ರ‍್ಯಾಂಗಿಂಗ್ ತಡೆಗಟ್ಟಲು ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಗಿಂಗ್ ವಿರೋಧಿ ಸಮಿತಿ ಮತ್ತು ನಿರಂತರ ನಿಗಾ ಇಡಲು ರ‍್ಯಾಂಗಿಂಗ್ ವಿರೋಧಿ ದಳಗಳನ್ನು ರಚಿಸುವುದು ಕಡ್ಡಾಯವಾಗಿದೆ. ಕ್ಯಾಂಪಸ್‌ನ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ದೂರು ಪೆಟ್ಟಿಗೆಗಳನ್ನು ಇಡುವುದು ಕಡ್ಡಾಯ. ಒಂದು ವೇಳೆ ರ‍್ಯಾಂಗಿಂಗ್ ನಡೆದಿರುವುದು ಸಾಬೀತಾದರೆ, ಆರೋಪಿ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡುವುದು, ವಿದ್ಯಾರ್ಥಿವೇತನ ರದ್ದುಗೊಳಿಸುವುದು, ಹಾಸ್ಟೆಲ್‌ನಿಂದ ಹೊರಹಾಕುವುದು, ಪರೀಕ್ಷೆ ಬರೆಯದಂತೆ ನಿರ್ಬಂಧಿಸುವುದು ಹಾಗೂ 25,000 ವರೆಗೆ ದಂಡ ವಿಧಿಸುವ ಅಧಿಕಾರ ಸಂಸ್ಥೆಗಿದೆ.