ಮಳೆ!Black Rain in Moscow

ಮಾಸ್ಕೋದಲ್ಲಿ ಸುರಿದ ಭಯಾನಕ ಕಪ್ಪು ತೈಲ ಮಳೆ
ಮಾಸ್ಕೋದಲ್ಲಿ ಸುರಿದ ಭಯಾನಕ ಕಪ್ಪು ತೈಲ ಮಳೆ
Published on

ಪ್ರಮುಖ ಮುಖ್ಯಾಂಶಗಳು

  • ರಷ್ಯಾದ ಅತಿದೊಡ್ಡ ತೈಲಾಗಾರದ ಮೇಲೆ ಉಕ್ರೇನ್ ಡ್ರೋನ್‌ ದಾಳಿ
  • ತೈಲ ಸಂಸ್ಕರಣಾ ಘಟಕ ಧ್ವಂಸ
  • ಮಾಸ್ಕೋದಲ್ಲಿ ಸುರಿದ ಭಯಾನಕ ಕಪ್ಪು ತೈಲ ಮಳೆ
  • ದಾಳಿಯಲ್ಲಿ ಮಕ್ಕಳು-ಮಹಿಳೆ ಸೇರಿ 17 ಜನ ಸಾವು
ಮಾಸ್ಕೋ: ನಾಲ್ಕು ತಿಂಗಳಿನ ಹಿಂದೆ ಆರಂಭವಾದ ಇರಾನ್​- ಅಮೆರಿಕ ಸಂಘರ್ಷ, ಶಾಂತಿ-ಮಾತುಕತೆ ಮೂಲಕ ತಣ್ಣಗಾದರೂ ನಾಲ್ಕು ವರ್ಷದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಮಾತ್ರ ಸಮಾಪ್ತಿಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
ಗುರುವಾರ (ಜೂ.18) ರಷ್ಯಾದ ರಾಜಧಾನಿ ಮಾಸ್ಕೋನಲ್ಲಿರುವ ತೈಲಾಗಾರದ ಮೇಲೆ ಉಕ್ರೇನ್​ ವೈಮಾನಿಕ ದಾಳಿ ನಡೆಸಿದ ಪರಿಣಾಮ ರಷ್ಯಾದಾದ್ಯಂತ ಕಪ್ಪು ಬಣ್ಣದ ತೈಲ ಮಳೆ (Black Rain in Moscow) ಬಿದ್ದಿದ್ದೆ ಎಂದು ವರದಿಯಾಗಿದೆ.
ರಷ್ಯಾದ ಅತಿ ದೊಡ್ಡ ತೈಲ ಸಂಸ್ಕೃರಣಾ ಘಟಕವಾದ ಕಪೋಟ್ನ್ಯಾ(Kapotnya) ಮೇಲೆ ಉಕ್ರೇನ್​ ದಾಳಿ ಮಾಡಿದ್ದು, ಈ ತೈಲಾಗಾರದಲ್ಲಿಯೇ ದೇಶದ ಒಟ್ಟು ಶೇ. 40 ರಷ್ಟು ತೈಲ ಉತ್ಪಾದನೆ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ.

ನಗರದಲ್ಲಿ ಕಪ್ಪು ಮಳೆ!

ಉಕ್ರೇನ್​, ರಷ್ಯಾದ ತೈಲ ಸಂಸ್ಕೃರಣಾ ಘಟಕದ ಮೇಲೆ ದಾಳಿ ಮಾಡಿದ ಕೆಲ ಸಮಯದ ನಂತರ ನಗರದಲ್ಲಿ ಮಳೆ ಬಿದ್ದಿದ್ದೆ. ಆದರೆ ಈ ಮಳೆಯ ಬಣ್ಣ ಕಪ್ಪು ಬಣ್ಣದಲ್ಲಿದ್ದು, ಇದು ತೈಲ ಮಿಶ್ರಿತ ಮಳೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್​ ನಡುವಿನ ಸಂಘರ್ಷವನ್ನು ನೋಡುತ್ತಿರುವ ಜನ, ಈ ಕಪ್ಪು ಬಣ್ಣದ ಮಳೆಯನ್ನು ಕಂಡು ಕಕ್ಕಾಬಿಕ್ಕಿ ಆಗಿದ್ದಾರೆ.
ತೈಲಾಗಾರದ ಸುತ್ತಲಿನ ಪ್ರದೇಶದಲ್ಲಿ ಈ ಕಪ್ಪು ಬಣ್ಣದ ತೈಲ ಮಿಶ್ರಿತ ಮಳೆ ಕಂಡುಬಂದಿದ್ದು, ಜನರಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆ ಬೆನ್ನಲ್ಲೆ ರಷ್ಯಾ ಸರ್ಕಾರವು ತನ್ನ ನಾಗರಿಕರಿಗೆ ಮನೆಯಿಂದ ಆಚೆ ಬರದಂತೆ, ಕಿಟಿಕಿ ಬಾಗಿಲನ್ನು ಭದ್ರ ಪಡಿಸಿಕೊಳ್ಳುವಂತೆ ನಿದರ್ದೇಶನ ನೀಡಿದೆ.

ನಾವು ದಾಳಿಯನ್ನು ತಡೆದಿದ್ದೆವೆ!

ಈ ಘಟನೆಗೆ ಉತ್ತರಿಸಿರುವ ರಷ್ಯಾ ಸರ್ಕಾರ, ನಮ್ಮ ಮೇಲೆ ಉಕ್ರೇನ್​ ಸುಮಾರು 555 ಡ್ರೋನ್​ಗಳನ್ನು ಉಡಾಯಿಸಿತ್ತು. ಅದರಲ್ಲಿ ಸುಮಾರು 200 ಡ್ರೋನ್​ಗಳು ಮಾಸ್ಕೋ ಮೇಲೆ ಬೀಳಲಿತ್ತು.
ನಾವು ನಮ್ಮ ರಕ್ಷಣಾ ಸಾಮರ್ಥ್ಯವನ್ನು ಬಳಿಸಿಕೊಂಡು ಬಹಳಷ್ಟು ಡ್ರೋನ್​ಗಳನ್ನು ಕೆಡವಿದ್ದೆವೆ, ಆದರೆ ಕೆಲ ಡ್ರೋನ್​ಗಳು ತೈಲ ಸಂಸ್ಕರಣಾ ಘಟಕಕ್ಕೆ ಬಡಿದಿವೆ. ಇನ್ನು ಕೆಲವು ನಗರದ ಮೇಲೆ ಬಿದ್ದಿದ್ದು, ಇದರಲ್ಲಿ ಸುಮಾರು 17 ಜನ ಮೃತ ಪಟ್ಟಿದ್ದಾರೆಂದು ಮಾಹಿತಿ ಹಂಚಿಕೊಂಡಿದೆ. ನಾವು ಈ ದಾಳಿಯನ್ನು ಖಂಡಿತ ಸಹಿಸುವುದಿಲ್ಲ, ಆದಷ್ಟು ಬೇಗ ನಮ್ಮ ಜನರ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೆವೆಂದು ರಷ್ಯಾ, ಉಕ್ರೇನ್​ ಮೇಲೆ ದಾಳಿ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net