ಮದುವೆ ಬಗ್ಗೆ ಮನೆಯವರ ಕಿರಿಕಿರಿ: ನಡುಬೀದಿಯಲ್ಲಿ ತಲೆ ನುಣ್ಣಗೆ ಬೋಳಿಸಿಕೊಂಡ ಯುವತಿ; ವಿಡಿಯೋ ವೈರಲ್​! Woman Shaved her Head

ಮದುವೆ  ಕಿರಿಕಿರಿ ತಾಳಲಾರದೆ ತಲೆ ನುಣ್ಣಗೆ ಬೋಳಿಸಿಕೊಂಡ ಯುವತಿ
ಮದುವೆ ಕಿರಿಕಿರಿ ತಾಳಲಾರದೆ ತಲೆ ನುಣ್ಣಗೆ ಬೋಳಿಸಿಕೊಂಡ ಯುವತಿ
Published on

ಪ್ರಮುಖ ಮುಖ್ಯಾಂಶಗಳು

  • ಬಗ್ಗೆ ಮನೆಯವರ ಒತ್ತಾಯ
  • ಕಿರಿಕಿರಿ ತಾಳಲಾರದೆ ತಲೆ ನುಣ್ಣಗೆ ಬೋಳಿಸಿಕೊಂಡ ಯುವತಿ
  • ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಕೀರ್ತನಾ ಮೆನನ್ ವೈರಲ್ ವಿಡಿಯೋ
ವೈರಲ್​: ಮಕ್ಕಳು ಯೌವನಾವಸ್ಥೆ ತಲುಪುತ್ತಲೇ ಮನೆಯವರು ಮದುವೆ ಎಂಬ ರಾಗವನ್ನು ಹಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು 25-26 ವರ್ಷಕ್ಕೆ ಕಾಲಿಟ್ಟರೇ ಈ ವರ್ಷ ನಿನ್ನ ಮದುವೆಯನ್ನು ಮಾಡಿಯೇ ತೀರುತ್ತೆವೆಂಬ ಠರಾವನ್ನು ಹೊರಡಿಸುತ್ತಾರೆ.
ಭಾರತದ ಮನೆಗಳಲ್ಲಿ ಇವತ್ತಿಗೂ ಬೇಗ ಮದುವೆಯಾಗಿ, ಮಕ್ಕಳನ್ನು ಹೆತ್ತುಕೊಂಡರೆ ಅವರೊಬ್ಬ ಆದರ್ಶ ಗಂಡು/ ಹೆಣ್ಣು ಎಂಬ ನಂಬಿಕೆಯಿದೆ. ಈಗ ಇದೇ ರೀತಿ ಮನೆಯಲ್ಲಿ ಮದುವೆಯಾಗು ಎಂಬ ಕಿರಿಕಿರಿಯನ್ನು ತಾಳಲಾರದೆ ಯುವತಿಯೊಬ್ಬಳು ತೆಗೆದುಕೊಂಡಿರುವ ನಿರ್ಧಾರ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋನಲ್ಲೇನಿದೆ?

ಕೀರ್ತನಾ ಮೆನನ್​ ಎಂಬ ಯುವತಿ ಹಂಚಿಕೊಂಡಿರುವ ವಿಡಿಯೋನಲ್ಲಿ, ಆಕೆಯ ಮನೆಯಲ್ಲಿ ಅರೆಂಜ್​ ಮ್ಯಾರೇಜ್​ ಮಾಡುವ ಯೋಜನೆ ರೂಪಿಸಿದ್ದರಂತೆ. ಆದರೆ ಈ ಮದುವೆ ಕೀರ್ತನಾಗೆ ಇಷ್ಟವಿರದ ಕಾರಣ, ಆಕೆ ತನ್ನ ತಲೆ ಕೂದಲನ್ನು (Woman Shaved her Head) ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ.
ಕ್ಷೌರಿಕನು ಕೀರ್ತನಾಳ ತಲೆಯನ್ನು ನುಣ್ಣಗೆ ಬೋಳಿಸುತ್ತಿದ್ದರೆ, ಇಕೆ ಮಾತ್ರ ಒಂದು ಚೂರು ಅಳುಕಿಲ್ಲದೆ, ಗಂಭೀರವಾಗಿ ಕುಳಿತಿರುವ ವಿಡಿಯೋ ಈಗ ಎಲ್ಲೆಡೆ ಹಂಚಿಕೆಯಾಗುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಕೀರ್ತನಾಳ ತಲೆ ಬೋಳಿಸಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.
ಕೆಲವರು ಈ ಯುವತಿ ತನ್ನ ತಲೆ ಕೂದಲನ್ನೇ ತೆಗೆಸಿಕೊಂಡಿದ್ದಾಳೆಂದರೆ ಮನೆಯಲ್ಲಿ ಮದುವೆ ಬಗ್ಗೆ ಎಷ್ಟು ಹಿಂಸೆ ಮಾಡಿದ್ದಾರೆಂದು ತಿಳಿಯುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ತನಗೆ ಮದುವೆ ಬೇಡ ಎಂದು ತನ್ನ ಹೆತ್ತವರನ್ನೇ ಒಪ್ಪಿಸಲಾಗದವಳು, ಸಂಸಾರವನ್ನು ಹೇಗೆ ಮಾಡುವಳೋ? ಎಂದು ಕೀರ್ತನಾಳ ನಡೆಯನ್ನು ಪ್ರಶ್ನಿಸಿದ್ದಾರೆ.
ಮದುವೆ ಎನ್ನುವುದು ಕೇವಲ ಸಂಪ್ರದಾಯ ಮಾತ್ರವಲ್ಲ, ಇದು ನಿಸರ್ಗದ ನಿಯಮ. ಇಕೆ ತಲೆ ಬೋಳಿಸಿಕೊಳ್ಳುವುದು, ಬಿಡುವುದು ಆಕೆಯ ವೈಯಕ್ತಿಕ ಅಭಿಪ್ರಾಯ. ಆದರೆ ಎಲ್ಲರೂ ಇಕೆಯಂತೆ ಮದುವೆ ಬೇಡ ಎಂದರೆ, ಮಾನವ ಸಂಕುಲದ ನಾಶ ಖಂಡಿತ ಎಂದು ಮತ್ತೊಬ್ಬರು ನೀತಿ ಪಾಠವನ್ನು ಬೋಧಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net