ಸಿಂಧೂ ನೀರಿಗಾಗಿ ಸಶಸ್ತ್ರ ಹೋರಾಟಕ್ಕೂ ಸಿದ್ಧ: ಭಾರತಕ್ಕೆ ಯುದ್ಧದ ಎಚ್ಚರಿಕೆ ನೀಡಿದ ಪಾಕ್ ಸಚಿವ ಬಿಲಾವಲ್ ಭುಟ್ಟೋ!Bilawal Bhutto on Indus Water Treaty

ಸಿಂಧೂ ನದಿ ನೀರಿಗಾಗಿ ಭಾರತದ ವಿರುದ್ಧ ಸಶಸ್ತ್ರ ಹೋರಾಟಕ್ಕೂ ಸಿದ್ಧ: ಬಿಲಾವಲ್ ಭುಟ್ಟೋ
ಸಿಂಧೂ ನದಿ ನೀರಿಗಾಗಿ ಭಾರತದ ವಿರುದ್ಧ ಸಶಸ್ತ್ರ ಹೋರಾಟಕ್ಕೂ ಸಿದ್ಧ: ಬಿಲಾವಲ್ ಭುಟ್ಟೋ
Published on

ಪ್ರಮುಖ ಮುಖ್ಯಾಂಶಗಳು

  • ಪಹಲ್ಗಾಮ್ ದಾಳಿ ಬಳಿಕ ಸಿಂಧೂ ನದಿ ಒಪ್ಪಂದವನ್ನು ರದ್ದು ಪಡಿಸಿದ ಭಾರತ
  • ಸಿಂಧೂ ನದಿ ನೀರಿಗಾಗಿ ಭಾರತದ ವಿರುದ್ಧ ಸಶಸ್ತ್ರ ಹೋರಾಟಕ್ಕೂ ಸಿದ್ಧ: ಬಿಲಾವಲ್ ಭುಟ್ಟೋ
  • ಉಗ್ರರ ಪೋಷಣೆ ನಿಲ್ಲಿಸುವವರೆಗೂ ಹನಿ ನೀರನ್ನೂ ಬಿಡಲ್ಲ ಎಂದಿರುವ ಭಾರತ
ಇಸ್ಲಾಮಾಬಾದ್​: ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಕಿಸ್ತಾನ ಉಗ್ರ ಕೃತ್ಯ ನಡೆಸಿದ ದಿನದಿಂದ ಭಾರತ, ಶತ್ರು ದೇಶದ ಜೊತೆಗಿದ್ದ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದುಪಡಿಸಿ, ಭಾರತದಿಂದ ಪಾಕಿಸ್ತಾನಕ್ಕೆ ನೀರು ಸೇರದಂತೆ ಮಾಡಿತ್ತು.
ಇದನ್ನು ಪ್ರಶ್ನಿಸಿ ಪಾಕಿಸ್ತಾನ ವಿಶ್ವಸಂಸ್ಥೆ ಸೇರಿ ಇತರ ಜಾಗತಿಕ ವೇದಿಕೆಗಳಲ್ಲಿ ಸಿಂಧೂ ನದಿ ನೀರು ನಮಗೆ ಸೇರಬೇಕು ಎಂದಾಗ, ಭಾರತ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಿದ್ಧಾಂತ ನೀಡಿತ್ತು.
ಇದೀಗ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto on Indus Water Treaty) ಮತ್ತೊಮ್ಮೆ ಭಾರತದ ವಿರುದ್ಧ ಹೇಳಿಕೆ ನೀಡಿದ್ದು, ನಾವು ಸಿಂಧೂ ನದಿಯನ್ನು ಪಡೆದೇ ತೀರುತ್ತೆವೆ ಎಂದು ಸವಾಲೆಸೆದಿದ್ದಾರೆ.

ಪಾಕಿಸ್ತಾನ ತನ್ನ ಹೋರಾಟ ಬಿಡಲ್ಲ!

ಸಿಂಧೂ ನದಿ ನೀರು ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳಲ್ಲಿ ಹರಿಯುವ ನೀರಾಗಿದ್ದು, ಇಲ್ಲಿ ಭಾರತಕ್ಕಿರುವಷ್ಟೇ ಹಕ್ಕು ಪಾಕಿಸ್ತಾನಕ್ಕೂ ಇದೆ ಎಂದು ಬಿಲಾವಲ್​ ಹೇಳಿದ್ದಾರೆ.
ಆದರೆ ಭಾರತ ನಮ್ಮ ಜೊತೆಗಿದ್ದ ಒಪ್ಪಂದವನ್ನು ಮುರಿದಿದೆ. ಇದನ್ನು ಶೆಹಬಾಜ್​ ಶರೀಫ್​ ಸರ್ಕಾರವಾಗಲೀ, ಇಸ್ಲಾಮಾಬಾದ್ ಆಗಲಿ ಸಹಿಸುವುದಿಲ್ಲ. ಪಾಕಿಸ್ತಾನ ತನ್ನ ಅಸ್ಮಿತೆಯ ಹೋರಾಟವನ್ನು ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ.
1960 ರಲ್ಲಿಯೇ ಸಿಂಧೂ ನದಿ ಬಗ್ಗೆ ಪಾಕಿಸ್ತಾನ ಮತ್ತು ಭಾರತದ ನಡುವೆ ಒಪ್ಪಂದವಾಗಿದೆ. ಈಗ ಎರಡು ವರ್ಷಗಳ ಹಿಂದೆ ಭಾರತ ಒಪ್ಪಂದವನ್ನು ಮುರಿದಿದೆ. ಪಾಕಿಸ್ತಾನ ತನ್ನ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಇದು ಹೀಗೆ ಮುಂದುವರೆದರೆ ನಾವು ಸಶಸ್ತ್ರ ಹೋರಾಟವನ್ನು ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅವರೊಂದು ಭಯೋತ್ಪಾದಕ ಪೋಷಕ ದೇಶ!

ಪಾಕಿಸ್ತಾನದ ಈ ಆರೋಪಕ್ಕೆ ತಕ್ಕ ಉತ್ತರ ನೀಡಿರುವ ಭಾರತ, ಪಾಕಿಸ್ತಾನ ಭಯೋತ್ಪಾದಕರಿಗೆ ಸದಾ ಆಶ್ರಯ ನೀಡುತ್ತಾ ಬಂದಿದೆ. ಎಲ್ಲಿವರೆಗೆ ಅವರು ಉಗ್ರರಿಗೆ ಪೋಷಣೆ ನೀಡುತ್ತಾರೋ ಅಲ್ಲಿವರೆಗೆ ನಾವು ನೀರನ್ನು ಬಿಡುವುದಿಲ್ಲ ಎಂದು ಭಾರತ ಜಾಗತಿಕ ವೇದಿಕೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
1960 ರಲ್ಲಿ ಅಂದಿನ ಉಭಯ ದೇಶಗಳ ನಾಯಕರು ಮಾಡಿಕೊಂಡಿರುವ ಒಪ್ಪಂದವನ್ನು ಪ್ರಸ್ತುತ ಸ್ಥಿತಿಯಲ್ಲಿ ಪಾಲನೆ ಮಾಡಲು ಆಗುವುದಿಲ್ಲ. ಪಾಕಿಸ್ತಾನದ ವಿದೇಶಾಂಗ ನೀತಿ ಬದಲಾದರೆ ಮಾತ್ರ ಭಾರತ ಸಿಂಧೂ ನದಿ ಒಪ್ಪಂದವನ್ನು ಪಾಲಿಸುತ್ತದೆ ಎಂದು ಹೇಳಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net