ಸ್ವಲ್ಪ ಸಮಯ ಕೊಡಿ, ಯೋಜನೆ ರೂಪಿಸುತ್ತಿದ್ದೇವೆ: ಪಂಜಾಬ್​ನಲ್ಲಿ ಹೋರಾಟ ನಡೆಯಲಿದೆ; ಅಭಿಜಿತ್​ ದೀಪ್ಕೆ ಸ್ಪಷ್ಟನೆ! Abhijit Dipke on Punjab Protest

ಸ್ವಲ್ಪ ಸಮಯ ಕೊಡಿ, ಪಂಜಾಬ್​ನಲ್ಲಿ ಪ್ರತಿಭಟನೆ ನಡೆಸುತ್ತೇವೆ: ಅಭಿಜಿತ್​ ದೀಪ್ಕೆ
ಸ್ವಲ್ಪ ಸಮಯ ಕೊಡಿ, ಪಂಜಾಬ್​ನಲ್ಲಿ ಪ್ರತಿಭಟನೆ ನಡೆಸುತ್ತೇವೆ: ಅಭಿಜಿತ್​ ದೀಪ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ಸ್ವಲ್ಪ ಸಮಯ ಕೊಡಿ, ಪಂಜಾಬ್​ನಲ್ಲಿ ಪ್ರತಿಭಟನೆ ನಡೆಸುತ್ತೇವೆ: ಅಭಿಜಿತ್​ ದೀಪ್ಕೆ
  • ಪಂಜಾಬ್​​ನಲ್ಲಿ ನಡೆದಿರುವ ಪರೀಕ್ಷಾ ಅಕ್ರಮ
  • ನಮ್ಮಲ್ಲಿ ಯಾವುದೇ ಪೇಪರ್​​ ಲೀಕ್​ ಆಗೇ ಇಲ್ಲ; ಭಗವಂತ್​ ಮಾನ್​
ಪಂಜಾಬ್​: ಎನ್​ಟಿಎ ವತಿಯಿಂದ ನಡೆಯುವ ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನಲೆ ಕಾಕ್ರೋಜ್​ ಜನತಾ ಪಾರ್ಟಿ ವತಿಯಿಂದ ಒಂದು ತಿಂಗಳು ಹೋರಾಟ ನಡೆದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್​ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಈ ಪ್ರತಿಭಟನೆ ಯಶಸ್ವಿಯಾದ ಹಿನ್ನಲೆ, ಇತ್ತೀಚೆಗೆ ಪಂಜಾಬ್​ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪಶು ವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಅಕ್ರಮ ನಡೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಕಾಕ್ರೋಚ್ ಜನತಾ ಪಾರ್ಟಿ ಈ ವಿಷಯದಲ್ಲಿ ಕೂಡ ಪ್ರತಿಭಟನೆ ನಡೆಸಿ, ಪಂಜಾಬ್​​ನ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆಯಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.

ನಾವು ತಯಾರಿ ನಡೆಸುತ್ತಿದ್ದೇವೆ!

ಪಂಜಾಬ್​ನಲ್ಲಿ ಕೂಡ ಹೋರಾಟ ನಡೆಸಿ ಎಂಬ ಕೂಗು ಹೆಚ್ಚಾಗುತ್ತಿದ್ದಂತೆ, ಇದಕ್ಕ ಪ್ರತಿಕ್ರಿಯೆ ನೀಡಿರುವ ಕಾಕ್ರೋಜ್​ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್​ ದೀಪ್ಕೆ (Abhijeet Dipke on Punjab Protest), ನಮಗೆ ಸ್ವಲ್ಪ ಸಮಯವಕಾಶ ಕೊಡಿ, ಪಂಜಾಬ್​ನಲ್ಲಿ ಹೋರಾಟವನ್ನು ನಡೆಸಲು ನಾವು ಯೋಜನೆಯನ್ನು ರೂಪಿಸುತ್ತಿದ್ದೆವೆಂದು ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿ ನಾವು ಪಂಜಾಬ್​ ನತ್ತ ಗಮನ ಹರಿಸುತ್ತೇವೆಂದು ಹೇಳಿದ್ದಾರೆ.

ನಮ್ಮಲ್ಲಿ ಆಕ್ರಮ ನಡೆದೇ ಇಲ್ಲ!

ಇತ್ತ ಪಂಜಾಬ್​ನಲ್ಲಿ ಆಡಳಿತ ನಡೆಸುತ್ತಿರುವ ಆಮ್​ ಆದ್ಮಿ ಪಕ್ಷ, ನಮ್ಮ ರಾಜ್ಯದಲ್ಲಿ ಯಾವುದೇ ಪೇಪರ್​ ಸೋರಿಕೆ ಆಗಿಲ್ಲ. ನಮ್ಮ ಸರ್ಕಾರ ಕಳೆದ 4.5 ವರ್ಷದಿಂದ ಆಡಳಿತ ನಡೆಸುತ್ತಿದ್ದು, ಇಲ್ಲಿವರೆಗೆ ಯಾವುದೇ ಅಕ್ರಮ ನಡೆದಿಲ್ಲ.
ಆದರೆ ಈಗ ಕೇಳಿಬರುತ್ತಿರುವ ಅಕ್ರಮ ಆರೋಪದಲ್ಲಿ, ಎರಡು ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್​ ಬಳಸಿ ಅಕ್ರಮ ನಡೆಸಲು ಮುಂದಾದಾ ಕೆಲ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇಲ್ಲಿ ಯಾವುದೇ ಪೇಪರ್​ ಸೋರಿಕೆ ನಡೆದಿಲ್ಲ ಎಂದು ಸಿಎಂ ಭಗವಂತ್​ ಮಾನ್​ ತಿಳಿಸಿದ್ದಾರೆ. ಈಗ ನಮ್ಮ ರಾಜ್ಯಕ್ಕೆ ಹಾಗೂ ನಮ್ಮ ಸರ್ಕಾರಕ್ಕೆ ಕಳಂಕ ತರಲು ಈ ಈ ಕಾಂಗ್ರೆಸ್​ ಹಾಗೂ ಬಿಜೆಪಿ ಹಣ ನೀಡಿ ಸೋಷಿಯಲ್​ ಮೀಡಿಯಾನಲ್ಲಿ ಪೇಯ್ಡ್​ ಪ್ರಮೋಷನ್​ ನಡೆಸುತ್ತಿವೆ ಎಂದು ಆರೋಪಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net