ನನ್ನ ಕುಟುಂಬಕ್ಕೆ ಲಾಭವಿಲ್ಲ: ಗಡ್ಕರಿ ವಿರುದ್ಧ ಡೀಪ್​ಫೇಕ್​ ವಿಡಿಯೋ; ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ ಕೇಂದ್ರ ಸಚಿವ! Nitin Gadkari Moves Bombay High Court

ಬಾಂಬೆ ಹೈಕೋರ್ಟ್​ ಮೆಟ್ಟಲೇರಲು ಸಿದ್ಧವಾದ ಕೇಂದ್ರ ಸಚಿವ ನಿತಿನ್​ ಗಡ್ಕರಿ
ಬಾಂಬೆ ಹೈಕೋರ್ಟ್​ ಮೆಟ್ಟಲೇರಲು ಸಿದ್ಧವಾದ ಕೇಂದ್ರ ಸಚಿವ ನಿತಿನ್​ ಗಡ್ಕರಿ
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಜಾರಿಯಾಗಿರುವ ಇ-20 ಇಂಧನ ನೀತಿ
  • ಈ ನೀತಿಯಿಂದ ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ವೈಯಕ್ತಿಕ ಲಾಭ ಎಂದು ಟ್ರೋಲ್​
  • ಡೀಪ್​​ಫೇಕ್​ ವಿಡಿಯೋಗಳ ಮೂಲಕ ನನ್ನ ಹಾಗೂ ಕುಟುಂಬದವರ ತೆಜೋವಧೆ ನಡೆಯುತ್ತಿದೆ
  • ಬಾಂಬೆ ಹೈಕೋರ್ಟ್​ ಮೆಟ್ಟಲೇರಲು ಸಿದ್ಧವಾದ ಕೇಂದ್ರ ಸಚಿವ ನಿತಿನ್​ ಗಡ್ಕರಿ
ಮುಂಬೈ: ದೇಶದಲ್ಲಿ ನೀಟ್​ ಪ್ರತಿಭಟನೆ ಕಾವು ಕಡಿಮೆಯಾಗುತ್ತಿದ್ದಂತೆ ನೇಪಥ್ಯಕ್ಕೆ ಸರಿದಿದ್ದ ಪೆಟ್ರೋಲ್​ನಲ್ಲಿ ಎಥೆನಾಲ್​ ಮಿಶ್ರಣ ಮಾಡುವ ವಿಚಾರ ವಿವಾದದ ಸ್ವರೂಪ ತೆಗೆದುಕೊಳ್ಳುತ್ತಿದೆ.
ಈ ಎಥೆನಾಲ್​ ಮಿಶ್ರಿತ ಪೆಟ್ರೋಲ್​ ಬಳಕೆಯ ಯೋಜನೆಯನ್ನು ರೂಪಿಸಿರುವ ಕೇಂದ್ರ ಸಚಿವ ನಿತಿನ್​​ ಗಡ್ಕರಿ ಅವರನ್ನು ಹಾಗೂ ಅವರ ಕುಟುಂಬದವರ ಕುರಿತು ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಾನಹಾನಿಕರ ವಿಡಿಯೋಗಳನ್ನು ಸೃಷ್ಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಕೆಂಡಾಮಂಡಲವಾಗಿರುವ ನಿತಿನ್​ ಗಡ್ಕರಿ (Nitin Gadkari Moves Bombay High Court), ನೆಟ್ಟಿಗರ ವಿರುದ್ಧ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ನನಗೆ ಇದರಿಂದ ವೈಯಕ್ತಿಕ ಲಾಭವಿಲ್ಲ!

ಪೆಟ್ರೋಲ್​ನಲ್ಲಿ ಎಥೆನಾಲ್​ ಅನ್ನು ಮಿಶ್ರಣ ಮಾಡಿದರೆ ಎಥನಾಕ್​ ತಯಾರಕ ಕಂಪನಿಗಳಿಗೆ ಲಾಭವಾಗುತ್ತದೆ. ಗಡ್ಕರಿ ಅವರ ಮಕ್ಕಳದೇ ಎಥೆನಾಲ್​ ಕಂಪನಿ ಇರುವ ಕಾರಣ ತಮ್ಮ ಮಕ್ಕಳಿಗೆ ಲಾಭ ಮಾಡಿಕೊಡಲು ಈ ನೀತಿಯನ್ನು ಜಾರಿಗೆ ತಂದಿದ್ದಾರೆಂದು ಆನ್​ಲೈನ್​ನಲ್ಲಿ ಟ್ರೋಲ್​ ಮಾಡಲಾಗುತ್ತಿದೆ.
ಇದನ್ನು ವಿರೋಧಿಸಿ, ಕೇಂದ್ರ ಸಚಿವರು, ನಾನು ಈ ನೀತಿಯನ್ನು ನನ್ನ ವೈಯಕ್ತಿಕ ಲಾಭಕ್ಕಾಗಿ ತಂದಿಲ್ಲ, ಇದರಿಂದ ನನ್ನ ವರ್ಚಸ್ಸು ಹಾಳಾಗುತ್ತಿದೆ ಎಂದು ಟ್ರೋಲ್​ ಹಾಗೂ ವಿಡಿಯೋ ಮಾಡುತ್ತಿರುವವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಕೇಂದ್ರ ಸಚಿವರು ಪ್ರಕರಣವನ್ನು ದಾಖಲಿಸಲು ನ್ಯಾಯಾಲಯ ಕೂಡ ಒಪ್ಪಿಗೆ ಸೂಚಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇದರ ವಿಚಾರಣೆ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಡೀಪ್​ಫೇಕ್​ ವಿಡಿಯೋ ಮಾಡುತ್ತಿದ್ದಾರೆ!

ಕೇವಲ ಸುಳ್ಳು ಮಾಹಿತಿಯನ್ನು ಸೃಷ್ಟಿಸಲು, ಡೀಪ್​​ಫೇಕ್​ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಹರಡುತ್ತಿರುವ ವಿಡಿಯೋನಲ್ಲಿ ನನ್ನ ಹಾಗೂ ನನ್ನ ಮಕ್ಕಳ ಭಾವಚಿತ್ರವನ್ನು ಬಳಸಲಾಗುತ್ತಿದೆ ಎಂದು ಗಡ್ಕರಿ ಆರೋಪಿಸಿದ್ದಾರೆ.
ಇ-20 ನೀತಿ ಮೂಲಕ ನಾನು ನನ್ನ ಕುಟುಂಬದವರಿಗೆ ಲಾಭ ಮಾಡಿಕೊಡಲು ಜಾರಿಗೆ ತಂದಿದ್ದೆನೆಂದು ಮಾಡುತ್ತಿರುವ ವೈಯಕ್ತಿಕ ದಾಳಿಯನ್ನು ತಪ್ಪಿಸಬೇಕೆಂದು ಗಡ್ಕರಿ ನ್ಯಾಯಾಲಕ್ಕೆ ಸಲ್ಲಿಸಲಿರುವ ಅರ್ಜಿಯಲ್ಲಿ ನಮೂದಿಸಲಿದ್ದಾರೆ.

ಇ-20 ಜನತಾ ಪಾರ್ಟಿ ಸ್ಥಾಪನೆ!

ನೀಟ್​​ ಅಕ್ರಮವನ್ನು ವಿರೋಧಿಸಿ, ಕಾಕ್ರೋಚ್​ ಜನತಾ ಪಾರ್ಟಿ ಜನ್ಮತಾಳಿದಂತೆ, ಪೆಟ್ರೋಲ್​ನಲ್ಲಿ ಎಥೆನಾಲ್​ ಮಿಶ್ರಣವನ್ನು ವಿರೋಧಿಸಿ ಇ-20 ಜನತಾ ಪಾರ್ಟಿ ಎಂಬ ಸೋಷಿಯಲ್​ ಮೀಡಿಯಾ ಅಕೌಂಟ್​ ಹುಟ್ಟಿಕೊಂಡಿದೆ.
ಶುದ್ಧ ಪೆಟ್ರೋಲ್​​ ಅನ್ನು ಪಡೆಯುವುದು ಪ್ರತಿ ನಾಗರಿಕರ ಹಕ್ಕು, ಆದರೆ ಈ ನೀತಿ ಮೂಲಕ ಇದನ್ನು ಕಸಿದು ಕೊಳ್ಳಲಾಗುತ್ತಿದೆ. ಅಂತಯೇ, ಇ-20 ಪೆಟ್ರೋಲ್​ ಅನ್ನು ಕಡ್ಡಾಯ ಮಾಡಿರುವುದು ಸರಿಯಲ್ಲ. ಹೀಗಾಗಿ ಈ ನೀತಿಯನ್ನು ಹಿಂಪಡೆಯಬೇಕು ಎನ್ನುವುದು ಈ ಪಾರ್ಟಿಯ ಆಗ್ರಹವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net